Midair Collision on Sea Beach: ಸಮುದ್ರ ತೀರದಲ್ಲಿ ಸಂಭವಿಸುತ್ತಿರುವ ಅಹಿತಕರ ಘಟನೆಗಳ ಸರಣಿಯಲ್ಲಿ ಎರಡು ಹೆಲಿಕಾಪ್ಟರ್‌ಗಳು ಡಿಕ್ಕಿಯಾಗಿ ನಾಲ್ವರು ಸಾವನ್ನಪ್ಪಿರುವ ಮತ್ತೊಂದು ನೋವಿನ ಅವಘಡ ಆಸ್ಟ್ರೇಲಿಯಾದಿಂದ ಮುನ್ನೆಲೆಗೆ ಬಂದಿದೆ. ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಲ್ಲಿ ಎರಡು ಹೆಲಿಕಾಪ್ಟರ್‌ಗಳು ಡಿಕ್ಕಿ ಹೊಡೆದಿವೆ. ಈ ಸಮಯದಲ್ಲಿ, ಅನೇಕ ಜನರು ಅಲ್ಲಿ ಉಪಸ್ಥಿತರಿದ್ದರು.
ವಾಸ್ತವವಾಗಿ, ಈ ಘಟನೆಯು ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಲ್ಲಿರುವ ಸಮುದ್ರ ತೀರದಲ್ ಸಂಭವಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ಎರಡು ಹೆಲಿಕಾಪ್ಟರ್‌ಗಳು ಪರಸ್ಪರ ಡಿಕ್ಕಿ ಹೊಡೆದ ಈ ಘಟನೆ ಮರೈನ್ ಥೀಮ್ ಪಾರ್ಕ್ ಬಳಿ ಈ ಘಟನೆ ನಡೆದಿದೆ. ಆಶ್ಚರ್ಯವೆಂದರೆ ಆ ಸಮಯದಲ್ಲಿ ಉದ್ಯಾನದಲ್ಲಿ ಸಾಕಷ್ಟು ಜನರಿದ್ದರು.
ಇದನ್ನೂ ಓದಿ : Viral video: ಪ್ರಾಣಪಣಕ್ಕಿಟ್ಟು ನಾಯಿಯನ್ನು ಕಾಪಾಡಿದ ವ್ಯಕ್ತಿ, ಮೈನವಿರೇಳಿಸುತ್ತೆ ಈ ದೃಶ್ಯ
ಈ ಅವಘಡದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಮೂರಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ನಂತರ ಪೊಲೀಸರು ಮತ್ತು ವೈದ್ಯಕೀಯ ತಂಡ ಸ್ಥಳಕ್ಕೆ ಧಾವಿಸಿದ್ದು, ಜನರನ್ನು ರಕ್ಷಿಸಲಾಗಿದೆ. ಎಲ್ಲಾ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರಲ್ಲಿ ಹೆಲಿಕಾಪ್ಟರ್‌ನ ಪೈಲಟ್ ಮತ್ತು ಮೂವರು ಸೇರಿದ್ದಾರೆ.
⚡️Two helicopters collided in #Australia.
According to preliminary data, 4 people died and 13 were injured.TELEGRAM: https://t.co/Uw6hADCvaz
INSTAGRAM: https://t.co/nKW8sWspvi pic.twitter.com/NNw2fOBsya— BRAVE SPIRIT 🇺🇦 (@Brave_spirit81) January 2, 2023
ಮಾಧ್ಯಮ ವರದಿಗಳ ಪ್ರಕಾರ, ಈ ಘಟನೆಯಲ್ಲಿ ಒಂದು ಹೆಲಿಕಾಪ್ಟರ್‌ನಲ್ಲಿದ್ದವರಿಗೆ ಮಾತ್ರ ಹಾನಿಯುಂಟಾಗಿದೆ. ಹೆಲಿಕಾಪ್ಟರ್ ಸಂಪೂರ್ಣವಾಗಿ ಪತನಗೊಂಡಿದೆ. ಎರಡನೇ ಹೆಲಿಕಾಪ್ಟರ್ ಮರಳಿನಲ್ಲಿ ಇಳಿಯುವಲ್ಲಿ ಯಶಸ್ವಿಯಾಗಿದ್ದು, ಹೆಲಿಕಾಪ್ಟರ್‌ನಲ್ಲಿದ್ದ ಯಾವುದೇ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿಲ್ಲ. ಘಟನೆ ನಡೆದ ತಕ್ಷಣ ಅಲ್ಲಿದ್ದವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದು ವೈರಲ್ ಆಗಿದ್ದು, ಎದೆಝಲ್ ಎನ್ನುವಂತಿದೆ.
ಇದನ್ನೂ ಓದಿ : Trending Video : ನಾಲಿಗೆಯಿಂದ ಕಪ್ಪೆಯಂತೆ ನೊಣ ಹಿಡಿದು ತಿಂತಾಳೆ ಈ ಹುಡುಗಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.