Trending Video: ರೈಲಿನಲ್ಲಿ ಪ್ರಯಾಣಿಸುವಾಗ ಅನೇಕ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡುವುದು ಹೇಗೆ ಅಪರಾಧವೋ, ಅದೇ ರೀತಿ ರೈಲಿನಲ್ಲಿ ಬೀಡಿ-ಸಿಗರೇಟ್ ಸೇದುವುದನ್ನು ನಿಷೇಧಿಸಲಾಗಿದೆ. ಹೀಗಿದ್ದರೂ ಕೆಲವರು ರೈಲಿನಲ್ಲಿ ರಹಸ್ಯವಾಗಿ ಸಿಗರೇಟ್ ಸೇದುತ್ತಿರುವುದು ಕಂಡು ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಹುಡುಗಿಯೊಬ್ಬಳು ರೈಲಿನಲ್ಲಿ ಇಂತಹ ಕೆಲಸ ಮಾಡುತ್ತಿದ್ದಾಳೆ. ಯಾರೂ ಅದನ್ನು ನೋಡಲು ಇಷ್ಟಪಡುವುದಿಲ್ಲ. ರೈಲಿನಲ್ಲಿ ಸಿಗರೇಟು ಸೇದುತ್ತಾ ಸಿಕ್ಕಿಬಿದ್ದರೆ ಭಾರಿ ದಂಡ ವಿಧಿಸುವುದು ಎಲ್ಲರಿಗೂ ಗೊತ್ತಿರುವ ವಿಚಾರ.
ಇದನ್ನೂ ಓದಿ-Diabetes ನಿಯಂತ್ರಿಸಬೇಕೆ? ಇಂದಿನಿಂದಲೇ ಈ 6 ಮನೆ ಉಪಾಯಗಳನ್ನು ನಿಮ್ಮದಾಗಿಸಿಕೊಳ್ಳಿ!
ವಿಡಿಯೋ ನೋಡಿದ್ರೆ ಜನರು ಅವಾಕ್ಕಾಗಿದ್ದಾರೆ
ರೈಲಿನಲ್ಲಿ ಸಿಗರೇಟ್ ಸೇದಿದರೆ ಅದು ಅಪರಾಧದ ಅಡಿಯಲ್ಲಿ ಬರುತ್ತದೆ. ಅಂಥವರು ಜೈಲಿಗೆ ಹೋಗಬೇಕಾಗಬಹುದು. ಇದರ ಹೊರತಾಗಿಯೂ, ರೈಲಿನಲ್ಲಿ ಹುಡುಗಿಯೊಬ್ಬಳು ಬಹಿರಂಗವಾಗಿ ಧೂಮಪಾನ ಮಾಡುತ್ತಿರುವುದು ಕಂಡುಬಂದಿದೆ. ಆದರೆ ಹುಡುಗಿಯ ಮುಖದಲ್ಲಿ ಮಾತ್ರ ಕಿಂಚಿತ್ತು ಅದರ ಭಯ ಕಾಣಿಸುತ್ತಿಲ್ಲ. ರೈಲಿನೊಳಗೆ ಅನೇಕ ಜನರು ಕುಳಿತಿರುವುದನ್ನು ನೀವು ನೋಡಬಹುದು. ಈ ಜನರ ಮಧ್ಯೆ ಹುಡುಗಿಯೊಬ್ಬಳು ಸಿಗರೇಟ್ ಸೇದುತ್ತಿದ್ದಾಳೆ. ಹುಡುಗಿ ತುಂಬಾ ಸಲೀಸಾಗಿ ಪಫ್‌ಗಳ ಮೇಲೆ ಪಫ್‌ಗಳನ್ನು ಎಳೆಯುತ್ತಿದ್ದಾಳೆ, ಆದರೆ ಯಾರೂ ಅವಳನ್ನು ತಡೆಯಲು ಧೈರ್ಯ ಮಾಡುತ್ತಿಲ್ಲ. ಈ ಸಂದರ್ಭದಲ್ಲಿ ಸಹಪ್ರಯಾಣಿಕನೋರ್ವ ಹುಡುಗಿ ಸಿಗರೆಟ್ ಸೇದುವ ದೃಶ್ಯವನ್ನು ತನ್ನ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾನೆ. ಯಾವುದಕ್ಕೂ ಒಂದು ಸಾರಿ ಈ ವಿಡಿಯೋ ನೀವೂ ನೋಡಿ..
@AshwiniVaishnaw
इन लड़कियों ने रात भर गांजा और सीक्रेट करें पिया है 😡
Yah log Asansol mein chadhi thi Tata Katihar train mein pic.twitter.com/vo5YwI3DIf— Parmanand kumar Saw (@Parmana93518260) February 27, 2023
ಇದನ್ನೂ ಓದಿ-Health Tips: ಸಕ್ಕರೆ ಕಾಯಿಲೆ ಇರುವವರಿಗೆ ಈ ಸಿಹಿ ಹಣ್ಣು ಒಂದು ವರದಾನವಿದ್ದಂತೆ!
ರೈಲಿನಲ್ಲಿ ಅನೇಕ ಜನರು ಕುಳಿತಿರುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದು. ಇನ್ನು ಕೆಲವರು ಸ್ಥಳಾವಕಾಶದ ಕೊರತೆಯಿಂದ ಕೆಳಗೆ ನೆಲದ ಮೇಲೆ ಕುಳಿತುಕೊಂಡಿದ್ದಾರೆ. ಅಲ್ಲಿ ಒಬ್ಬ ಹುಡುಗಿ ನಿಂತಿದ್ದಾಳೆ ಮತ್ತು ಸಾಕಷ್ಟು ಜನರಿರುವ ರೈಲಿನಲ್ಲಿ ತುಂಬಾ ಲವಲವಿಕೆಯಿಂದ ಸಿಗರೇಟು ಸೇದುತ್ತಿದ್ದಾಳೆ. ಸಿಕ್ಕಿಹಾಕಿಕೊಳ್ಳುವ ಭಯವೂ ಅವಳಿಗಿಲ್ಲ. ವೀಡಿಯೊ ಪ್ರಕಾರ, ಇದು ಟಾಟಾ ಕತಿಹಾರ್ ರೈಲಿನಲ್ಲಿ ಕಂಡುಬಂದ ದೃಶ್ಯವಾಗಿದೆ. ಈ ಹುಡುಗಿ ಅಸನ್ಸೋಲ್ ನಿಂದ ಪ್ರಯಾಣ ಬೆಳೆಸಿದ್ದಳು ಎನ್ನಲಾಗಿದೆ. @Parmana93518260 ಹೆಸರಿನ ಟ್ವಿಟರ್ ಖಾತೆಯಿಂದ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಇದರೊಂದಿಗೆ ‘ಈ ಹುಡುಗಿಯರು ರಾತ್ರಿಯಿಡೀ ಗಾಂಜಾ, ಸಿಗರೇಟ್ ಸೇದಿದ್ದಾರೆ’ ಎಂಬ ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.