ಮಾಂಸಕ್ಕಾಗಿ ಎರಡು ಚಿರತೆಗಳ ನಡುವೆ ಕಾದಾಟ! ಲಾಭ ಆದದ್ದು ಮಾತ್ರ ....! ವೈರಲ್ ವಿಡಿಯೋ

Wild Animal Viral Video :ಈ ವಿಡಿಯೋವನ್ನು ನೋಡುವಾಗ ಕೂಡಿ ಬಾಳಿದರೆ ಸ್ವರ್ಗ ಸುಖ ಎನ್ನುವ ಮಾತು ಕೂಡಾ ನೆನಪಾಗುತ್ತದೆ. ಆದರೆ ಚಿರತೆಗಳ ಕಾದಾಟದ ಫಲಿತಾಂಶ ನಂ ನಿಜ ಜೀವನಕ್ಕೂ ಹೊಂದುತ್ತದೆ. 

Written by - Ranjitha R K | Last Updated : Jul 31, 2023, 02:07 PM IST
  • ಇಬ್ಬರ ಜಗಳ ಮೂರನೇಯವನಿಗೆ ಲಾಭ
  • ಇಲ್ಲೊಂದು ವಿಡಿಯೋ ವೈರಲ್ ಆಗುತ್ತಿದೆ.
  • ಈ ಗಾದೆ ಮಾತು ಸರಿಯಾಗಿ ಹೊಂದಿಕೆಯಾಗುತ್ತದೆ ಈ ದೃಶ್ಯಕ್ಕೆ
ಮಾಂಸಕ್ಕಾಗಿ ಎರಡು ಚಿರತೆಗಳ ನಡುವೆ ಕಾದಾಟ! ಲಾಭ ಆದದ್ದು ಮಾತ್ರ ....! ವೈರಲ್ ವಿಡಿಯೋ  title=

Wild Animal Viral Video : ಇಬ್ಬರ ಜಗಳ ಮೂರನೇಯವನಿಗೆ ಲಾಭ ಈ ಗಾದೆ ಮಾತನ್ನು ನಾವು ಶಾಲಾ ದಿನಗಳಲ್ಲಿಯೇ ಕೇಳಿರುತ್ತೇವೆ. ಕೆಲವೊಂದು ಘಟನೆಗಳು ಈ ಗಾದೆ ಮಾತನ್ನು ಮತ್ತೆ ಮತ್ತೆ ನೆನಪಿಸುತ್ತದೆ.  ಅಲ್ಲದೆ ಒಗ್ಗಟ್ಟಿನಲ್ಲಿ ಬಲವಿದೆ ಅನ್ನುವ ಮಾತು ಕೂಡಾ ಎಷ್ಟು ಸತ್ಯ ಅಲ್ಲವೇ ಎನ್ನುವಂಥಹ ಘಟನೆ ಕೂಡಾ ನಮ್ಮ ಮುಂದೆ ನಡೆದು ಹೋಗುತ್ತದೆ. ಪ್ರಾಣಿಗಳಾಗಲೀ ಮನುಷ್ಯರಾಗಲೀ ಈ ಗಾದೆ ಮಾತಿನ ತಾತ್ಪರ್ಯ ಗೊತ್ತಿದ್ದರೂ ಜೀವನದಲ್ಲಿ ಪಾಲಿಸುವುದು ಮಾತ್ರ ಬಹಳ ವಿರಳ. 

ಇಲ್ಲೊಂದು ವಿಡಿಯೋ ವೈರಲ್ ಆಗುತ್ತಿದೆ. ಎರಡು ಚಿರತೆಗಳು ಆಹಾರಕ್ಕಾಗಿ ಕಾದಾಟ ಮಾಡುತ್ತಿರುವ ವಿಡಿಯೋ ಅದು. ಬಹಳ ದೊಡ್ಡದಾದ ಪ್ರಾಣಿಯ ದೇಹವನ್ನು ಎರಡೂ ಚಿರತೆಗಳು ಹಿಡಿದುಕೊಂಡಿರುವುದನ್ನು ಇಲ್ಲಿ ಕಾಣಬಹುದು. ಆ ಚಿರತೆಗಳು ಮರದ ಮೇಲೆ ನಿಂತುಕೊಂಡು ಆಹಾರಕ್ಕಾಗಿ ಜಗಳವಾಡುತ್ತಿರುವುದನ್ನು ಗಮನಿಸಬಹುದು. 

ಇದನ್ನೂ ಓದಿ : Viral Video: ಮುಳುಗುತ್ತಿರುವ ಪ್ರೇಮಿಯ ಕೈ ಹಿಡಿದೆತ್ತಿದ ಪ್ರೇಯಸಿ ಮಾಡಿದ್ದೇನು ಗೊತ್ತಾ..?

