Viral Video : ಗೂಳಿಯ ಕೊಂಬು ಹಿಡಿದು ಫೋಟೋಗೆ ಫೋಸ್ ನೀಡುತ್ತಿದ್ದ ಯುವಕ .! ಮುಂದೆ ಆಗಿದ್ದು ?

Viral Video : ಈ ವಿಡಿಯೋ ನೋಡಿ ಅ ಯುವಕನ ಬಗ್ಗೆ ಮರುಗಬೇಕೋ ? ನಗಬೇಕೋ ? ತಿಳಿಯುವುದಿಲ್ಲ. ನಿಜ ಹೇಳಬೇಕೆಂದರೆ ಫೋಟೋ ತೆಗೆದುಕೊಳ್ಳಬೇಕು ಎನ್ನುವ ಭರದಲ್ಲಿ ಯುವಕ ಎಲ್ಲಾ ಮಿತಿಗಳನ್ನೂ ದಾಟಿದ್ದಾನೆ  ಎಂದರೆ ತಪ್ಪಲ್ಲ.   

Written by - Ranjitha R K | Last Updated : Nov 30, 2022, 04:46 PM IST
  • ಅಪಾಯ ತಂದ ಹುಡುಗನ ಫೋಟೋ ಕ್ರೇಜ್
  • ಗೂಳಿಯ ಜೊತೆಗೆ ಫೋಟೋಗೆ ನಿಂತ ಯುವಕ
  • ವೈರಲ್ ಆಯಿತು ಯುವಕನ ವಿಡಿಯೋ
Viral Video : ಗೂಳಿಯ ಕೊಂಬು ಹಿಡಿದು ಫೋಟೋಗೆ ಫೋಸ್ ನೀಡುತ್ತಿದ್ದ ಯುವಕ .! ಮುಂದೆ ಆಗಿದ್ದು ? title=
Viral video (photo twitter)

Viral Video : ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರಿಗೆ  ಎಲ್ಲೆಂದರಲ್ಲಿ ಫೋಟೋ ತೆಗೆದುಕೊಳ್ಳುವ ಹುಚ್ಚು. ಅದರಲ್ಲೂ ಸೆಲ್ಫಿ ಕ್ರೇಜ್ ತುಸು ಹೆಚ್ಚೇ ಎಂದರೆ ತಪ್ಪಲ್ಲ. ಹೀಗೆ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಿಗೆ ಹಾಕಬೇಕೆನ್ನುವ ಭರದಲ್ಲಿ ಅಪಾಯವನ್ನು ಕೂಡಾ ಲೆಕ್ಕಿಸದೆ ಫೋಟೋ ತೆಗೆದುಕೊಳ್ಳಲು ಮುಂದಾಗುತ್ತಾರೆ. ಹೀಗೆ ಫೋಟೋ ತೆಗಿಸಿಕೊಳ್ಳಲು ಹೋಗಿ ಪ್ರಾಣ ಕಳೆದುಕೊಳ್ಳುವುದು, ಕೈ ಕಾಲಿಗೆ ಏಟು ಮಾಡಿಕೊಳ್ಳುವುದು ಸಾಮಾನ್ಯವಾಗಿ ಬಿಟ್ಟಿದೆ. ಕೈಯ್ಯಲ್ಲಿ ಸ್ಮಾರ್ಟ್ ಫೋನ್ ಇದ್ದರೆ ಸಾಕು ಫೋಟೋ ತೆಗೆಸಿಕೊಳ್ಳಲು ಆರಂಭಿಸಿ ಬಿಡುತ್ತಾರೆ.  ಇಂಥದ್ದೇ ವಿಡಿಯೋ ವೊಂದು ಇದೀಗ ವೈರಲ್ ಆಗುತ್ತಿದೆ.  ಈ ವಿಡಿಯೋ ನೋಡಿ ಅ ಯುವಕನ ಬಗ್ಗೆ ಮರುಗಬೇಕೋ ? ನಗಬೇಕೋ ? ತಿಳಿಯುವುದಿಲ್ಲ. ನಿಜ ಹೇಳಬೇಕೆಂದರೆ ಫೋಟೋ ತೆಗೆದುಕೊಳ್ಳಬೇಕು ಎನ್ನುವ ಭರದಲ್ಲಿ ಯುವಕ ಎಲ್ಲಾ ಮಿತಿಗಳನ್ನೂ ದಾಟಿದ್ದಾನೆ  ಎಂದರೆ ತಪ್ಪಲ್ಲ. 

