ಅಷ್ಟೆತ್ತರದ ಗೋಡೆ ಜಿಗಿದು ಮೆಲೇರಿದ ಬೆಕ್ಕು ! ವೈರಲ್ ಆಗಿದೆ ಸ್ಪೈಡರ್ ಕ್ಯಾಟ್ ವಿಡಿಯೋ

Cat Viral Video : ಬೆಕ್ಕು ಹಲವು ಬಾರಿ ಎತ್ತರದ ಗೋಡೆಯನ್ನು ಜಿಗಿಯಲು ಪ್ರಯತ್ನಿಸುತ್ತಿರುವ ವಿಡಿಯೋ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿದೆ. ಟ್ವಿಟ್ಟರ್ ನಲ್ಲಿ ಶೇರ್ ಆಗಿರುವ ಈ ವಿಡಿಯೋಗೆ ಹೆಚ್ಚು ವೀಕ್ಷಣೆಗಳು ಬರುತ್ತಿವೆ.  

Written by - Ranjitha R K | Last Updated : Aug 28, 2023, 03:22 PM IST
  • ಬೆಕ್ಕಿನ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ
  • ಮರಳಿ ಮರಳಿ ಯತ್ನಿಸುತ್ತಿರುವ ಬೆಕ್ಕು
  • ಜಿಗಿದು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ವೀಡಿಯೊ
ಅಷ್ಟೆತ್ತರದ ಗೋಡೆ ಜಿಗಿದು ಮೆಲೇರಿದ ಬೆಕ್ಕು ! ವೈರಲ್ ಆಗಿದೆ ಸ್ಪೈಡರ್ ಕ್ಯಾಟ್ ವಿಡಿಯೋ  title=

Cat Viral Video : ಪ್ರಯತ್ನಪಟ್ಟರೆ ಯಾವುದೂ ಅಸಾಧ್ಯವಲ್ಲ ಎನ್ನುವ ಮಾತಿದೆ. ಈ ಮಾತು ನಿಜ ಎನ್ನುವುದನ್ನು ಸಾಬೀತುಪಡಿಸುವ ಅನೇಕ ಘಟನೆಗಳು ನಮ್ಮ ನಡುವೆ ನಡೆಯುತ್ತಲೇ ಇರುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಕೂಡಾ ಅದನ್ನು ಗಮನಿಸಬಹುದು. ಬದುಕಲು ಸಾಧ್ಯವಾಗದ ವಾತಾವರಣದಲ್ಲಿ ತನ್ನಲ್ಲಿರುವ ಎಲ್ಲಾ ಶಕ್ತಿಗಳನ್ನು ಬಳಸಿಕೊಂಡು ಪ್ರಯತ್ನ ಪಟ್ಟಾಗ ಸಿಗುವ ಯಶಸ್ಸು, ಅಸಾಧ್ಯ ಎಂದು ಕೈ ಚೆಲ್ಲಿ ಕುಳಿತುಕೊಳ್ಳುವವರಿಗೆ ಪಾಠವಾಗಬಲ್ಲದು.  

ಇಲ್ಲಿ ಬೆಕ್ಕು ಕೂಡಾ ಅಂಥದ್ದೇ ಸಾಧನೆಯನ್ನು ಮಾಡಿದೆ. ಈ ಬೆಕ್ಕು ಅತಿ ಎತ್ತರವಾಗಿರುವ ಖಾಲಿ ತೊಟ್ಟಿಗೆ ಬಿದ್ದಿದೆ. ಅಲ್ಲಿಂದ ಹೊರಬರಲು ಈ ಬೆಕ್ಕು ನಡೆಸುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ. 

ಇದನ್ನೂ ಓದಿ : Viral Video: ಹಾವಿನ ಮೇಲೆ ಕಪ್ಪೆರಾಯನ ಜಾರುಬಂಡಿ ಆಟ: ಪ್ರಕೃತಿ ವೈಚಿತ್ರ್ಯದ ವಿಡಿಯೋ

ಇಲ್ಲಿ ಆಳವಾದ ಖಾಲಿ ತೊಟ್ಟಿಗೆ ಬೆಕ್ಕು ಬಿದ್ದಿರುವುದನ್ನು ಕಾಣಬಹುದು. ಆ ಬೆಕ್ಕು ಅಲ್ಲಿಗೆ ಯಾವ ರೀತಿ ತಲುಪಿತು ಎನ್ನುವುದು ಆ ಬೆಕ್ಕಿಗೆ ಮತ್ತು ದೇವರಿಗೆ ಮಾತ್ರ ಗೊತ್ತು. ಆದರೆ ತೊಟ್ಟಿಗೆ ಬಿದ್ದ ನಂತರ ಬೆಕ್ಕು ತಾನು ಹೇಗಾದರೂ ಮಾಡಿ ಮೇಲಕ್ಕೆ ಹೋಗಬೇಕು ಎನ್ನುವ ಪ್ರಯತ್ನಕ್ಕೆ ಕೈ ಹಾಕುತ್ತದೆ. ಹಾಗೆಯೇ ಮೇಲಕ್ಕೆ ಜಿಗಿಯಲು ಪ್ರಯತ್ನಿಸುತ್ತದೆ. ಮೊದಲು ತನ್ನ ಪ್ರಯತ್ನದಲ್ಲಿ ಸೋಲುತ್ತದೆ.  ಆದರೆ ಛಲ ಬಿಡದ ಬೆಕ್ಕು ಮತ್ತೆ ಮತ್ತೆ ತನ್ನ ಪ್ರಯತ್ನ ಮುಂದುವರೆಸುತ್ತದೆ. ನೀವು ಹೇಗಾದರೂ ತೊಟ್ಟಿಯಿಂದ ಹೊರಬರಬೇಕು ಎಂದು ನಿರ್ಧರಿಸಿರುವ ಬೆಕ್ಕು ತನ್ನ ಶಕ್ತಿ ಮೀರಿ ಪ್ರಯತ್ನಿಸುತ್ತದೆ. 

ಬೆಕ್ಕು ಮೇಲಕ್ಕೆ ಬರಲು ಪ್ರಯತ್ನಿಸುತ್ತಿರುವುದನ್ನು ಕಂಡ ವ್ಯಕ್ತಿಯೊಬ್ಬರು ಮೇಲಿನಿಂದ ಏಣಿ ಇಳಿಸುತ್ತಾರೆ. ಆದರೆ ಅಷ್ಟರಲ್ಲಾಗಲೇ ಬೆಕ್ಕು ಮೇಲಕ್ಕೆ ಜಿಗಿದು ಬಿಡುತ್ತದೆ.  ತನ್ನ ಪ್ರಯತ್ನಕ್ಕೆ ಸಿಕ್ಕಿದ ಫಲ ಕಂಡು ಸಂತಸಗೊಂಡ ಬೆಕ್ಕು ಕೂಡಾ ಅಲ್ಲಿಂದ ಓಡಿ ಹೋಗುತ್ತದೆ.  ಈ ವೀಡಿಯೋ ಇದೀಗ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಹಲವರ ಪಾಲಿಗೆ ಭರವಸೆ ಮೂಡಿಸುವ ವಿಡಿಯೋವಾಗಿದೆ.  

ಇದನ್ನೂ ಓದಿ : Viral Video: ತಂಡದ ಸಹ ಆಟಗಾರನನ್ನು ಬ್ಯಾಟ್‌ನಿಂದ ಹೊಡೆದ ಬ್ಯಾಟ್ಸ್ಮನ್ ...ಮುಂದೆ ಆಗಿದ್ದೇನು?

@krish_itz ಎನ್ನುವ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News