Viral Video : ಸಿಗರೇಟ್​ ಸೇದುತ್ತ ಹೊಗೆ ಬಿಡುವ ಏಡಿಯ ವಿಡಿಯೋ ವೈರಲ್‌

Viral Video : ಇಂಟರ್‌ನೆಟ್‌ನಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಏಡಿಯೊಂದು ಸಿಗರೇಟ್ ಸೇದುತ್ತಿದೆ. ಅಷ್ಟೇ ಅಲ್ಲ, ಸಿಗರೇಟು ಸೇದಿದ ನಂತರ ಅದು ತನ್ನ ಹೊಗೆಯನ್ನು ಹೊರಹಾಕುತ್ತದೆ, ಅದು ಮನುಷ್ಯನಂತೆಯೇ ಕಾಣುತ್ತದೆ.   

Written by - Chetana Devarmani | Last Updated : Dec 12, 2022, 06:04 PM IST
  • ಸಿಗರೇಟ್​ ಸೇದುತ್ತ ಹೊಗೆ ಬಿಡುವ ಏಡಿ
  • ಅದು ಮನುಷ್ಯನಂತೆಯೇ ಕಾಣುತ್ತದೆ
  • ಇಂಟರ್‌ನೆಟ್‌ನಲ್ಲಿ ವೈರಲ್ ಆಗಿರುವ ವಿಡಿಯೋ
Viral Video : ಸಿಗರೇಟ್​ ಸೇದುತ್ತ ಹೊಗೆ ಬಿಡುವ ಏಡಿಯ ವಿಡಿಯೋ ವೈರಲ್‌  title=
ಏಡಿ

Viral Video : ಪ್ರತಿದಿನ ನೂರಾರು ಗಳು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆಗುತ್ತವೆ. ಇದರಲ್ಲಿ ಜನರು ವಿಭಿನ್ನ ರೀತಿಯಲ್ಲಿ ಆಸಕ್ತಿದಾಯಕವಾದದ್ದನ್ನು ಮಾಡುತ್ತಾರೆ. ಅಂಥದ್ದೊಂದು ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಆದರೂ ಈ ವಿಡಿಯೋ ಯಾವುದೇ ಮನುಷ್ಯರಿಗೆ ಸಂಬಂಧಿಸಿಲ್ಲ. ವೈರಲ್ ಆಗಿರುವ ವಿಡಿಯೋದಲ್ಲಿ ಏಡಿಯೊಂದು ಬೀಚ್‌ನಲ್ಲಿ ಸಿಗರೇಟ್ ಸೇದುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಿಗರೇಟ್‌ ಸೇದಿದ ನಂತರ ಏಡಿ ತನ್ನ ಬಾಯಿಂದ ಹೊಗೆಯನ್ನೂ ಬಿಡುತ್ತದೆ.

ಇದನ್ನೂ ಓದಿ : Viral Video : ಹಾವಿನ ಜೊತೆ ಹುಚ್ಚಾಟ ತಲೆಕೆಟ್ಟು ಸರ್ಪ ಕಚ್ಚಿದ್ದೆಲ್ಲಿ ನೋಡಿ..

Ocean Life ಹೆಸರಿನ Instagram ಪುಟದಲ್ಲಿ ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ. ಇದರಲ್ಲಿ ಏಡಿಯ ಬಾಯಲ್ಲಿ ಸಿಗರೇಟು ಇದ್ದು ಅದನ್ನು ಸೇದಿದ ನಂತರ ಬಾಯಿಂದ ಹೊಗೆಯನ್ನೂ ಬಿಡುತ್ತದೆ. ಒಬ್ಬ ವ್ಯಕ್ತಿ ತುಂಬ ಉತ್ಸಾಹದಿಂದ ಸಿಗರೇಟ್ ಸೇದುತ್ತಿದ್ದಾನೆಂಬಂತೆ ಕಾಣುತ್ತದೆ. 

 

 
 
 
 

 
 
 
 
 
 
 
 
 
 
 

A post shared by Ocean Life (@oceanlife.4u)

 

ವಿಡಿಯೋದ ಕಾಮೆಂಟ್‌ ಬಾಕ್ಸ್‌ನಲ್ಲಿ, ಸೋಷಿಯಲ್‌ ಮೀಡಿಯಾ ಬಳಕೆದಾರರು ಅನೇಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಕೆಲವು ಬಳಕೆದಾರರು ಇದನ್ನು ಸಮುದ್ರ ಪ್ರಾಣಿಗಳ ಜೀವನಕ್ಕೆ ಮಾರಕ ಎಂದು ಕರೆದಿದ್ದಾರೆ. ವಿಡಿಯೋ ಇದುವರೆಗೆ ಲಕ್ಷಾಂತರ ಲೈಕ್‌ಗಳು ಮತ್ತು ವೀಕ್ಷಣೆಗಳನ್ನು ಪಡೆದಿದೆ. ಈ ವಿಡಿಯೋವನ್ನು ನೆಟ್ಟಿಗರು ಕೂಡ ತುಂಬಾ ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ : Snake Video : ಕಚ್ಚಲು ಬಂದ ಹಾವನ್ನು ತುಳಿದು ಕೊಂದ ವಿಚಿತ್ರ ಪಕ್ಷಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News