Lemon sold for 1.5 lakhs : ಬೇಡಿಕೆಯ ಮೇಲೆ ತರಕಾರಿಗಳ ಮತ್ತು ಹಣ್ಣುಗಳ ಬೆಲೆ ಹೆಚ್ಚಾಗುವುದು ಸಾಮಾನ್ಯ. ಆಗಾಗ ನಿಂಬೆ ಹಣ್ಣಿಗೂ ಡಿಮ್ಯಾಂಡ್ ಬಂದಾಗ ಒಂದು ಹಣ್ಣು 5 ರಿಂದ 10 ರೂ.ಗೆ ಮಾರಾಟವಾಗುವುದನ್ನು ನೀವು ನೋಡಿರಬಹುದು. ಆದ್ರೆ ಲಕ್ಷಗಟ್ಟಲೆ ಅಚ್ಚರಿಯ ಬೆಲೆ ಸಿಗುವುದನ್ನು ನೀವು ಗಮನಿಸಿದ್ದೀರಾ..? ಈ ಕುರಿತು ವಿಶೇಷ ಮಾಹಿತಿ ಇಲ್ಲಿದೆ..
ಇಂಗ್ಲೆಂಡಿನ ಕುಟುಂಬವೊಂದಕ್ಕೆ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದಾಗ 19ನೇ ಶತಮಾನದ ಬೀರುವೊಂದರಲ್ಲಿ 285 ವರ್ಷ ಹಳೆಯ ನಿಂಬೆಹಣ್ಣು ಸಿಕ್ಕಿದೆ. ಈ ಹಣ್ಣು ಇದೀಗ ಸುಮಾರು ರೂ.1.5 ಲಕ್ಷಕ್ಕೆ ಹರಾಜಾಗಿದೆ ಎನ್ನಲಾಗಿದೆ. ಈ ಸುದ್ದಿ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ.
ಇದನ್ನೂ ಓದಿ:ಮಾಲ್ಡೀವ್ಸ್ ನಿಂದ ವೀಸಾ ನಿಯಮ ಉಲ್ಲಂಘನೆ, ಮಾದಕ ವಸ್ತು ಅಕ್ರಮ ಮಾರಾಟ ಸಂಬಂಧಿಸಿ 43 ಭಾರತೀಯರ ಗಡಿಪಾರು
ಹೌದು.. ನಿಂಬೆ ನಮ್ಮ ಆಹಾರದ ರುಚಿಯನ್ನು ಸುಧಾರಿಸುತ್ತದೆ. ಅಲ್ಲದೆ ಇದು ಅನೇಕ ಆರೋಗ್ಯ ಗುಣಗಳನ್ನು ಸಹ ಹೊಂದಿದೆ. ಮಾರುಕಟ್ಟೆಯಲ್ಲಿ ಅಗ್ಗದ ದರಕ್ಕೆ ನಿಂಬೆ ದೊರೆಯುತ್ತದೆ. ಆದರೆ ಇಲ್ಲೊಂದು ನಿಂಬೆಹಣ್ಣು ಸುಮಾರು ಒಂದು ಲಕ್ಷದ ಐದು ಸಾವಿರ ರೂಪಾಯಿಗೆ ಮಾರಾಟವಾಗಿದೆ. ಆದ್ರೆ, ಈ ನಿಂಬೆಹಣ್ಣು ತಿನ್ನಲು ಯೋಗ್ಯವಾಗಿಲ್ಲ. ಬ್ರಿಟಿಷ್ ಮಾಧ್ಯಮ ವರದಿಗಳ ಪ್ರಕಾರ, ಕುಟುಂಬವೊಂದಕ್ಕೆ ಮನೆಯನ್ನು ಸ್ವಚ್ಛಗೊಳಿಸುವಾಗ 19ನೇ ಶತಮಾನದ ನಿಂಬೆಹಣ್ಣು ಸಿಕ್ಕಿದೆ. ಇದು 2 ಇಂಚಿನ ಕಂದುಬಣ್ಣದ ವಿಲ್ಟೆಡ್ ತಳಿಯ ನಿಂಬೆ.
ಸುಮಾರು 19ನೇ ಶತಮಾನದ್ದು ಅಂತ ತಿಳಿದಿದ್ದ ಕುಟುಂಬಕ್ಕೆ, ಅದು 285 ವರ್ಷ ಹಳೆಯದು ಎಂದು ತಿಳಿದು ಶಾಕ್ ಆಗಿದೆ. ಈ ಕುರಿತ ಸುದ್ದಿಯನ್ನು 'ದಿ ಸನ್' ಪ್ರಕಟಿಸಿದೆ. ಇದಲ್ಲದೆ, ನಿಂಬೆ ಮೇಲೆ ನವೆಂಬರ್ 4, 1739 ರಂದು ಮಿಸ್ ಇ ಬಾಕ್ಸ್ಟರ್ ಅದನ್ನು ಉಡುಗೊರೆಯಾಗಿ ನೀಡಿದ್ದಾಗಿ ಬರೆಯಲಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಈ ನಿಂಬೆಯನ್ನು ಭಾರತದಿಂದ ಇಂಗ್ಲೆಂಡ್ಗೆ ತರಲಾಯಿತು ಎಂದು ನಂಬಲಾಗಿದೆ.
ಇದನ್ನೂ ಓದಿ: ಅಬುಧಾಬಿಯಲ್ಲಿ ಸ್ವಾಮಿ ನಾರಾಯಣ ದೇಗುಲವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ
ಹರಾಜುದಾರ ಡೇವಿಡ್ ಬ್ರೆಟೆಲ್, ಈ ನಿಂಬೆ ಕೇವಲ ರೂ.4-5 ಸಾವಿರಕ್ಕೆ ಮಾರಾಟವಾಗಬಹುದೆಂದು ಅಂತ ನಿರೀಕ್ಷಿಸಿದ್ದರು, ಆದರೆ ಅದರ ಬೆಲೆ ರೂ.1 ಲಕ್ಷ ತಲುಪಿತು. ಇನ್ನು ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ನಿಂಬೆಹಣ್ಣಿನ ಕುರಿತು ತಿಳಿಯಲು ನೆಟ್ಟಿಗರು ಕಾತುರರಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.