ರಶ್ಮಿಕಾ - ರಣಬೀರ್‌ ಲಿಪ್ ಲಾಕ್ ವಿಡಿಯೋ ವೈರಲ್.. ವಿಜಯ್‌ ದೇವರಕೊಂಡ ಕಾಲೆಳೆದ ನೆಟ್ಟಿಜನ್!‌

Ranbeer Kapoor liplock with Rashmika Mandanna : ರಣಬೀರ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಅನಿಮಲ್ ಚಿತ್ರದ ಮೊದಲ ಅಪ್‌ಡೇಟ್ ಇದಾಗಿದೆ. ಈ ಅಪ್‌ಡೇಟ್‌ ಜೊತೆಗೆ ಸಿನಿಮಾದ ಪೋಸ್ಟರ್ ಕೂಡ ಬಿಡುಗಡೆಯಾಗಿದೆ.  

Written by - Chetana Devarmani | Last Updated : Oct 11, 2023, 11:36 AM IST
  • ರಣಬೀರ್ ಕಪೂರ್‌ ಜೊತೆ ರಶ್ಮಿಕಾ ಮಂದಣ್ಣ ಲಿಪ್‌ಲಾಕ್
  • ಅನಿಮಲ್ ಚಿತ್ರದ ಮೊದಲ ಅಪ್‌ಡೇಟ್ ಪೋಸ್ಟರ್‌ ವೈರಲ್‌
  • ವಿಜಯ್ ದೇವರಕೊಂಡ ಕಾಲೆಳೆದ ನೆಟ್ಟಿಜನ್‌
ರಶ್ಮಿಕಾ - ರಣಬೀರ್‌ ಲಿಪ್ ಲಾಕ್ ವಿಡಿಯೋ ವೈರಲ್.. ವಿಜಯ್‌ ದೇವರಕೊಂಡ ಕಾಲೆಳೆದ ನೆಟ್ಟಿಜನ್!‌  title=
Rashmika Ranabeer

Ranbeer Kapoor Rashmika Mandanna : ಬಾಲಿವುಡ್ ಸ್ಟಾರ್ ಹೀರೋ ರಣಬೀರ್ ಕಪೂರ್ ಅವರು ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯಾಗಿ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣಾ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಭದ್ರಕಾಳಿ ಪಿಕ್ಚರ್ಸ್ ಮತ್ತು ಟಿ ಸೀರೀಸ್ ಬ್ಯಾನರ್ ಅಡಿಯಲ್ಲಿ ಭೂಷಣ್ ಕುಮಾರ್ ಮತ್ತು ಪ್ರಣಯ್ ರೆಡ್ಡಿ ವಂಗ ಜಂಟಿಯಾಗಿ ನಿರ್ಮಿಸಿದ್ದಾರೆ. ಈಗಾಗಲೇ ಈ ಸಿನಿಮಾದಿಂದ ಬಿಡುಗಡೆಯಾಗಿರುವ ಪೋಸ್ಟರ್ ಹಾಗೂ ಟೀಸರ್ ಗಳು ಸಿನಿಮಾದ ನಿರೀಕ್ಷೆಯನ್ನು ನೆಕ್ಸ್ಟ್‌ ಲೆವೆಲ್ ಗೆ ಕೊಂಡೊಯ್ದಿವೆ. ಚಿತ್ರವು ಡಿಸೆಂಬರ್ 01 ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ.

ಇದನ್ನೂ ಓದಿ: ಅನಿರುದ್ಧ್ ಜತಕರ್ ಅಭಿನಯದ "chef ಚಿದಂಬರ" ಚಿತ್ರದ ಚಿತ್ರೀಕರಣ ಮುಕ್ತಾಯ! 

ತಯಾರಕರು ಇತ್ತೀಚೆಗೆ ಈ ಚಿತ್ರದ ಮೊದಲ ಸಿಂಗಲ್ ಅಪ್‌ಡೇಟ್ ಅನ್ನು ಪ್ರಕಟಿಸಿದ್ದಾರೆ. ಹುಡುಗಿಯ ಕುರಿತಾದ ಸುಮಧುರ ಹಾಡನ್ನು ಬುಧವಾರ ಬಿಡುಗಡೆ ಮಾಡಲಿದ್ದೇವೆ ಎಂದು ಚಿತ್ರತಂಡ ಪ್ರಕಟಿಸಿದೆ. ಈ ನಿಟ್ಟಿನಲ್ಲಿ ವಿಶೇಷ ಪೋಸ್ಟರ್ ಕೂಡ ಬಿಡುಗಡೆಯಾಗಿದೆ. ಖಾಸಗಿ ಜೆಟ್‌ನಲ್ಲಿ ರಣಬೀರ್ ಮತ್ತು ರಶ್ಮಿಕಾ ಲಿಪ್ ಲಾಕ್ ಮಾಡುತ್ತಿರುವ ಫೋಟೋವನ್ನು ತಯಾರಕರು ಬಿಡುಗಡೆ ಮಾಡಿದ್ದಾರೆ. 

 

 

ಮನನ್ ಭಾರದ್ವಾಜ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಈ ರಿವೇಂಜ್ ಡ್ರಾಮಾ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ಅನಿಲ್ ಕಪೂರ್ ರಣಬೀರ್ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಇದರಲ್ಲಿ ಬಾಬಿ ಡಿಯೋಲ್ ಮತ್ತು ಹಿರಿಯ ನಟ ಪೃಥ್ವಿ ರಾಜ್ ವಿಲನ್ ಪಾತ್ರಗಳಲ್ಲಿ ನಟಿಸಿದ್ದಾರೆ. 

 

 

ಇದನ್ನೂ ಓದಿ: ಭಗವಾನ್‌ ರಾಮನ ಪಾತ್ರಕ್ಕಾಗಿ ಮಾಂಸ ಮತ್ತು ಮದ್ಯ ತ್ಯಜಿಸಿದ ಬಾಲಿವುಡ್‌ ಸ್ಟಾರ್‌ ನಟ..! 

ಇದೀಗ ರಶ್ಮಿಕಾ ಮಂದಣ್ಣ ಹಾಗೂ ರಣಬೀರ್‌ ಕಪೂರ್‌ ಲಿಪ್‌ ಲಾಕ್‌ ಫೋಟೋ ಎಲ್ಲೆಡೆ ವೈರಲ್‌ ಆಗಿದೆ. ಇದು ವಿಜಯ್‌ ದೇವರಕೊಂಡ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇನ್ನೂ ಕೆಲವರು ವಿಜಯ್‌ ಕಾಲೆಳೆಯುತ್ತಿದ್ದಾರೆ. ಅಲ್ಲದೇ, ಹಿಂದೆ ವಿಜಯ್‌ ದೇವರಕೊಂಡ ಜೊತೆ ಲಿಪ್ ಲಾಕ್‌ ಮಾಡಿ ರಶ್ಮಿಕಾ ಸುದ್ದಿಯಾಗಿದ್ದರು. ಇದೀಗ ಮತ್ತೊಮ್ಮೆ ಈ ಹಾಟ್‌ ಪೋಸ್‌ ನಿಂದ ವೈರಲ್‌ ಆಗುತ್ತಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News