WhatsApp ನಲ್ಲಿ ಬರುತ್ತಿದೆ ಇದುವರೆಗಿನ ಅತ್ಯಂತ ಜಬರ್ದಸ್ತ್ ವೈಶಿಷ್ಟ್ಯ

WhatsApp New Feature - ಶೀಘ್ರದಲ್ಲಿಯೇ WhatsApp ನಲ್ಲಿ ಇದುವರೆಗಿನ ಅತ್ಯಂತ ರೋಚಕ ವೈಶಿಷ್ಟ್ಯ ಬಿಡುಗಡೆಯಾಗುತ್ತಿದೆ. ಈ ವೈಶಿಷ್ಟ್ಯವನ್ನು ಪರಿಚಯಿಸಿದ ನಂತರ, ಸದಸ್ಯರು WhatsApp ಗ್ರೂಪ್ ಚಾಟ್‌ನಲ್ಲಿ ಮತ ಚಲಾಯಿಸಲು (Voting) ಸಾಧ್ಯವಾಗಲಿದೆ. 

Written by - Nitin Tabib | Last Updated : Mar 7, 2022, 01:50 PM IST
  • ಶೀಘ್ರದಲ್ಲಿಯೇ ವಾಟ್ಸ್ ಆಪ್ ನಿಂದ ಹೊಸ ವೈಶಿಷ್ಟ್ಯ ಬಿಡುಗಡೆ ಸಾಧ್ಯತೆ.
  • ವೈಶಿಷ್ಟ್ಯ ಬಳಸಿ ನೀವೂ ಕೂಡ ಗ್ರೂಪ್ ಚಾಟ್ ನಲ್ಲಿ ಪೋಲ್ ಕ್ರಿಯೇಟ್ ಮಾಡಬಹುದು
  • ರೋಲ್ ಔಟ್ ಯಾವಾಗ, ಅದರ ವಿಶೇಷತೆ ತಿಳಿಯಲು ಸುದ್ದಿ ಓದಿ
WhatsApp ನಲ್ಲಿ ಬರುತ್ತಿದೆ ಇದುವರೆಗಿನ ಅತ್ಯಂತ ಜಬರ್ದಸ್ತ್ ವೈಶಿಷ್ಟ್ಯ title=
WhatsApp Create Poll Feature (File Photo)

WhatsApp New Feature - ಶೀಘ್ರದಲ್ಲಿಯೇ WhatsApp ನಲ್ಲಿ ಇದುವರೆಗಿನ ಅತ್ಯಂತ ರೋಚಕ ವೈಶಿಷ್ಟ್ಯ ಬಿಡುಗಡೆಯಾಗುತ್ತಿದೆ. ಈ ವೈಶಿಷ್ಟ್ಯವನ್ನು ಪರಿಚಯಿಸಿದ ನಂತರ, ಸದಸ್ಯರು WhatsApp ಗ್ರೂಪ್ ಚಾಟ್‌ನಲ್ಲಿ ಮತ ಚಲಾಯಿಸಲು (Voting) ಸಾಧ್ಯವಾಗಲಿದೆ. ಇದು ಗ್ರೂಪ್ ಚಾಟ್‌ಗಳನ್ನು ಹೆಚ್ಚು ಮನರಂಜನೆಯನ್ನಾಗಿಸಲಿದೆ. ಈ ವೈಶಿಷ್ಟ್ಯದ ಮೂಲಕ ಸಮೀಕ್ಷೆಯನ್ನು (WhatsApp Create Poll Feature) ನಡೆಸುವ ಮೂಲಕ ಮೂಲಕ ಗುಂಪಿನ ಸದಸ್ಯರು ಯೋಜನೆ ಅಥವಾ ಪ್ರಶ್ನೆಯ ಕುರಿತು ಇತರ ಸದಸ್ಯರ ಅಭಿಪ್ರಾಯವನ್ನು ತಿಳಿದುಕೊಳ್ಳಲು ಸಾಧ್ಯವಾಗಲಿದೆ. ವಿಶೇಷವೆಂದರೆ ವಾಟ್ಸಾಪ್ ಗ್ರೂಪ್ ಚಾಟ್‌ಗಳಿಗಾಗಿ ಬರುವ ಈ ಪೋಲ್ ವೈಶಿಷ್ಟ್ಯವು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ನೊಂದಿಗೆ ರಕ್ಷಿಸಲ್ಪಡುತ್ತದೆ. ವಾಟ್ಸಾಪ್‌ನ (WhatsApp Status) ಈ ಹೊಸ ವೈಶಿಷ್ಟ್ಯದ ಕುರಿತು ಮಾಹಿತಿ ನೀಡುವ ಸ್ಕ್ರೀನ್‌ಶಾಟ್ ಅನ್ನು WABetaInfo ಹಂಚಿಕೊಂಡಿದೆ.

ಮುಂಬರುವ ವಾರಗಳಲ್ಲಿ ರೋಲ್ ಔಟ್
WABetaInfo ವರದಿಯ ಪ್ರಕಾರ, ಈ ವೈಶಿಷ್ಟ್ಯವು ಇನ್ನೂ ಅಭಿವೃದ್ಧಿಯ ಹಂತದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ, ಬೀಟಾ ಟೆಸ್ಟ್ ಮಾಡುವವರಿಗೆ  ಇದು ಇನ್ನೂ ಬಿಡುಗಡೆಯಾಗಿಲ್ಲ. ಕಂಪನಿಯು ಈ ವೈಶಿಷ್ಟ್ಯವನ್ನು ಯಾವಾಗ ಬಿಡುಗಡೆ ಮಾಡುತ್ತದೆ ಎಂಬುದರ ಕುರಿತು ಖಚಿತ ಮಾಹಿತಿ ಸಿಕ್ಕಿಲ್ಲ. ಆದರೂ ಕೂಡ ಮುಂಬರುವ ಕೆಲವು ವಾರಗಳಲ್ಲಿ ಇದು ಬೀಟಾ ಆವೃತ್ತಿಗೆ ರೋಲ್ ಔಟ್ ಆಗಲಿದೆ ಎಂಬುದನ್ನು ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ-BSNL ಹೊಸ ರಿಚಾರ್ಜ್ ಪ್ಲಾನ್ : ₹329 ಗೆ ಸಿಗಲಿದೆ 1000GB ಹೈ-ಸ್ಪೀಡ್ ಡೇಟಾ!

