Viral Video: Onlineನಲ್ಲಿ ಫುಡ್ ಆರ್ಡರ್ ಮಾಡಿದಾತನಿಗೆ ಕೋಳಿ ಬದಲು ಬಂದಿದ್ದು ಮೂಳೆ, ಜೊತೆಗೊಂದು ಪತ್ರ!

ಸದ್ಯ ಈ ಪತ್ರ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲದೆ, ವೀಡಿಯೊಗೆ ಕಾಮೆಂಟ್‌ಗಳ ಮಹಾಪೂರವೇ ಹರಿದುಬರುತ್ತಿದೆ. ಟಿಕ್‌ಟಾಕ್‌ನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ, ಇದರಲ್ಲಿ ವ್ಯಕ್ತಿಯೊಬ್ಬರು ಆರ್ಡರ್ ಮಾಡಿದ ಆಹಾರದ ಪೊಟ್ಟಣವನ್ನು ತೋರಿಸುತ್ತಿದ್ದಾರೆ. ಅದರಲ್ಲಿ ಕೆಲವು ಕೋಳಿ ಮೂಳೆಗಳು ಮತ್ತು ಡೆಲಿವರಿ ಬಾಯ್ ತನ್ನ ದುಃಖವನ್ನು ವಿವರಿಸಿರುವ ಪತ್ರ ಕಂಡುಬರುತ್ತಿದೆ.

Written by - Bhavishya Shetty | Last Updated : Sep 3, 2022, 11:35 AM IST
    • ಆನ್ಲೈನ್ ಫುಡ್ ಆಹಾರದ ಬದಲಾಗಿ ಬಂದಿದ್ದು ಮೂಳೆಗಳು
    • ಮೂಳೆ ಮಾತ್ರವಲ್ಲ ಜೊತೆಗೊಂದು ಪತ್ರವೂ ಬಂದಿದೆ
    • ಈ ಪತ್ರ ಮಾತ್ರ ನಿಮ್ಮ ಹಸಿವನ್ನು ಒಂದೇ ಬಾರಿಗೆ ತಣಿಸುತ್ತದೆ
Viral Video: Onlineನಲ್ಲಿ ಫುಡ್ ಆರ್ಡರ್ ಮಾಡಿದಾತನಿಗೆ ಕೋಳಿ ಬದಲು ಬಂದಿದ್ದು ಮೂಳೆ, ಜೊತೆಗೊಂದು ಪತ್ರ! title=
Food

ಒಂದು ಬಾರಿ ಯೋಚಿಸಿ, ನಿಮಗೆ ತುಂಬಾ ಹಸಿವಾಗಿದೆ ಎಂದು ಫುಡ್ ನ್ನು ಆನ್ ಲೈನ್ ನಲ್ಲಿ ಆರ್ಡರ್ ಮಾಡುತ್ತೀರಿ. ಆದರೆ ಆಹಾರ ಬಂದ ಬಳಿಕ ಅದನ್ನು ನೀವು ಕಂಡಾಗ, ಅದರಲ್ಲಿ ಆಹಾರದ ಬದಲಾಗಿ ಮೂಳೆಗಳು ಕಂಡರೆ ನಿಮಗೆ ಏನನಿಸುತ್ತದೆ. ಹೌದು ಇಂತಹದ್ದೊಂದು ಪ್ರಸಂಗ ನಡೆದಿದೆ. ಮೂಳೆ ಮಾತ್ರವಲ್ಲ ಜೊತೆಗೊಂದು ಪತ್ರವೂ ಬಂದಿದೆ. ಈ ಪತ್ರ ಮಾತ್ರ ನಿಮ್ಮ ಹಸಿವನ್ನು ಒಂದೇ ಬಾರಿಗೆ ತಣಿಸುತ್ತದೆ.

ಸದ್ಯ ಈ ಪತ್ರ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲದೆ, ವೀಡಿಯೊಗೆ ಕಾಮೆಂಟ್‌ಗಳ ಮಹಾಪೂರವೇ ಹರಿದುಬರುತ್ತಿದೆ.

