Lovers Video : ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿನಿತ್ಯ ಲಕ್ಷಾಂತರ ವಿಡಿಯೋಗಳು ಅಪ್ ಲೋಡ್ ಆಗುತ್ತಿರುತ್ತವೆ. ಇವುಗಳ ಪೈಕಿ ಕೆಲವೊಂದು ವಿಡಿಯೋಗಳು ಅದೆಷ್ಟು ತಮಾಷೆಯಾಗಿರುತ್ತವೆ ಎಂದರೆ ಮತ್ತೆ ಮತ್ತೆ ನೋಡಬೇಕು ಅನ್ನಿಸುತ್ತದೆ. ಇನ್ನು ಕೆಲ ವಿಡಿಯೋಗಳು ಬೆಚ್ಚಿ ಬೀಳಿಸುತ್ತವೆ. ಇನ್ನು ಕೆಲ ವಿಡಿಯೋಗಳನ್ನು ನೋಡುವಾಗ ನಮ್ಮ ಸುತ್ತ ಮುತ್ತ ಇಂಥಹ ಘಟನೆಗಳು ಕೂಡಾ ಘಟಿಸುತ್ತವೆಯಾ ಎಂದು ನಮ್ಮನ್ನೇ ಯೋಚನೆಗೆ ತಳ್ಳುತ್ತದೆ. ಇಲ್ಲಿ ವೈರಲ್ ಆಗಿರುವ ವಿಡಿಯೋ ಪ್ರೇಮಿಗಳಿಗೆ ಸಂಬಂಧಿಸಿದ್ದು..
ಪ್ರೀತಿ ಯಾರಿಗೆ ಎಲ್ಲಿ ಬೇಕಾದರೂ ಹುಟ್ಟ ಬಹುದು ಎನ್ನುತ್ತಾರಲ್ಲ? ಅದು ನಿಜ ಇರಬೇಕು. ಈ ವಿಡಿಯೋ ನೋಡಿದಾಗ ಮೇಲಿನ ಮಾತು ಹೌದು ಅನ್ನಿಸುತ್ತದೆ. ಇಲ್ಲಿ ಹುಡುಗ ಮತ್ತು ಹುಡುಗಿ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿದ್ದಾರೆ. ಆದರೆ ಪ್ರಯಾಣದ ಮಧ್ಯೆಯೇ ಕಣ್ಣು ಸನ್ನೆ, ಕೈ ಸನ್ನೆಗಳು ನಡೆದಿವೆ. ಕದ್ದು ಮುಚ್ಚಿ ಪ್ರೇಮ ಪತ್ರದ ಓಡಾಟ ಕೂಡಾ ನಡೆದಿದೆ.
ಇದನ್ನೂ ಓದಿ : Viral Video : ತಾತ ಲವ್ ಫೇಲ್ಯೂರ್ ಅನ್ಸತ್ತೆ.. 90 ಹಾಕ್ಕೊಂಡು ಪುಲ್ ಫೀಲಿಂಗ್..! ವಿಡಿಯೋ ನೋಡಿ
ರೈಲಿನಲ್ಲಿ ಒಂದು ಬದಿಯ ಸೀಟಿನಲ್ಲಿ ಹುಡುಗ ಕುಳಿತಿದ್ದರೆ, ಇನ್ನೊಂದು ಸೀಟಿನಲ್ಲಿ ಹುಡುಗಿ. ಅದು ಕೂಡಾ ಎದುರು ಬದುರು ಕುಳಿತಿಲ್ಲ. ಆದರೂ ಪ್ರಯಾಣದ ಮಧ್ಯೆ ಇಬ್ಬರ ನಡುವೆ ಪ್ರೀತಿಯೋ, ಆಕರ್ಷಣೆಯೋ ಮೂಡಿದೆ. ಇಬ್ಬರ ನಡುವೆ ನಗು, ಸನ್ನೆಗಳು ಕೂಡಾ ವಿನಿಮಯವಾಗುತ್ತಿರುವುದನ್ನು ಕಾಣಬಹುದು. ಹುಡುಗ ಪದೇ ಪದೇ ಹುಡುಗಿಯನ್ನು ನೋಡಿ ನಗುತ್ತಿರುತ್ತಾನೆ. ರೈಲಿನಲ್ಲಿ ಎಲ್ಲರೂ ಇರುವ ಕಾರಣ ಹುಡುಗಿ ಸ್ವಲ್ಪ ಸಂಕೊಚವೇನೋ ತೋರುತ್ತಾಳೆ. ಆದರೆ, ಸಮಯ ಸಿಕ್ಕಾಗ ಹಾಗೆಯೇ ಪತ್ರ ರವಾನಿಸಿ ಬಿಡುತ್ತಾಳೆ.
ಇದನ್ನೂ ಓದಿ : Viral Video : ವಧುವನ್ನು ಎತ್ತಿಕೊಂಡು ಕಿಸ್ ಕೊಡಲು ಹೋದ ವರ! ಆದ್ರೆ ಸಿಕ್ಕಿದ್ದು ಬಹುದೊಡ್ಡ ಶಾಕ್
ಈ ವಿಡಿಯೋವನ್ನು saktlogg ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋವನ್ನು ಹಂಚಿಕೊಂಡವರು ಹುಡುಗ ಯಾತ್ರೆ ಸಫಲವಾಯಿತು ಎಂದು ಬರೆದುಕೊಂಡಿದ್ದಾರೆ. ಕೆಲವರು ವಿಡಿಯೋ ನೋಡಿ ಸಂತೋಷ ವ್ಯಕ್ತಪಡಿಸಿದರೆ, ಇನ್ನು ಕೆಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಇದೊಂದು ಸ್ಕ್ರಿಪ್ಟ್ ಮಾಡಿ ತೆಗೆದಿರುವ ವಿಡಿಯೋ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದ್ದಂತೂ ಸುಳ್ಳಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.