ವೈಶಿಷ್ಟ್ಯಕ್ಕೆ ಸಂಬಂಧಿಸಿದ ಹೊಸ ಮಾಹಿತಿ ಶೀಘ್ರದಲ್ಲಿಯೇ ಹೊರಬೀಳಲಿದೆ
ವಾಟ್ಸಾಪ್ ಗ್ರೂಪ್ ಪೋಲ್‌ನಲ್ಲಿ ಎಷ್ಟು ಸದಸ್ಯರು ಭಾಗವಹಿಸಬಹುದು ಎಂಬ ಬಗ್ಗೆ ಯಾವುದೇ ಮಾಹಿತಿ ಇನ್ನೂ ಹೊರಬಂದಿಲ್ಲ. ಸಮೀಕ್ಷೆಯು ಎಷ್ಟು ಸಮಯದವರೆಗೆ ಲೈವ್ ಆಗಿರುತ್ತದೆ ಎಂಬುದರ ಮಾಹಿತಿ ವರದಿಯಾಗಿಲ್ಲ. ಇದಲ್ಲದೆ, ಈ ವೈಶಿಷ್ಟ್ಯವನ್ನು ಬಳಸಿಕೊಂಡು ಒಂದೇ ಬಾರಿಗೆ ಗ್ರೂಪ್ ಚಾಟ್ ನಲ್ಲಿ ಎಷ್ಟು ಸಮೀಕ್ಷೆಗಳನ್ನು ರಚಿಸಬಹುದು ಎಂದೂ ಕೂಡ ತಿಳಿದುಬಂದಿಲ್ಲ. ವೈಶಿಷ್ಟ್ಯಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳು ಕೆಲವೇ ದಿನಗಳಲ್ಲಿ ಬಹಿರಂಗಗೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ-ATM ನಿಂದ ಕ್ಯಾಶ್ ಹಿಂಪಡೆಯುವಾಗ Green Light ಬಗ್ಗೆ ಗಮನ ಹರಿಸಿ, ಇಲ್ದಿದ್ರೆ ಖಾಲಿಯಾಗುತ್ತೆ ಖಾತೆ ಎಚ್ಚರ!

ಈ ವೈಶಿಷ್ಟ್ಯಗಳೂ ಕೂಡ ಶೀಘ್ರದಲ್ಲಿಯೇ ಸೇರ್ಪಡೆಯಾಗಲಿವೆ
ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ಹಲವು ಹೊಸ ವೈಶಿಷ್ಟ್ಯಗಳ ಮೇಲೆ  ಕಾರ್ಯನಿರ್ವಹಿಸುತ್ತಿದೆ. ಇವುಗಳಲ್ಲಿ ಒಂದು ಸಂದೇಶ ಪ್ರತಿಕ್ರಿಯೆ ವೈಶಿಷ್ಟ್ಯವಾಗಿದೆ. ಈ ವೈಶಿಷ್ಟ್ಯಕ್ಕಾಗಿ ಬಳಕೆದಾರರು ದೀರ್ಘ ಸಮಯದಿಂದ ಕಾಯುತ್ತಿದ್ದಾರೆ. ಈ ವೈಶಿಷ್ಟ್ಯವನ್ನು ಪರಿಚಯಿಸಿದ ನಂತರ, ಬಳಕೆದಾರರು ಸಂದೇಶಗಳಿಗೆ  ಎಮೊಜಿ ರೂಪದಲ್ಲಿ ತಮ್ಮ ಪ್ರತಿಕ್ರಿಯೆಯನ್ನು ನೀಡಲು ಸಾಧ್ಯವಾಗಲಿದೆ. ಇದರ ಹೊರತಾಗಿ, ಕಂಪನಿಯು ಮಲ್ಟಿ-ಡಿವೈಸ್ ಸಪೋರ್ಟ್ 2.0 ಮೇಲೂ ಸಹ ಕಾರ್ಯನಿರ್ವಹಿಸುತ್ತಿದೆ. ಅದರ ರೋಲ್‌ಔಟ್ ಬಳಿಕ, ಬಳಕೆದಾರರು ತಮ್ಮ WhatsApp ಖಾತೆಯನ್ನು ಈಗಿರುವುದಕ್ಕಿಂತ ಹೆಚ್ಚಿನ ಸಾಧನಗಳಿಗೆ ಸಂಪರ್ಕಿಸಲು ಸಾಧ್ಯವಾಗಲಿದೆ.

ಇದನ್ನೂ ಓದಿ-Facebook ID Hack: ಫೇಸ್ಬುಕ್ ಖಾತೆ ಹ್ಯಾಕ್ ಕುರಿತು ದೂರು ನೀಡಿದ ಅಧಿಕಾರಿಯ ಪತ್ನಿ, ಬಳಿಕ ಹ್ಯಾಕರ್ ನನ್ನು ನೋಡಿ ದಂಗಾಗಿದ್ದಾಳೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News