Viral Video: ಮುಳುಗುತ್ತಿರುವ ಪ್ರೇಮಿಯ ಕೈ ಹಿಡಿದೆತ್ತಿದ ಪ್ರೇಯಸಿ ಮಾಡಿದ್ದೇನು ಗೊತ್ತಾ..?

Viral Video : ನೀರಿನಲ್ಲಿ ತೇಲುತ್ತಿರೋ ಹಡಗಿನ ಮೇಲೆ ಕುಳಿತ ಪ್ರಿಯತಮೆ, ಅದೇ ನೀರಿನಲ್ಲಿ ಮುಳುಗುತ್ತಿರುವ ಪ್ರಿಯತಮ, ಮುಳುಗುವ ಸಮಯದಲ್ಲೂ ಮೊಬೈಲ್‌ ನೆನಪಾಗಿ ಕೈಚಾಚುವ ಪ್ರೇಮಿಯ ಕೈ ಹಿಡಿದೆತ್ತಿದ ಪ್ರೇಯಸಿ ಮಾಡಿದ್ದೇನು ಗೊತ್ತಾ..ವಿಡಿಯೋ ನೋಡಿದ್ರೆ ನೀವು ಬಿದ್ದು ಬಿದ್ದು ನಗ್ತೀರಾ.  

Written by - Savita M B | Last Updated : Jul 31, 2023, 12:32 PM IST
  • ನೀರಿನಲ್ಲಿ ತೇಲುತ್ತಿರೋ ಹಡಗಿನ ಮೇಲೆ ಕುಳಿತ ಪ್ರಿಯತಮೆ
  • 2023 ಟೈಟಾನಿಕ್‌ ದುರಂತದ ಪ್ರೇಮಕಥೆ
  • ಜೊತೆಗೆ ಇದು ನಮ್ಮೆಲ್ಲರ ಜೀವನದ ದುರಂತದ ಸತ್ಯ ಕಥೆಯೂ ಹೌದು
Viral Video: ಮುಳುಗುತ್ತಿರುವ ಪ್ರೇಮಿಯ ಕೈ ಹಿಡಿದೆತ್ತಿದ ಪ್ರೇಯಸಿ ಮಾಡಿದ್ದೇನು ಗೊತ್ತಾ..?  title=

Trending Video : ಇಂದಿನ ಇಂಟರ್‌ನೆಟ್‌ ಜಮಾನಾದಲ್ಲಿ ಅಚ್ಚರಿ ಎನ್ನಿಸುವಂತಹ, ವಿಚಿತ್ರವೆನ್ನಿಸುವ ಹಾಗೂ ನಕ್ಕು ನಗಿಸುವ ವಿಡಿಯೋಗಳಿಗೇನು ಕಮ್ಮಿ ಇಲ್ಲ. ಹೀಗೆ ಹರಿದಾಡುವ ವಿಡಿಯೊಗಳು, ಪೋಟೊಗಳು, ಮೀಮ್ಸ್‌ಗಳು ನಮ್ಮ ಮನಸ್ಸಿಗೆ ಮಜಾ ಕೊಡೋದು ಸುಳ್ಳಲ್ಲ. ಅವುಗಳನ್ನು ನೋಡ್ತಾ ಇದ್ದರೆ ನೋಡ್ತಾನೇ ಇರಬೇಕು ಅನ್ನಿಸುತ್ತೆ. ಇದೀಗ ಅಂತದ್ದೇ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ. 

ಏನದು..ಅಂತದ್ದೇನಿದೆ ಆ ವಿಡಿಯೋದಲ್ಲಿ ಅಂತೀರಾ..? ಸಖತ್‌ ಮಜಾ ಇರೋದಂತು ನಿಜಾ..ಟ್ವಿಟರ್‌ನಲ್ಲಿ ವೈರಲ್‌ ಆದ ವಿಡಿಯೊಗೆ ʼಟೈಟಾನಿಕ್‌ 2023ʼ ಎಂದು ಶೀರ್ಷಿಕೆ ನೀಡಲಾಗಿದೆ. ಓಹ್‌ ಹಾಗಾದರೇ ಅದು ಪ್ರೇಮಕಥೆ ಇರಬಹುದು ಎಂದು ಊಸಹಿಸಿದ್ದೀರಾ...ಅಲ್ಲವೇ ಅಲ್ಲ. 

ಆ ಟೈಟಾನಿಕ್‌ ಸುಂದರ ಪ್ರೇಮಕಥೆ...ಈ 2023 ಟೈಟಾನಿಕ್‌ ದುರಂತದ ಪ್ರೇಮಕಥೆ...ಜೊತೆಗೆ ಇದು ನಮ್ಮೆಲ್ಲರ ಜೀವನದ ದುರಂತದ ಸತ್ಯ ಕಥೆಯೂ ಹೌದು. ಈ ವಿಡಿಯೋ ನೋಡಿದ ಮೇಲೆ ಒಮ್ಮೆಯಾದರೂ ನಿಮ್ಮ ಜೀವನದಲ್ಲಿ ನಡೆದ ಈ ರೀತಿಯ ಘಟನೆ ನಿಮಗೆ ನೆನೆಪಿಗೆ ಬರಲೂಬಹುದು. 