ಇದನ್ನೂ ಓದಿ: ಭಾರತೀಯ ಸೇನೆಯಲ್ಲಿ ಬಂಪರ್ ನೇಮಕಾತಿ, ತಿಂಗಳಿಗೆ 63,200 ವರೆಗೆ ವೇತನ

ಟಿಕ್‌ಟಾಕ್‌ನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ, ಇದರಲ್ಲಿ ವ್ಯಕ್ತಿಯೊಬ್ಬರು ಆರ್ಡರ್ ಮಾಡಿದ ಆಹಾರದ ಪೊಟ್ಟಣವನ್ನು ತೋರಿಸುತ್ತಿದ್ದಾರೆ. ಅದರಲ್ಲಿ ಕೆಲವು ಕೋಳಿ ಮೂಳೆಗಳು ಮತ್ತು ಡೆಲಿವರಿ ಬಾಯ್ ತನ್ನ ದುಃಖವನ್ನು ವಿವರಿಸಿರುವ ಪತ್ರ ಕಂಡುಬರುತ್ತಿದೆ. ತುಂಬಾ ಹಸಿದಿದ್ದರಿಂದ ಚಿಕನ್ ತಿಂದಿದ್ದೇನೆ ಎಂದು ಡೆಲಿವರಿ ಬಾಯ್ ಹೇಳಿದ್ದಾನೆ. ಫುಡ್ ಬಾಕ್ಸ್ ಕ್ಲೀನ್ ಆಗಿದ್ದರೂ ಆರ್ಡರ್ ಮಾಡಿದವರ ಡ್ರಿಂಕ್ ಸೇಫ್ ಆಗಿತ್ತು. ಆದರೆ ಇದನ್ನು ನೋಡಿ ಆ ವ್ಯಕ್ತಿಯೂ ತುಂಬಾ ಕೋಪಗೊಂಡಿರುವುದು ಮಾತ್ರ ಸತ್ಯ.   

ಆಗಸ್ಟ್ ತಿಂಗಳಿನಲ್ಲಿ ಪೋಸ್ಟ್ ಮಾಡಲಾದ ಈ ವೀಡಿಯೊವನ್ನು ಇಲ್ಲಿಯವರೆಗೆ 2 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಡೆಲಿವರಿ ಬಾಯ್ ತಾನು ಈ ಆಹಾರವನ್ನು ಸೇವಿಸಿದ್ದೇನೆ ಎಂದು ಕ್ಷಮಿಸಿ ಎಂದು ಪತ್ರದಲ್ಲಿ ಬರೆದಿದ್ದಾನೆ. “ನೀವು ನನ್ನ ಆಹಾರದ ಬಿಲ್ ಪಾವತಿಸಿದ್ದೀರಿ ಎಂದು ಭಾವಿಸುತ್ತೇನೆ. ನಾನು ತುಂಬಾ ಕುಗ್ಗಿದ್ದು, ಈ ಕೆಲಸವನ್ನು ಸಹ ಬಿಡುತ್ತಿದ್ದೇನೆ” ಎಂದು ಪತ್ರದಲ್ಲಿ ಬರೆದಿದ್ದಾನೆ. 

ಇದನ್ನೂ ಓದಿ: Viral News: ಹೆಂಡತಿಯ ತೂಕ ಹೆಚ್ಚಾಗಿದ್ದಕ್ಕೆ ಕೋಪಗೊಂಡು ವಿಚ್ಛೇದನ ನೀಡಿದ ಪತಿ!

ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋಗೆ ಸಾಕಷ್ಟು ಕಾಮೆಂಟ್‌ಗಳು ಬರುತ್ತಿವೆ. ವೀಡಿಯೊವನ್ನು ಅಪ್‌ಲೋಡ್ ಮಾಡಿದ ವ್ಯಕ್ತಿ ಈಗ ಇದನ್ನು ಏನು ಮಾಡಬೇಕು ಎಂದು ಜನರನ್ನು ಕೇಳಿದ್ದಾರೆ. ಜನರು ಈ ವಿಷಯದ ಬಗ್ಗೆ ಸಾಕಷ್ಟು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಒಂದಕ್ಕಿಂತ ಹೆಚ್ಚು ತಮಾಷೆಯ ಸಲಹೆಗಳೊಂದಿಗೆ ಕಾಮೆಂಟ್ ಬಾಕ್ಸ್ ತುಂಬಿಹೋಗಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News