ಅದೇನು ಬಹಳ ಸಣ್ಣ ಆಹಾರದ ಮುದ್ದೆ ಅಲ್ಲ.  ಯಾವುದೋ ಒಂದು ಪ್ರಾಣಿಯ ಇಡೀ ದೇಹವೇ ಅಲ್ಲಿದೆ. ಎರಡೂ ಚಿರತೆಗಳು ಸೇರಿಕೊಂಡು ಹಂಚಿಕೊಂಡು ತಿಂದರೂ ಎರಡೂ ಚಿರತೆಗಳ ಹೊಟ್ಟೆ ತುಂಬಿರುತ್ತಿತ್ತು. ಆದರೆ ಎಲ್ಲವೂ ತನಗೇ ಬೇಕು ಎನ್ನುವ ಹಠಕ್ಕೆ ಬಿದ್ದ ಚಿರತೆಗಳು ಮರದ ಮೇಲೆಯೇ ಕಾದಾಟ ನಡೆಸಿವೆ. 

ಆದರೆ ಮೊದಲೇ ಹೇಳಿದ ಹಾಗೆ ಇಬ್ಬರ ಜಗಳ ಮೂರನೆಯವನಿಗೆ ಲಾಭ ಎನ್ನುವಂತಾಗಿದೆ ಇಲ್ಲಿ ಚಿರತೆಗಳ ಜಗಳದಲ್ಲಿ ಮಾಂಸ ಮರದಿಂದ ಕೆಳಗೆ ಬಿದ್ದಿದೆ. ಅದರ ಜೊತೆ ಒಂದು ಚಿರತೆ ಕೂಡಾ ಬಿದ್ದಿದೆ.  ಮಾಂಸ ಕೆಳಗೆ ಬೀಳುತ್ತಿದ್ದಂತೆಯೇ ಅಲ್ಲೇ ಇದ್ದ ಕತ್ತೆ ಕಿರುಬಗಳ ಗುಂಪು  ಆ ಮಾಂಸದ ಮೇಲೆ ಮುಗಿ ಬಿದ್ದಿದೆ. ಕತ್ತೆ ಕಿರುಬಗಳ ಗುಂಪು ಕಂಡು ಕೆಳಗೆ ಬಿದ್ದ ಚಿರತೆ ಅಲ್ಲಿಂದ ಜಾಗ ಖಾಲಿ ಮಾಡಿದೆ. ಮರದ ಮೇಲೆ ಇದ್ದ ಚಿರತೆ ಕೂಡಾ ಕೆಳಗಿಳಿಯುವ ಧೈರ್ಯ ಮಾಡದೇ ಮೇಲಿನಿಂದಲೇ ಎಲ್ಲವನ್ನೂ ನೋಡುತ್ತಿದೆ. 

 

 
 
 
 

 
 
 
 
 
 
 
 
 
 
 

A post shared by Dulini (@dulinilodge)

ಇದನ್ನೂ ಓದಿ : ಅಜ್ಜಿಯೊಂದಿಗೆ ಶಾಸಕರ ಅಪರೂಪದ ಸಂದರ್ಶನ: ಅಜ್ಜಿ ಹೇಳಿದ್ದೇನು ಗೊತ್ತಾ! ಈ ವಿಡಿಯೋ ನೋಡಿ

ಈ ವಿಡಿಯೋವನ್ನು dulinilodge ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಇಲ್ಲಿಯವರೆಗೆ ಈ ವಿಡಿಯೋವನ್ನು ಬಹಳಷ್ಟು ಮಂದಿ ಲೈಕ್ ಮಾಡಿದ್ದಾರೆ. ಅಲ್ಲದೆ ಹೆಚ್ಚಿನ ಸಂಖ್ಯೆಯ ಜನ ಕಾಮೆಂಟ್ ಕೂಡಾ ಮಾಡಿದ್ದಾರೆ. 

ಈ ವಿಡಿಯೋವನ್ನು ನೋಡುವಾಗ ಕೂಡಿ ಬಾಳಿದರೆ ಸ್ವರ್ಗ ಸುಖ ಎನ್ನುವ ಮಾತು ಕೂಡಾ ನೆನಪಾಗುತ್ತದೆ. ಪಾಪ ಎರಡು ಚಿರತೆಗಳು ಸೇರಿಕೊಂಡು ಆಹಾರ ತಿಂದಿದ್ದರೆ,  ತಮಗಿಷ್ಟವಾದ ಆಹಾರ  ಕತ್ತೆ ಕಿರುಬಗಳ ಪಾಲಾಗುತ್ತಿರಲಿಲ್ಲ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News