ಇದನ್ನೂ ಓದಿ-Viral Video : ಸ್ಕೈಡೈವ್ ಮಾಡುವ ಮೂಲಕ ಮದುವೆಯಾಗಿ ಗುಂಡಿಗೆ ಬಿದ್ದ ಜೋಡಿ..ಹೇಗಿದೆ ನೋಡಿ ಥ್ರಿಲ್ಲಿಂಗ್​ ವೆಡ್ಡಿಂಗ್

ಅಂದಿನ ಟೈಟಾನಿಕ್‌ ಸತ್ಯ ಪ್ರೇಮಕಥೆ ಹೇಳಿ ಕಣ್ಣಿರು ಬರಸಿದ್ರೆ..ಈ ಪ್ರೇಮಕಥೆ ನೋಡಿ ನಕ್ಕು ನಕ್ಕು ಹೊಟ್ಟೆ ಹುಣ್ಣಾಗುತ್ತೆ. ಅಷ್ಟೊಂದು ಮಜಾ ಕೊಡೊ ವಿಡಿಯೊ ಏನದು ಅಂತೀರಾ, ನೋಡಿ ಇಲ್ಲಿದೆ ವಿವರ.

ಎಂತಾ ಕಾಲ ಬಂತು ಅಂದ್ರೆ ನೀರಿನಲ್ಲಿ ಮುಳುಗಿ ಸಾಯ್ತಾ ಇರೋ ವ್ಯಕ್ತಿನ ಬುದುಕಿಸೋದು ಬಿಟ್ಟು ಆತ ಮೊಬೈಲ್‌ನ ಕೇಳಿದ ಅಂತಾ ಅವನನ್ನು ನೀರಿನಲ್ಲೇ ಮುಳುಗಿಸುವುದು ಎಷ್ಟು ಸರಿ ನೀವೆ ಹೇಳ್ರಿ..? ಅದೆನಾದ್ರೂ ಇರಲಿ ಆದರೆ ನೀರಿನಲ್ಲಿ ಮುಳುಗಿದ ಆ ವ್ಯಕ್ತಿ ಬದುಕೋ ಆಸೆಗೆ ಯಾರಾದ್ರೂ ಕಾಪಾಡ್ಲಿ ಅಂತ ಕೈ ಚಾಚುತ್ತಿದ್ದಾನೆ ಅಂದುಕೊಂಡಿದ್ವಿ ಆದರೆ ಆತ ಕೈ ಚಾಚಿದ್ದು ಮೊಬೈಲ್‌ಗೆ.  

ಇನ್ನೂ ಅವನ ಪ್ರೇಯಸಿಯ ಕಥೆ ಕೇಳ್ತಿರಾ..? ಮುಳುಗುತ್ತಿರುವ ಪ್ರೇಮಿಯ ಕೈ ಹಿಡಿದು ಎಳೆದ ಆಕೆ ಮೇಲೆತ್ತಲು ನೋಡುತ್ತಾಳೆ ಅಂದು ಕೊಂಡಿದ್ದೀರಾ..? ಖಂಡಿತ ಇಲ್ಲ... ಆಕೆ ಆತನ ಕೈ ಹಿಡಿದು ಎತ್ತಿದ್ದು ಫೋನ್‌ ಫಿಂಗರ್‌ ಪ್ರಿಂಟ್‌ ಲಾಕ್‌ ಓಪನ್‌ ಮಾಡೋಕೆ. ಮುಳುಗುತ್ತಿದ್ದವನ ಮೇಲೆತ್ತಿ ಅವನ ಫಿಂಗರ್‌ ಪ್ರಿಂಟ್‌ ಲಾಕ್‌ ಓಪನ್‌ ಮಾಡಿ ಅರ್ಧ ಮುಳುಗಿದ್ದ, ಆ ಮಹಾಶಯನನ್ನು ಪೂರ್ತಿ ಮುಳುಗಿಸಿಯೇ ಬಿಡ್ತಾಳೆ ಅವರ ಪ್ರಿಯತಮೆ. ಇದಕ್ಕೆ ಏನ್‌ ಹೇಳಬೇಕು ಅಂತಾ ನೀವೆ ತಿಳಿಸಿ..

ಇದನ್ನೂ ಓದಿ-Viral Video : ಸೋಷಿಯಲ್‌ ಮಿಡಿಯಾ ಅವಾಂತರ; ಸ್ಲೀಪರ್ ಕೋಚ್​ನಲ್ಲಿಯೂ ರೀಲಿಗರ ಹಾವಳಿ..ಕಿಡಿಕಾರಿದ ನೆಟ್ಟಿಗರು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News