 ಗೂಳಿ ಜೊತೆ ಸೆಲ್ಫಿ : 
 ಗೂಳಿ ಅದೆಲ್ಲೂ ದೂರದಲ್ಲಿ ನಿಂತಿದೆ ಎಂದರೆ ಆ ದಾರಿಯನ್ನು ತಪ್ಪಿಸಿಕೊಂಡು ಹೋಗುವವರಿದ್ದಾರೆ. ಯಾಕೆಂದರೆ ಗೂಳಿಗೆ ಸಿಟ್ಟು ಬಂದರೆ ಅದು ಯಾವ ಹಂತಕ್ಕೆ ಬೇಕಾದರೂ ತಲುಪಿ ಬಿಡುತ್ತದೆ. ಏನೂ ಮಾಡದೇ ಇದ್ದರೂ ಗೂಳಿ ಕೆಲವೊಮ್ಮೆ ವ್ಯಕ್ತಿಯನ್ನು ಎತ್ತಿ ಎಸೆಯುತ್ತದೆ. ಅಂಥದ್ದರಲ್ಲಿ ಈ ಯುವಕ ಗೂಳಿಯ ಜೊತೆಗೇ  ಫೋಟೋ ತೆಗೆಯಲು ಮುಂದಾಗಿದ್ದಾನೆ. ಅದು ಕೂಡಾ ಗೂಳಿ ಪಕ್ಕದಲ್ಲಿ ಸುಮ್ಮನೆ ನಿಂತು ಫೋಟೋ ತೆಗೆಸಿಕೊಳ್ಳುತ್ತಿದ್ದಾನೆ ಎಂದರೆ ಒಂದು ಕ್ಷಣಕ್ಕೆ ಒಪ್ಪಬಹುದು. 
 
 ಇದನ್ನೂ ಓದಿ : Viral Video: ಅತ್ತಿಗೆಯ ಕೈ ಹಿಡಿದು ಡ್ಯಾನ್ಸ್ ಮಾಡಿದ ಮೈದುನ, ಮುಂದೇನಾಯ್ತು ಗೊತ್ತಾ?

ಆದರೆ ಈ ಯುವಕ ಗೂಳಿಯ ಕೊಂಬನ್ನು ತನ್ನ ಎರಡೂ ಕೈಗಳಿಂದ ಹಿಡಿದಿಟ್ಟು ಕೊಂಡಿದ್ದಾನೆ. ತನ್ನೆಲ್ಲಾ ಭಾರವನ್ನು ಗೂಳಿಯ ಮೇಲೆ ಹಾಕಿದ್ದಾನೆ.   ಹೀಗೆ ಬಹಳಷ್ಟು ಹೊತ್ತು ನಿಂತಿದ್ದಾನೆ. ಗೂಳಿಗೂ ಸಿಟ್ಟು ನೆತ್ತಿಗೇರಿರಬೇಕು. ಯುವಕನ್ನು ಕೊಂಬಿನಿಂದ ಎತ್ತಿ ಬಿಸಾಡಿ ಬಿಡುತ್ತದೆ. ಯುವಕ ಫೋಟೋ ತೆಗೆಸಿಕೊಳ್ಳುವುದರಲ್ಲಿ ಎಷ್ಟು ಮಗ್ನನಾಗಿದ್ದ ಎಂದರೆ ಗೂಳಿಯ ನಡೆಯ ಬಗ್ಗೆ ಆತನ ಗಮನ ಹೋಗಲೇ ಇಲ್ಲ.    

ವೀಡಿಯೊವನ್ನು ಇಲ್ಲಿ ವೀಕ್ಷಿಸಿ:

 

 ಇದನ್ನೂ ಓದಿ : Viral Video: ಚಾಮರಾಜನಗರದ ಜಮೀನಿನಲ್ಲಿ ಜೋಡಿ‌ ಹುಲಿ ಪ್ರತ್ಯಕ್ಷ- ಆತಂಕದಲ್ಲಿ ಗ್ರಾಮಸ್ಥರು

ಈ ವೀಡಿಯೋ ನೋಡಿದರೆ ಬಾಲಕನಿಗೆ ಗಂಭೀರ ಗಾಯಗಳಾಗಿರುವಂತೆ ಅನ್ನಿಸುತ್ತದೆ. ಗೂಳಿ ಆ ಯುವಕನ ತಲೆ ರಸ್ತೆಗೆ ಬಡಿಯುವಂತೆ ಎತ್ತಿ ಬಿಸಾಡಿದೆ. ಈ ವೀಡಿಯೊವನ್ನು @TheBest_Viral ಹೆಸರಿನ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಸಾಕಷ್ಟು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಮಾತ್ರವಲ್ಲ ಈ ವಿಡಿಯೋ ಬಗ್ಗೆ ಕಾಮೆಂಟ್ ಕೂಡಾ ಮಾಡಿದ್ದಾರೆ. 

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆಕ್ಲಿಕ್ ಮಾಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

 

Trending News