ನವದೆಹಲಿ : Smartphone Tips And Tricks : ಅನೇಕ ಕಂಪನಿಗಳು ಹೆಚ್ಚಿನ RAM ಮತ್ತು ಸ್ಟೋರೇಜ್ ನೊಂದಿಗೆ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿವೆ. ಆದರೆ ಇನ್ನು ಕೂಡಾ ಜನರು ಸ್ಟೋರೇಜ್ ಸಮಸ್ಯೆಯನ್ನು ಎದುರಿಸುತ್ತಲೇ ಇದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ, ಫೋಟೋಗಳು (Photos) ಅಥವಾ ವೀಡಿಯೊಗಳಿಂದಾಗಿ ಸ್ಟೋರೇಜ್ ತುಂಬಿ ಹೋಗುತ್ತದೆ. ಹೆವಿ ಅಪ್ಲಿಕೇಶನ್‌ಗಳಿಂದಾಗಿಯೂ, ಸ್ಟೋರೇಜ್ ಫುಲ್ (Storage full) ಆಗುತ್ತದೆ. ಈ ಕಾರಣದಿಂದಾಗಿ ಫೋನ್ ಹಾಂಗ್ ಆಗಲು ಆರಂಭವಾಗುತ್ತದೆ. ಮತ್ತು ಕಾರ್ಯನಿರ್ವಹಿಸುವಲ್ಲಿ ಸಾಕಷ್ಟು ತೊಂದರೆಗಳು ಎದುರಾಗುತ್ತವೆ. ಈ ಸಮಸ್ಯೆಗೂ ಸುಲಭ ಪರಿಹಾರವಿದೆ. ಇದನ್ನು ಅನುಸರಿಸಿದರೆ, ಫೋನ್ ನಲ್ಲಿ ಸ್ಪೇಸ್ ಸಮಸ್ಯೆಯೂ (Phone space) ಇರುವುದಿಲ್ಲ. ಫೋನ್ ಹಾಂಗ್ ಕೂಡಾ ಆಗುವುದಿಲ್ಲ.
cleaning app :
ನಿಮ್ಮ ಫೋನ್‌ನ ಮೆಮೊರಿಯನ್ನು ಖಾಲಿ ಮಾಡಬೇಕಾದರೆ ಪ್ಲೇ ಸ್ಟೋರ್‌ಗೆ (Play store) ಹೋಗಿ cleaning app ಡೌನ್‌ಲೋಡ್ ಮಾಡಿಕೊಳ್ಳಿ. ಪ್ಲೇ ಸ್ಟೋರ್‌ನಲ್ಲಿ ಅನೇಕ cleaning app ಗಳು ಲಭ್ಯವಿದೆ. ಇದು ನಿಮ್ಮ ಫೋನ್‌ನ ಮೆಮೊರಿಯನ್ನು ಖಾಲಿ ಮಾಡುತ್ತದೆ. ಈ ಅಪ್ಲಿಕೇಶನ್‌ಗಳು ಜಂಕ್ ಫೈಲ್‌ಗಳು, ಡ್ಯುಪ್ಲಿಕೆಟ್ ಫೈಲ್‌ಗಳು ಮತ್ತು ಅನೇಕ ದೊಡ್ಡ ಫೈಲ್‌ಗಳನ್ನು ಡಿಲೀಟ್ ಮಾಡುತ್ತವೆ. ಇದರಿಂದಾಗಿ ಫೋನ್‌ನಲ್ಲಿ ಸ್ಟೋರೇಜ್ ಸ್ಪೇಸ್ ಉಳಿಯುತ್ತದೆ.
ಇದನ್ನೂ ಓದಿ : Whatsapp ಗ್ರೂಪ್ ನಲ್ಲಿ ನಿಮ್ಮನ್ನು ಯಾರೂ ಸೇರಿಸದಂತೆ ತಡೆಯಲು ಈ ಟ್ರಿಕ್ ಬಳಸಿ
ಕ್ಲೌಡ್ ಸ್ಟೋರೇಜ್ :
ಅನೇಕ ಕಂಪನಿಗಳು ಸ್ಮಾರ್ಟ್‌ಫೋನ್‌ಗಳೊಂದಿಗೆ ಕ್ಲೌಡ್ ಸ್ಟೋರೇಜ್ (Cloud storage) ನೀಡುತ್ತವೆ. ನೀವು ಇದನ್ನು ಬಳಸಬಹುದು. ನಿಮ್ಮ ಫೋನ್‌ನಲ್ಲಿ ನೀವು ಹೆಚ್ಚಿನ ಫೋಟೋಗಳು ಅಥವಾ ವೀಡಿಯೊಗಳನ್ನು ಹೊಂದಿದ್ದರೆ, ಅವುಗಳನ್ನು ಇಲ್ಲಿ ಸೇವ್ ಮಾಡಬಹುದು. ಇದು ನಿಮ್ಮ ಫೋನ್‌ನ ಮೆಮೊರಿಯನ್ನು ಕಡಿಮೆ ಮಾಡುತ್ತದೆ. ಇನ್ನು ಅಗತ್ಯವಿರದ ಫೋಟೋ ಅಥವಾ ವೀಡಿಯೊಗಳನ್ನು ಡಿಲೀಟ್ ಮಾಡಬಹುದು.
ಟೆಂಪರರಿ ಫೈಲ್‌ಗಳನ್ನು ಡಿಲೀಟ್ ಮಾಡಿ :
ನಮ್ಮ ಫೋನ್‌ನಲ್ಲಿ ಹಲವು ರೀತಿಯ ಟೆಂಪರರಿ ಫೈಲ್‌ಗಳಿರುತ್ತವೆ. ಅದನ್ನು ಡಿಲೀಟ್ ಮಾಡದಿದ್ದರೂ, ಫೋನ್‌ನ ಮೆಮೊರಿ ತುಂಬುತ್ತದೆ. ಫೋನ್‌ನಲ್ಲಿರುವ ಸ್ಟೋರೇಜ್ ಅನ್ನು ತೆರವುಗೊಳಿಸಿದರೆ, ಫೋನ್‌ನಲ್ಲಿ ಉತ್ತಮ ಸ್ಟೋರೇಜ್ ಸ್ಪೇಸ್ (Storage space) ಇರುತ್ತದೆ.
ಇದನ್ನೂ ಓದಿ : Google Location History - ಈ ಸಂಗತಿಗಳು Googleಗೆ ನಿಮ್ಮ ಬಗೆಗಿನ ಎಲ್ಲ ಮಾಹಿತಿ ಒದಗಿಸುತ್ತವೆ. ಈ ರೀತಿ ಬ್ಲಾಕ್ ಮಾಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.