ಗರಿ ಬಿಚ್ಚಿ ಮುಗಿಲೆತ್ತರಕ್ಕೆ ಹಾರಿದ ನವಿಲು ! ಮಯೂರದ ಅಪರೂಪದ ವಿಡಿಯೋ ಇಲ್ಲಿದೆ

Peocock Flying video:ಇಲ್ಲಿ  ನಾವು ಒಂದು ವಿಚಿತ್ರದ ಬಗ್ಗೆಯೇ ಹೇಳುತ್ತಿದ್ದೇವೆ. ಗರಿ ಬಿಚ್ಚಿ ಕುಣಿಯುವ ನವಿಲು ಮುಗಿಲೆತ್ತರಕ್ಕೆ ಹಾರಿದೆ ಎಂದರೆ ನೀವು ನಂಬುತ್ತೀರಾ ? ನಂಬಲೇ ಬೇಕು, ಯಾಕೆಂದರೆ ಇದು ಸತ್ಯ.  

Written by - Ranjitha R K | Last Updated : Jul 11, 2023, 03:25 PM IST
  • ನವಿಲು ಒಂದು ಸುಂದರ ಪಕ್ಷಿ
  • ಸೌಂದರ್ಯದ ಗಣಿ ನವಿಲು
  • ನವಿಲು ಹಾರುವ ವಿಡಿಯೋ ಇಲ್ಲಿದೆ
ಗರಿ ಬಿಚ್ಚಿ ಮುಗಿಲೆತ್ತರಕ್ಕೆ ಹಾರಿದ ನವಿಲು ! ಮಯೂರದ ಅಪರೂಪದ ವಿಡಿಯೋ ಇಲ್ಲಿದೆ   title=

Peocock Flying video : ಆಗಸದಲ್ಲಿಕಾರ್ಮೋಡ ತುಂಬಿ ಇನ್ನೇನು ಮಳೆಯಾಗುತ್ತದೆ ಎನ್ನುವಾಗ ನವಿಲು ತನ್ನ ಸುಂದರವಾದ ಗರಿ ಬಿಚ್ಚಿ ಕುಣಿದಾಡಲು ಆರಂಭಿಸುತ್ತದೆ.  ಹೀಗೆ ಗರಿ ಬಿಚ್ಚಿ ನಾಟ್ಯವಾಡುವ ನವಿಲನ್ನು ನೋಡುವುದೇ ಚೆಂದ. ನವಿಲು ಅತ್ಯಂತ ಸುಂದರ ಪಕ್ಷಿ. ಅದರಲ್ಲೂ ಗರಿ ಬಿಚ್ಚಿದರೆ ಅದರ ಸೌಂದರ್ಯಕ್ಕೆ ಮಾರು ಹೋಗದವರೇ ಇಲ್ಲ. ನವಿಲಿನ ದೇಹ ತೂಕದ ಕಾರಣದಿಂದಾಗಿ ಅದು ಎಲ್ಲಾ ಪಕ್ಷಿಗಳಂತೆ ಹಾರುವುದಿಲ್ಲ. ಹಾರುವುದು ಅದಕ್ಕೆ ಸಾಧ್ಯವಾಗುವುದಿಲ್ಲ. ಇದು ನಾವು ನೀವು ತಿಳಿದಿರುವ ಸಂಗತಿ. ಪಾಠಗಳಲ್ಲಿಯೂ ಇದನ್ನೇ ಓದಿದ್ದೇವೆ. ಆದರೆ ಒಮ್ಮೊಮ್ಮೆ ಈ ಪ್ರಕೃತಿಯಲ್ಲಿ ಕೆಲವು ವಿಚಿತ್ರಗಳು ಘಟಿಸಿ ಬಿಡುತ್ತವೆ. ಹೌದು ಇಲ್ಲಿ ಕೂಡಾ ನಾವು ಒಂದು ವಿಚಿತ್ರದ ಬಗ್ಗೆಯೇ ಹೇಳುತ್ತಿದ್ದೇವೆ. ಗರಿ ಬಿಚ್ಚಿ ಕುಣಿಯುವ ನವಿಲು ಮುಗಿಲೆತ್ತರಕ್ಕೆ ಹಾರಿದೆ ಎಂದರೆ ನೀವು ನಂಬುತ್ತೀರಾ ? ನಂಬಲೇ ಬೇಕು, ಯಾಕೆಂದರೆ ಇದು ಸತ್ಯ.  

