ಬೆಂಗಳೂರು : ನಾಯಿ ಅತ್ಯಂತ ಪ್ರಾಮಾಣಿಕ ಪ್ರಾಣಿ. ಅದು ಯಾವುದೇ ಕಾರಣಕ್ಕೂ ತನ್ನ ಮಾಲೀಕನ ವಿರುದ್ದ ದನಿ ಎತ್ತುವುದಿಲ್ಲ. ಗೊತ್ತಿದ್ದೂ ತಪ್ಪಾಗಿದ್ದರೂ ಗೊತ್ತಿಲ್ಲದೇ ತಪ್ಪಾಗಿದ್ದರೂ ನಾಯಿ ತನ್ನ ಮಾಲೀಕನಿಗೆ ಪ್ರೀತಿಯ ಪೂರವನ್ನು ಮಾತ್ರ ಹರಿಸುತ್ತದೆ. ನಾಯಿಗೆ ಒಂದು ಹಿಡಿ ಪ್ರೀತಿ ತೋರಿಸಿದರೆ ಸಾಕು ಅದು ಪ್ರೀತಿಯ ಸಾಗರವನ್ನೇ ನಮ್ಮ ಮೇಲೆ ಎರೆಯುತ್ತದೆ. ಇದಕ್ಕೆ ವಿರುದ್ಧವಾಗಿ ಬೆಕ್ಕು. ನೋಡಲು ಮಾತ್ರ ಈ ಬೆಕ್ಕುಗಳು ಸುಂದರವಾಗಿರುತ್ತವೆ. ಬೆಕ್ಕನ್ನು ಎಷ್ಟೇ ಮುದ್ದಾಗಿ ಸಾಕಿದರೂ ಅದು ತನ್ನ ಮನಸ್ಸಿಗೆ ಬೇಕಾದಂತೆಯೇ ನಡೆದುಕೊಳ್ಳುವುದು. ಯಾವಾಗ ಅದಕ್ಕೆ ಮನೆ ಸಾಕು ಎಂದೆನಿಸುತ್ತದೆಯೋ ಅದು ಯಾರ ಬಗ್ಗೆಯೂ ತಲೆಕೆಡಿಸಿಕೊಳ್ಳುವುದಿಲ್ಲ. ತನ್ನ ಪಾಡಿಗೆ ತನ್ನ ಹಾದಿ ಹಿಡಿದು ಬಿಡುತ್ತದೆ.
ಬೆಕ್ಕುಗಳು ಅತ್ಯಂತ ನಿಗೂಢ ಪ್ರಾಣಿ. ಅದರ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಅಷ್ಟೊಂದು ಸುಲಭವಲ್ಲ. ನಾಯಿಗೆ ತರಬೇತಿ ನೀಡಿದಷ್ಟು ಸುಲಭವಾಗಿ ಬೆಕ್ಕಿಗೆ ತರಬೇತಿ ನೀಡುವುದು ಕೂಡಾ ಸಾಧ್ಯವಾಗುವುದಿಲ್ಲ. ಬೆಕ್ಕಿಗೆ ತರಬೇತಿ ನೀಡುವುದು ನಿಜಕ್ಕೂ ಸವಾಲಿನ ಕೆಲಸ. ಈ ಬೆಕ್ಕುಗಳು ತಮಗೆ ಬೇಕಾದುದನ್ನೇ ಮಾಡುತ್ತವೆ. ತಮ್ಮ ಮಾಲೀಕರ ಭಾವನೆಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ಬೆಕ್ಕಿನ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ : ಬರಿಗೈಯಲ್ಲಿ ಹಾವು ಹಿಡಿದು ಮಹಿಳೆ ಸಾಹಸ- ವಾಚ್ ವಿಡಿಯೋ
ವೀಡಿಯೊದಲ್ಲಿ, ಸಾಕಿದ ಬೆಕ್ಕು ಯಾವುದೇ ಸ್ಪಷ್ಟ ಕಾರಣವಿಲ್ಲದೆ ತನ್ನ ಮಾಲೀಕರ ಮೇಲೆ ಇದ್ದಕ್ಕಿದ್ದಂತೆ ದಾಳಿ ಮಾಡುವುದನ್ನು ನೋಡಬಹುದು. ಒಬ್ಬ ವ್ಯಕ್ತಿಯು ಬೆಕ್ಕಿಗೆ ತೊಂದರೆಯಾಗದಂತೆ ರೆಫ್ರಿಜರೇಟರ್ ಅನ್ನು ಮನೆಯ ಒಂದು ಪ್ರದೇಶದಿಂದ ಇನ್ನೊಂದಕ್ಕೆ ಸ್ಥಳಾಂತರಿಸುವುದನ್ನು ವೀಡಿಯೊದಲ್ಲಿ ಕಾಣಿಸುತ್ತದೆ. ಇದ್ದಕ್ಕಿದ್ದಂತೆ, ಬೆಕ್ಕು ತನ್ನ ಮಾಲೀಕರ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತದೆ.
ಬೆಕ್ಕಿನ ದಾಳಿಯಿಂದ ತಪ್ಪಿಸಿಕೊಳ್ಳಲು ಮನೆ ಮಾಲೀಕ ಕೂಡಾ ಮನೆ ತುಂಬಾ ಓಡಾಡುತ್ತಾನೆ. ಬೆಕ್ಕು ದಾಳಿ ಮುಂದುವರಿಸಿದ್ದರಿಂದ ಬಾಗಿಲಿನ ಹಿಂದೆ ಅಡಗಿಯೂ ಕುಳಿತುಕೊಳ್ಳುತ್ತಾನೆ. ಆದರೆ ಬೆಕ್ಕು ಬಿಡಬೇಕಲ್ಲ, ಅಲ್ಲಿಗೂ ನುಗ್ಗಿ ಬಿಡುತ್ತದೆ.
Cat owner suddenly gets attacked by his cat unprovoked and for no reason pic.twitter.com/X1TeAEFZCT
— CCTV IDIOTS (@cctvidiots) August 6, 2023
ಇದನ್ನೂ ಓದಿ : ಬಾಯಿಂದ ಹೊಗೆ ಉಗುಳುತ್ತೇ ಈ ಸ್ಮೋಕಿಂಗ್ ಹಕ್ಕಿ... ನಂಬಿಕೆ ಇಲ್ಲಾ ಅಂದ್ರೆ ನೀವೇ ನೋಡಿ!
ಕೊಠಡಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಇಡೀ ಘಟನೆ ದಾಖಲಾಗಿದೆ. ಆ ಸಿಸಿಟಿವಿ ವಿಡಿಯೋ ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಸಿಸಿಟಿವಿ ಫೂಟೇಜ್‌ನಲ್ಲಿರುವ ದಿನಾಂಕದ ಪ್ರಕಾರ, ಈ ಘಟನೆಯು ಈ ವರ್ಷದ ಮೇ ತಿಂಗಳಲ್ಲಿ ನಡೆದಿದೆ. ಈ ವಿಡಿಯೋವನ್ನು @CCTVidiots ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ವೀಡಿಯೊವನ್ನು ಹಂಚಿಕೊಂಡಾಗಿನಿಂದ, ಇದು 9.4 ಮಿಲಿಯನ್ ವೀಕ್ಷಣೆ ಮತ್ತು 42k ಲೈಕ್‌ಗಳನ್ನು ಪಡೆದುಕೊಂಡಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