Dolphin jumping over a rainbow : ತಂತ್ರಜ್ಞಾನದ ಪ್ರಗತಿಯೊಂದಿಗೆ.. ಸಾಮಾಜಿಕ ಮಾಧ್ಯಮವು ವೇಗವಾಗಿ ಬೆಳೆಯುತ್ತಿದೆ. ಜಗತ್ತಿನಲ್ಲಿ ಏನೇ ನಡೆದರೂ ಸೋಷಿಯಲ್ ಮೀಡಿಯಾದ ಮೂಲಕ ಕ್ಷಣಾರ್ಧದಲ್ಲಿ ಗೊತ್ತಾಗುತ್ತದೆ. ಯುವಕರು ಮಾತ್ರವಲ್ಲ ದೊಡ್ಡವರಿಗೂ ಬೆಳಗ್ಗೆ ಎದ್ದು ವಾಟ್ಸಾಪ್, ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್ ನೋಡದೆ ದಿನ ಆರಂಭವಾಗುವುದಿಲ್ಲ. ಪ್ರಾಣಿಗಳ ತುಂಟಾಟ, ಸುದ್ದಿ, ವೈರಲ್ ವಿಡಿಯೋಗಳನ್ನು ಪ್ರತಿಯೊಬ್ಬರೂ ಆನಂದಿಸುತ್ತಾರೆ. ಕೆಲವು ವಿಡಿಯೋಗಳು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ಇತ್ತೀಚೆಗಷ್ಟೇ ಅಂತಹ ವಿಡಿಯೋವೊಂದು ಇಂಟರ್ನೆಟ್ನಲ್ಲಿ ಸದ್ದು ಮಾಡುತ್ತಿದೆ.
ಡಾಲ್ಫಿನ್ಗಳು ತಮ್ಮ ಬುದ್ಧಿವಂತಿಕೆ, ಹಾಸ್ಯ ಸ್ವಭಾವ ಮತ್ತು ಮಾನವರ ಸ್ನೇಹಪರತೆಗೆ ಹೆಸರುವಾಸಿಯಾಗಿವೆ. ಡಾಲ್ಫಿನ್ಗಳು ಮನುಷ್ಯರೊಂದಿಗೆ ಆಟವಾಡಲು ಬಯಸುತ್ತವೆ. ಅವುಗಳಿಗೆ ಅದು ಆನಂದ ನೀಡುತ್ತದೆ. ಚಿಕ್ಕ ಮಕ್ಕಳು ಕೂಡ ಕಡಲತೀರದಲ್ಲಿ ಡಾಲ್ಫಿನ್ಗಳೊಂದಿಗೆ ಆಟವಾಡುತ್ತಾರೆ. ಡಾಲ್ಫಿನ್ಗಳಿಗೆ ಸಂಬಂಧಿಸಿದ ಅನೇಕ ತಮಾಷೆಯ ವೀಡಿಯೊಗಳು ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಆದರೆ ಇಲ್ಲೊಂದು ವಿಡಿಯೋ ಅವುಗಳನ್ನು ಮೀರಿ ಟ್ರೆಂಡಿಂಗ್ ಆಗುತ್ತಿವೆ.
ಇದನ್ನೂ ಓದಿ: WATCH : ನಡುರಸ್ತೆಯಲ್ಲಿ ಯುವತಿಗೆ ಹೆಲ್ಮೆಟ್ನಿಂದ ಹಿಗ್ಗಾಮುಗ್ಗ ಹೊಡೆದ ಯುವಕ, ವಿಡಿಯೋ ವೈರಲ್
Dolphin jumping over a rainbow
📹@jaimenhudson pic.twitter.com/SOyv9jwTWi
— Science girl (@gunsnrosesgirl3) January 2, 2023
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದರ ಪ್ರಕಾರ... ಬಲವಾದ ಸಮುದ್ರದ ಅಲೆಗಳಲ್ಲಿ ಡಾಲ್ಫಿನ್ ಆಟವಾಡುತ್ತಾ ಮೋಜು ಮಸ್ತಿ ಮಾಡುತ್ತಿದೆ. ಡಾಲ್ಫಿನ್ ನೀರಿನಲ್ಲಿ ಜಿಗಿದ ರಭಸಕ್ಕೆ ಮಳೆಬಿಲ್ಲು ಕಾಣಿಸಿಕೊಳ್ಳುತ್ತದೆ. ಸಾಗರದ ಮೇಲೆ ಉದ್ಭವಿಸಿದ ಮಳೆಬಿಲ್ಲಿನಿಂದ ಡಾಲ್ಫಿನ್ ಜಿಗಿಯುತ್ತದೆ. ಈ ಅದ್ಭುತ ದೃಶ್ಯವು ಪಶ್ಚಿಮ ಆಸ್ಟ್ರೇಲಿಯಾದ ಕರಾವಳಿಯಲ್ಲಿ ನಡೆದಿದೆ. ಈ ವಿಡಿಯೋವನ್ನು ಛಾಯಾಗ್ರಾಹಕ ಜೇಮೆನ್ ಹಡ್ಸನ್ ಚಿತ್ರೀಕರಿಸಿದ್ದಾರೆ.
ಈ ವೀಡಿಯೊವನ್ನು ಕಳೆದ ವರ್ಷ (ಅಕ್ಟೋಬರ್ 2022) ಛಾಯಾಗ್ರಾಹಕ ಜೇಮೆನ್ ಹಡ್ಸನ್ ಅವರು ಹಂಚಿಕೊಂಡಿದ್ದರು. ನಿಜವಾಗಿ ಈ ವಿಡಿಯೋ ಹಳೆಯದಾದರೂ ಈಗ ಮತ್ತೆ ಟ್ರೆಂಡಿಂಗ್ ಆಗಿದೆ. ಕ್ಲಿಪ್ ಅನ್ನು ಹಂಚಿಕೊಂಡಾಗಿನಿಂದ 1.2 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸ್ವೀಕರಿಸಲಾಗಿದೆ. ಈ ವೀಡಿಯೊಗೆ ಲೈಕ್ಗಳು ಮತ್ತು ಕಾಮೆಂಟ್ಗಳ ಮಹಾಪೂರವೇ ಹರಿದುಬರುತ್ತಿದೆ. ಈ 16 ಸೆಕೆಂಡ್ ವೀಡಿಯೋ ನೋಡಿ ಆನಂದಿಸಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.