Viral video : ರಸ್ತೆ ಮಧ್ಯೆಯೇ ಜುಟ್ಟು ಹಿಡಿದು ಹೊಡೆದಾಡಿಕೊಂಡ ಹೆಣ್ಣು ಮಕ್ಕಳು

Girls Fighting Video: ಇತ್ತೀಚಿನ ದಿನಗಳಲ್ಲಿ ಕೆಲವು ಹುಡುಗಿಯರು ಪರಸ್ಪರ ಹೊಡೆದಾಟದಲ್ಲಿ ತೊಡಗಿರುವ ವಿಡಿಯೋ ಇಂಟರ್ನೆಟ್‌ನಲ್ಲಿ ತೀವ್ರವಾಗಿ ವೈರಲ್ ಆಗುತ್ತಿದೆ.  ಸ್ಥಳೀಯರ ಮಧ್ಯಪ್ರವೇಶದ ನಂತರ, ಎಲ್ಲಾ ಹುಡುಗಿಯರು ಶಾಂತವಾಗಿದ್ದು, ಜಗಳ ಕೊನೆಯಾಗಿದೆ. 

Written by - Ranjitha R K | Last Updated : Aug 2, 2022, 03:24 PM IST
  • ವೈರಲ್ ಆಯಿತು ಹುಡುಗಿಯರ ಫೈಟಿಂಗ್ ವಿಡಿಯೋ
  • ಜುಟ್ಟು ಜುಟ್ಟು ಹಿಡಿದು ಬಗ್ಗಿಸಿ ಹೊಡೆದಾಡುವ ಹುಡುಗಿಯರು
  • ಡಿಜೆ ಸೌಂಡ್ ನಡುವೆ ಜಗಳವಾಡುತ್ತಿರುವ ಹುಡುಗಿಯರು
Viral video : ರಸ್ತೆ ಮಧ್ಯೆಯೇ ಜುಟ್ಟು ಹಿಡಿದು ಹೊಡೆದಾಡಿಕೊಂಡ ಹೆಣ್ಣು ಮಕ್ಕಳು    title=
Girls Fighting Video (photo twitter)

Girls Fighting Video: ಹುಡುಗರು ಗ್ಯಾಂಗ್ ಕಟ್ಟಿಕೊಂಡು ಹೋಗುವುದು, ಹೊಡೆದಾಡುವುದು ಇಂಥಹ ಅನೇಕ ವಿಡಿಯೋಗಳನ್ನು ನಾವು ನೋಡಿರುತ್ತೇವೆ.  ಆದರೆ, ಅಂತರ್ಜಾಲದಲ್ಲಿ ಇದೀಗ ವೀಡಿಯೋವೊಂದು ಹರಿದಾಡು ತ್ತಿದ್ದು, ಎಲ್ಲರನ್ನು ಹುಬ್ಬೇರುವಂತೆ ಮಾಡಿದೆ. ಹೆಣ್ಣು ಮಕ್ಕಳ ಎರಡು ಗುಂಪು ಹೊಡೆದಾಡಿಕೊಳ್ಳುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.  ಪರಸ್ಪರ ಜುಟ್ಟು ಜುಟ್ಟು ಹಿಡಿದು ಬಗ್ಗಿಸಿ ಹೊಡೆದಾಡುವ ದೃಶ್ಯ ಇಲ್ಲಿ ಕಾಣಿಸುತ್ತದೆ. 

ಹುಡುಗಿಯರ ಹೊಡೆದಾಟದ ವಿಡಿಯೋ ವೈರಲ್ : 
ಇತ್ತೀಚಿನ ದಿನಗಳಲ್ಲಿ ಕೆಲವು ಹುಡುಗಿಯರು ಪರಸ್ಪರ ಹೊಡೆದಾಟದಲ್ಲಿ ತೊಡಗಿರುವ ವಿಡಿಯೋ ಇಂಟರ್ನೆಟ್‌ನಲ್ಲಿ ತೀವ್ರವಾಗಿ ವೈರಲ್ ಆಗುತ್ತಿದೆ. ಈ ವೀಡಿಯೊ ಛತ್ತೀಸ್‌ಗಢದ ಸೂರಜ್‌ಪುರ ಜಿಲ್ಲೆಯಲ್ಲಿರುವ ಬಿಶ್ರಾಮ್‌ಪುರ ಪ್ರದೇಶದ್ದು ಎನ್ನಲಾಗಿದೆ.  ಆದರೆ, ಈ ಹುಡುಗಿಯರು ಇಲ್ಲಿ ಯಾಕೆ ಈ ರೀತಿ ಜಗಳವಾಡುತ್ತಿದ್ದರು ಎನ್ನುವುದು ಮಾತ್ರ ತಿಳಿದು ಬಂದಿಲ್ಲ. ಸ್ಥಳೀಯರ ಮಧ್ಯಪ್ರವೇಶದ ನಂತರ, ಎಲ್ಲಾ ಹುಡುಗಿಯರು ಶಾಂತವಾಗಿದ್ದು, ಜಗಳ ಕೊನೆಯಾಗಿದೆ. 

ಇದನ್ನೂ ಓದಿ : Tiger And Bird Video: ಜೀವನವಿಡಿ ಮರೆಯದ ಪಾಠ ಕಲಿಸಿ, ಹುಲಿರಾಯನ ಬೆವರಿಳಿಸಿದ ಪುಟ್ಟ ಪಕ್ಷಿ

 

ಡಿಜೆ  ಸೌಂಡ್ ನಡುವೆ ಜಗಳವಾಡುತ್ತಿರುವ ಹುಡುಗಿಯರು :
ಏತನ್ಮಧ್ಯೆ, ಹುಡುಗಿಯರು ಜಗಳವಾಡುತ್ತಿದ್ದರೆ, ಸ್ಥಳೀಯ ಜನರು ವೀಡಿಯೊ  ಮಾಡಿದ್ದಾರೆ. ಮಾತ್ರವಲ್ಲ ಅದನ್ನು ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ಹರಿ ಬಿಟ್ಟಿದ್ದಾರೆ. ಹೆಣ್ಣು ಮಕ್ಕಳ ಹೊಡೆದಾಟದ ವೀಡಿಯೋ  ಇದೀಗ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.  

ಆದರೆ Zee ಮೀಡಿಯಾ ಈ ವೀಡಿಯೊವನ್ನು ದೃಢೀಕರಿಸುವುದಿಲ್ಲ. 

ಇದನ್ನೂ ಓದಿ :  viral video : ರಸಗುಲ್ಲಾ ತಿನ್ನಿಸುವ ಭರದಲ್ಲಿ ವರನಿಗೆ ಮುತ್ತಿಟ್ಟ ನಾದಿನಿ..! ವಧು ಕಕ್ಕಾಬಿಕ್ಕಿ ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News