Viral Video : ಗುಜರಾತ್ನ ಸಬರಕಾಂಡದಲ್ಲಿ ಹಠಾತ್ ಪ್ರವಾಹದಿಂದಾಗಿ ದಂಪತಿಗಳು ನದಿಯ ಮಧ್ಯದಲ್ಲಿ ಸಿಲುಕಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಗುಜರಾತ್ ಮೂಲದ ದಂಪತಿ ಕಾರಿನಲ್ಲಿ ನದಿ ದಾಟಿದ್ದರು. ಇಬ್ಬರೂ ಅನಿರೀಕ್ಷಿತ ಪ್ರವಾಹದಲ್ಲಿ ಸಿಲುಕಿಕೊಂಡರು. ನೀರಿನ ರಭಸ ಹೆಚ್ಚಾದ ಕಾರಣ ದಂಪತಿ ನೀರಿನಲ್ಲಿ ಕೊಚ್ಚಿ ಹೋಗುವುದನ್ನು ತಪ್ಪಿಸಲು ಕಾರಿನ ಮೇಲೆ ಕುಳಿತಿದ್ದರು.
ನೀರಿನ ಹರಿವು ಕಡಿಮೆಯಾಗದ ಕಾರಣ ಅವರು ಹಲವು ಗಂಟೆಗಳ ಕಾಲ ಕಾರಿನ ಮೇಲೆ ಕುಳಿತಿದ್ದರು. ಇದನ್ನು ಕಂಡ ನೆರೆಹೊರೆಯವರು ದಂಪತಿಗೆ ಸಹಾಯ ಮಾಡಲು ಪ್ರಯತ್ನಿಸಿದರು. ಆದರೆ, ನೀರಿನ ಹರಿವು ಕಡಿಮೆಯಾಗದೆ ವೇಗ ಹೆಚ್ಚುತ್ತಲೇ ಇದ್ದುದರಿಂದ ತಕ್ಷಣ ಅವರನ್ನು ಉಳಿಸುವುದು ಅಸಾಧ್ಯವಾಯಿತು.
ಇದನ್ನೂ ಓದಿ:ಮದ್ಯಪ್ರಿಯರಿಗೆ ಸಿಹಿಸುದ್ದಿ..! ಎಣ್ಣೆ ರೇಟ್ ಫುಲ್ ಕಮ್ಮಿ.. ಬಿಯರ್ ಅಂತೂ ನೀರು ಸಿಕ್ಕಂತೆ ಸಿಗುತ್ತೆ..
ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರ ಸಹಕಾರದೊಂದಿಗೆ ರಕ್ಷಣಾ ಕಾರ್ಯ ಆರಂಭಿಸಿದರು. ನೀರಿನ ಹರಿವು ಕಡಿಮೆಯಾಗಲು ತಂಡವು ಸ್ವಲ್ಪ ಸಮಯ ಕಾಯಬೇಕಾಯಿತು. ನೀರಿನ ಮಟ್ಟ ಕಡಿಮೆಯಾದಾಗ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಇದರೊಂದಿಗೆ ದಂಪತಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
साबरकांठा...
करोल नदी में तीन लोग कार के साथ बहे, कार महिला चला रही थी, पानी का बहाव काफी तेज होने के बावजूद कोजवे क्रॉस करने की कोशिश करते हुए हादसा हुआपानी का प्रवाह कम होते ही दोनो को बाहर निकाला गया
मौके पर दो फायर टीम, SDM मामलतदार, पुलिस और लोकल लोगो ने बचाया#Gujarat pic.twitter.com/U1xMuMBL37
— Gaurav Kumar (@gaurav1307kumar) September 8, 2024
ನದಿಯ ಮಧ್ಯದಲ್ಲಿ ಪ್ರವಾಹದಲ್ಲಿ ಸಿಕ್ಕಿಹಾಕಿಕೊಳ್ಳುವುದು ಎಷ್ಟು ಭಯಾನಕ.. ಆದರೆ ಈ ದಂಪತಿ ಯಾವುದೇ ಭಯವಿಲ್ಲದೆ ಕಾರಿನ ಮೇಲೆ ಕುಳಿತಿದ್ದರು. ಮನೆಯ ಬಾಗಿಲಲ್ಲಿ ಕುಳಿತು ಮಾಮೂಲಿಯಾಗಿ ಮಾತನಾಡುತ್ತಿದ್ದರಂತೆ ಕಾರಿನ ಮೇಲೆ ಕುಳಿತಿದ್ದ ದೃಶ್ಯ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.. ಕೆಲ ಜನ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ..
ಇದನ್ನೂ ಓದಿ:ಭಾರತದಲ್ಲಿ ಎಷ್ಟು ಜನರು ಮಾಂಸ, ಮೀನು & ಮೊಟ್ಟೆಗಳನ್ನು ಸೇವಿಸುತ್ತಾರೆ?
ನದಿಯ ಮಧ್ಯದಲ್ಲಿ ಸಿಕ್ಕಿಹಾಕಿಕೊಂಡಿದ್ದ ಈ ಜೋಡಿ ಹರಟೆ ಹೊಡೆಯುತ್ತಾ ನಗುತ್ತಾ ಸಾರ್ವಜನಿಕರಿಗೆ ಕೈ ತೋರಿಸಿದ ವಿಡಿಯೋಗೆ ಹಲವರು ಕಮೆಂಟ್ ಮಾಡುತ್ತಿದ್ದಾರೆ. ಪತಿ-ಪತ್ನಿ ಎಂತಹ ಪರಿಸ್ಥಿತಿ ಬಂದರೂ ಒಬ್ಬರನ್ನೊಬ್ಬರು ಎಷ್ಟು ಬೆಂಬಲಿಸಬೇಕು ಎಂಬುದನ್ನು ಇವರಿಂದ ಕಲಿಯಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹೀಗೆ ಹಲವಾರು ಮೆಚ್ಚುಗೆ ಕಾಮೆಂಟ್ಗಳು ಈ ವೈರಲ್ ವಿಡಿಯೋಗೆ ಬಂದಿವೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.