ಹಕ್ಕಿಗಿಂತಲೂ ವೇಗವಾಗಿ ಹಾರುವ ಮೀನು ! ಸಮುದ್ರ ಮಧ್ಯದಲ್ಲಿ ಕಂಡ ವಿಸ್ಮಯದ ವಿಡಿಯೋ ಇಲ್ಲಿದೆ

Flying Fish Video :ಇಲ್ಲೊಂದು ವಿಡಿಯೋ ಇದೆ. ಈ ವಿಡಿಯೋ ನೋಡುವಾಗ ನಮ್ಮ ಕಣ್ಣುಗಳೇ ನಮಗೆ ಮೋಸ ಮಾಡುತ್ತಿವೆ ಎಂದೆನಿಸಿ ಬಿಡುತ್ತವೆ.

Written by - Ranjitha R K | Last Updated : Sep 6, 2023, 02:53 PM IST
  • ಹಾರುತ್ತಿರುವ ಮೀನನ್ನು ಕಂಡಿರಾ ?
  • ಹಕ್ಕಿಗಿಂತ ವೇಗವಾಗಿ ಹಾರುತ್ತಿದೆ
  • ವೈರಲ್ ಆಗಿದೆ ಈ ವಿಡಿಯೋ
ಹಕ್ಕಿಗಿಂತಲೂ ವೇಗವಾಗಿ ಹಾರುವ ಮೀನು ! ಸಮುದ್ರ ಮಧ್ಯದಲ್ಲಿ ಕಂಡ ವಿಸ್ಮಯದ ವಿಡಿಯೋ ಇಲ್ಲಿದೆ  title=

Flying Fish Video : ಮೀನು ಜಲಚರ ಜೀವಿ. ಅಂದರೆ ನೀರಿನಲ್ಲಿ ಬದುಕುವ ಜೀವಿ.  ಇದರರ್ಥ ದೀರ್ಘಕಾಲದವರೆಗೆ ನೀರಿನಿಂದ ಹೊರಗೆ ಇರುವುದು ಮೀನುಗಳಿಗೆ ಸಾಧ್ಯವಿಲ್ಲ. ನೀರಿನಿಂದ ಹೊರ ತೆಗೆದರೆ ಕೆಲವೇ ಕ್ಷಣಗಳಲ್ಲಿ ಒದ್ದಾಡಿ ಪ್ರಾಣ ಬಿಡುತ್ತದೆ. ಎಲ್ಲಾ ಪ್ರಾಣಿಗಳು ಬದುಕಬೇಕಾದರೆ ಉಸಿರಾಡಬೇಕು.  ಮೀನುಗಳು ಕೂಡಾ ಹಾಗೆಯೇ. 

ಮೀನುಗಳು ಕಿವಿರುಗಳನ್ನು ಹೊಂದಿರುತ್ತವೆ. ಈ ಕಿವಿರುಗಳು ಮೀನಿನ ಶ್ವಾಸಕೋಶದಂತೆ ಕಾರ್ಯನಿರ್ವಹಿಸುತ್ತದೆ. ಇದು ಗರಿಗಳಂತಹ ರಚನೆಗಳಿಂದ ಮಾಡಲ್ಪಟ್ಟಿದೆ. ಮೀನು ತನ್ನ ಬಾಯಿಯ ಮೂಲಕ ನೀರನ್ನು ಹೀರಿಕೊಂಡು ಗರಿಗಳ ಕಿವಿರುಗಳ ಮೂಲಕ ಉಸಿರಾಡುತ್ತದೆ. ಈ ಮೂಲಕ ಬದುಕುತ್ತವೆ. ಆದರೆ ನೀರಿನಿಂದ ಹೊರ ತೆಗೆದರೆ ಈ ಪ್ರಕ್ರಿಯೆ ಸಾಧ್ಯವಾಗದೆ ಉಸಿರುಗಟ್ಟಿ ಮೀನುಗಳು ಸಾಯುತ್ತವೆ. 

ಇದನ್ನೂ ಓದಿ : Snake Video : ಕಂಬದಂತೆ ನೆಟ್ಟಗೆ ನಿಂತ ನಾಗರಹಾವು, ವಿಸ್ಮಯಕಾರಿ ವಿಡಿಯೋ ವೈರಲ್‌

ಆದರೆ, ಇಲ್ಲೊಂದು ವಿಡಿಯೋ ಇದೆ. ಈ ವಿಡಿಯೋ ನೋಡುವಾಗ ನಮ್ಮ ಕಣ್ಣುಗಳೇ ನಮಗೆ ಮೋಸ ಮಾಡುತ್ತಿವೆ ಎಂದೆನಿಸಿ ಬಿಡುತ್ತವೆ. ಯಾಕೆಂದರೆ ಈ ವಿಡಿಯೋದಲ್ಲಿ ಸಮುದ್ರ ಮಧ್ಯದಲ್ಲಿ ಮೀನೊಂದು ಬಹು ದೂರದವರೆಗೆ ಹಾರುವುದನ್ನು ಕಾಣಬಹುದು. ಅದು ಕೂಡಾ ಹಕ್ಕಿಗಿಂತ ವೇಗವಾಗಿ. ಈ ಮೀನನ್ನು ಹಿಂಬಾಲಿಸಿಕೊಂಡು ಬೋಟ್ ವೊಂದು ಸಾಗುವುದನ್ನು ಕೂಡಾ ಕಾಣಬಹುದು. ಈ ಹಾರುತ್ತಿರುವ ಮೀನು ವಿಮಾನದ ರೀತಿಯಲ್ಲಿ ಕಾಣಿಸುತ್ತದೆ. 

 

ಇದನ್ನೂ ಓದಿ : ಪೋಸ್ಟ್‌ಮಾರ್ಟಮ್ ಕೋಣೆಯಲ್ಲಿ ಇದ್ದಕ್ಕಿದ್ದಂತೆ ಚಲಿಸಲು ಆರಂಭಿಸಿದ ಬಿದಿರಿನ ಏಣಿ: ಭಯಾನಕ ವಿಡಿಯೋ ವೈರಲ್

ಈ ಹಾರುವ ಮೀನಿನ ವಿಡಿಯೋವನ್ನು @buitengebieden ಎಂಬ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಇಷ್ಟಪಟ್ಟಿದ್ದಾರೆ. ಮಾತ್ರವಲ್ಲ ರಿಪೋಸ್ಟ್ ಕೂಡಾ ಮಾಡಿದ್ದಾರೆ. ಪ್ರಕೃತಿಯ ವೈಚಿತ್ರ್ಯಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News