ಇತ್ತಿಚಿನ ದಿನಗಳಲ್ಲಿ ನವಿಲಿನ ವಿಡಿಯೋವೊಂದು ವೈರಲ್ ಆಗುತ್ತಿದೆ. ಆ ವೈರಲ್ ವಿಡಿಯೋದಲ್ಲಿ ನವಿಲು ಹಾರಾಡುವುದನ್ನು ಕಾಣಬಹುದು. ಇಲ್ಲಿ ಎರಡು ನವಿಲುಗಳು ಒಟ್ಟಿಗೆ ಹೆಜ್ಜೆ ಹಾಕಿಕೊಂಡು ಬರುತ್ತಿರುತ್ತದೆ. ಅವುಗಳ ಪೈಕಿ ಒಂದು ನವಿಲು ಇದ್ದಕ್ಕಿದ್ದಂತೆ ಮುಗಿಲೆತ್ತರಕ್ಕೆ ಹಾರಿ ಬಿಡುತ್ತದೆ. ನವಿಲು ಈ ಎತ್ತರಕ್ಕೆ ಹಾರುವ ದೃಶ್ಯ ಒಂದು ಸೋಜಿಗವೇ ಸರಿ. 

ಇದನ್ನೂ ಓದಿ ಮೆಟ್ರೋದಲ್ಲಿ ಕಿಸ್‌ ಆಯ್ತು.. ಹೇರ್‌ ಸ್ಟ್ರೇಟನಿಂಗ್‌ ಆಯ್ತು.. ಇದೀಗ ಕಪಾಳಮೋಕ್ಷದ ವಿಡಿಯೋ ವೈರಲ್‌

ಇಲ್ಲಿ ಜೊತೆಯಲ್ಲಿ ಬರುತ್ತಿರುವ ನವಿಲಿಗೂ ತನ್ನ ಜೊತೆಗಾರ ಈಗ ಆಗಸದೆತ್ತರಕ್ಕೆ ಹಾರಿ ಬಿಡುತ್ತಾನೆ ಎನ್ನುವ ಸುಳಿವು ಇತ್ತೋ ಇಲ್ಲವೋ? ಪಾಪ ಅದು ಅದರ ಪಾಡಿಗೆ ನಡೆದುಕೊಂಡೇ ಹೋಗುತ್ತಿದೆ. ಆದರೆ, ಅದರ ಜೊತೆಗಾರ ಮಾತ್ರ ನಾನು ಬೇರೆ ಹಕ್ಕಿಗಳಿಗೆ ಕಡಿಮೆ ಇಲ್ಲ ಎನ್ನುವಂತೆ ಪುರ್ರನೆ ಹಾರಿ ಬಿಟ್ಟಿದೆ. 

Majestic Flight. 🌳🦚😍pic.twitter.com/7dAHcV19P1

ಇದನ್ನೂ ಓದಿ : Viral Video : ಜೋರು ಮಳೆಯಲ್ಲಿ ತುಮ್‌ ಸೆ ಹಿ ಹಾಡನ್ನು ಮರುಸೃಷ್ಟಿಸಿದ ರೊಮ್ಯಾಂಟಿಕ್‌ ಕಪಲ್‌

ಈ ವಿಡಿಯೋವನ್ನು ನೋಡಿದಾಗ ಪ್ರಕೃತಿ ನಿಜಕ್ಕೂ ವಿಚಿತ್ರ ಎನ್ನುವುದನ್ನು ನಾವು ಒಪ್ಪಿಕೊಳ್ಳಲೇಬೇಕು. ನಮ್ಮ ಊಹೆಗೂ ನಿಲುಕದ ಅದೆಷ್ಟೋ ಸೋಜಿಗ ಈ ಪ್ರಕೃತಿಯಲ್ಲಿ ನಡೆದು ಹೋಗುತ್ತವೆ. ನವಿಲಿನ ಈ ಅದ್ಭುತ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿ @CosmicGaiaX ಎಂಬ ಖಾತೆಯಲ್ಲಿ ಶೇರ್ ಮಾಡಲಾಗಿದೆ. 'ಮೆಜೆಸ್ಟಿಕ್ ಫ್ಲೈಟ್' ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಕೇವಲ 10 ಸೆಕೆಂಡ್‌ಗಳ ವೀಡಿಯೋವನ್ನು ಇದುವರೆಗೆ 5 ಮಿಲಿಯನ್ ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಈ ವಿಡಿಯೋಗೆ ಸಾಕಷ್ಟು ಕಾಮೆಂಟ್‌ಗಳು ಕೂಡ ಬಂದಿವೆ.

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

 

Trending News