ಚಲಿಸುವ ಬೈಕ್‌ನಲ್ಲಿ ಮೈಮರೆತ ಜೋಡಿಗೆ 8,000 ರೂ. ದಂಡ..! ಇದೆಲ್ಲಾ ಬೇಕಿತ್ತಾ ನಿಮ್ಗೆ

ರಸ್ತೆ ಸುರಕ್ಷತೆ ಮತ್ತು ನಿಯಮಗಳನ್ನು ಗಾಳಿಗೆ ತೂರಿ ಜೋಡಿ ಪ್ರಣಯದಲ್ಲಿ ಮುಳುಗಿದ್ದು, ಸ್ಥಳಿಯರ ಆಕ್ರೋಶಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿ 9 ರಲ್ಲಿ ಬೈಕ್‌ ಸವಾರಿ ಮಾಡುವಾಗ ದಂಪತಿಗಳು ಪರಸ್ಪರ ಆಲಿಂಗನದಲ್ಲಿ ತೊಡಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು. 

Written by - Krishna N K | Last Updated : Oct 11, 2023, 01:22 PM IST
  • ರಸ್ತೆ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿ ಬೈಕ್‌ ಮೇಲೆ ಜೋಡಿ ಪ್ರಣಯ.
  • ಉತ್ತರ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 9 ರಲ್ಲಿ ನಡೆದ ಘಟನೆ.
  • ಮೋಟಾರು ವಾಹನ ಕಾಯ್ದೆಯಡಿ ಬೈಕ್ ಸವಾರನಿಗೆ ರೂ 8,000 ದಂಡ ವಿಧಿಸಲಾಗಿದೆ.
ಚಲಿಸುವ ಬೈಕ್‌ನಲ್ಲಿ ಮೈಮರೆತ ಜೋಡಿಗೆ 8,000 ರೂ. ದಂಡ..! ಇದೆಲ್ಲಾ ಬೇಕಿತ್ತಾ ನಿಮ್ಗೆ title=

Viral Video : ಇತ್ತೀಚಿಗೆ ನಡೆದ ಘಟನೆಯೊಂದು ಇಂಟರ್‌ನೆಟ್‌ನಲ್ಲಿ ವ್ಯಾಪಕ ಗಮನ ಸೆಳೆಯುತ್ತಿದೆ. ಹೆದ್ದಾರಿ ಮತ್ತು ಸಾರ್ವಜನಿಕ ರಸ್ತೆಗಳು ಕಿಡಿಗೇಡಿಗಳ ಅಪಾಯಕಾರಿ ಸಾಹಸ ಮತ್ತು ಅಜಾಗರೂಕ ವರ್ತನೆಗೆ ವೇದಿಕೆಯಾಗಿ ಮಾರ್ಪಟ್ಟಿವೆ. ಸಧ್ಯ ಯುವ ಜೋಡಿಯೊಂದು ಬೈಕ್‌ನ್ನು ವೇಗವಾಗಿ ಚಲಿಸುತ್ತ, ಪ್ರಣಯದಲ್ಲಿ ಮುಳುಗಿದ ಘಟನೆ ಬೆಳಕಿಗೆ ಬಂದಿದ್ದು, ಈ ಕುರಿತ ವಿಡಿಯೋ ವೈರಲ್‌ ಆಗಿದೆ.

ಉತ್ತರ ಪ್ರದೇಶದ ಹಾಪುರ್‌ನಲ್ಲಿ ಈ ಘಟನೆ ನಡೆದಿದ್ದು, ರಸ್ತೆ ಸುರಕ್ಷತೆ ಮತ್ತು ನಿಯಮಗಳನ್ನು ಗಾಳಿಗೆ ತೂರಿ ಜೋಡಿ ಪ್ರಣಯದಲ್ಲಿ ಮುಳುಗಿದ್ದು, ಸ್ಥಳಿಯರ ಆಕ್ರೋಶಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿ 9 ರಲ್ಲಿ ಬೈಕ್‌ ಸವಾರಿ ಮಾಡುವಾಗ ದಂಪತಿಗಳು ಪರಸ್ಪರ ಆಲಿಂಗನದಲ್ಲಿ ತೊಡಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಲ್ಲದೆ ಅಜಾಗರೂಕ ಬೈಕ್‌ ರೈಡ್‌, ಹೆಲ್ಮೆಟ್ ಧರಿಸದೆ ರಸ್ತೆ ಸುರಕ್ಷತೆ ನಿಯಮಗಳನ್ನು ಉಲ್ಲಂಘಿಸಿದ್ದಾರೆ.

ಇದನ್ನೂ ಓದಿ: ಬಿಗ್‌ ಬಾಸ್‌ ಮನೆಯಲ್ಲಿ ಜಡೆ ಜಗಳ.. ನಮ್ರತಾ ಜೊತೆ ವಾದಕ್ಕಿಳಿದು ಕಣ್ಣೀರಿಟ್ಟ ತನಿಷಾ!

ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ಜೋಡಿಯ ವಿರುದ್ಧ ಶೀಘ್ರ ಮತ್ತು ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು. ಸಿಂಬೋಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವೈರಲ್ ವೀಡಿಯೊಗೆ ಪ್ರತಿಕ್ರಿಯೆಯಾಗಿ, ಹಾಪುರ್ ಪೊಲೀಸರು ಜೋಡಿಗೆ ಭಾರಿ ದಂಡವನ್ನು ವಿಧಿಸುವ ಮೂಲಕ ತಕ್ಷಣ ಕ್ರಮ ಕೈಗೊಂಡಿದ್ದಾರೆ. ವರದಿಗಳ ಪ್ರಕಾರ, ಮೋಟಾರು ವಾಹನ ಕಾಯ್ದೆಯಡಿ ಬೈಕ್ ಸವಾರನಿಗೆ ರೂ 8,000 ದಂಡ ವಿಧಿಸಲಾಗಿದೆ ಮತ್ತು ಅಪಾಯಕಾರಿ ಬೈಕ್‌ ರೈಡ್‌ಗಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿದು ಬಂದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News