Monkey Video : ಕೋತಿಯ ತಪ್ಪಿಗೆ ಶಿಕ್ಷೆ, ಒಂದು ರಾಶಿ ಪಾತ್ರೆ ತೊಳೆದ ಬಡಪಾಯಿ ಮಂಗಣ್ಣ

Monkey Video: ಇದರಲ್ಲಿ ಕೋತಿ ಒಂದು ರಾಶಿ ಪಾತ್ರೆಗಳನ್ನು ತೊಳೆಯುತ್ತಿರುವುದನ್ನು ಕಾಣಬಹುದು. ಒಬ್ಬ ಮಹಿಳೆ ಬಂದು ಕೋತಿಗೆ ಪಾತ್ರೆಗಳ ಮೇಲೆ ಪಾತ್ರೆಗಳನ್ನು ತೊಳೆಯಲು ಕೊಡುತ್ತಾರೆ.

Written by - Chetana Devarmani | Last Updated : Aug 8, 2023, 05:57 PM IST
  • ಇಂಟರ್‌ನೆಟ್‌ನಲ್ಲಿ ವೈರಲ್‌ ಆದ ಮಂಗನ ವಿಡಿಯೋ
  • ಕೋತಿಯ ತಪ್ಪಿಗೆ ಶಿಕ್ಷೆ ಪಾತ್ರೆ ತೊಳೆಯುವ ಶಿಕ್ಷೆ
  • ಮೌನವಾಗಿ ರಾಶಿ ಪಾತ್ರೆ ತೊಳೆದ ಮಂಗಣ್ಣ
Monkey Video : ಕೋತಿಯ ತಪ್ಪಿಗೆ ಶಿಕ್ಷೆ, ಒಂದು ರಾಶಿ ಪಾತ್ರೆ ತೊಳೆದ ಬಡಪಾಯಿ ಮಂಗಣ್ಣ  title=

Monkey Dish washing video : ಮಂಗಗಳ ವಿಡಿಯೋ ಇಂಟರ್‌ನೆಟ್‌ನಲ್ಲಿ ಶರವೇಗದಲ್ಲಿ ವೈರಲ್‌ ಆಗುತ್ತವೆ. ಕೋತಿಗಳು ಮಾಡುವ ಕಿತಾಪತಿ ಒಂದೆರೆಡಲ್ಲ. ಅವುಗಳ ಚೇಷ್ಟೆ ಜನರನ್ನು ನಕ್ಕು ನಲಿಸುತ್ತವೆ. ಏನಾದರೂ ಒಂದು ಕಿಡಿಗೇಡಿತನವನ್ನು ಮಾಡುತ್ತಲೇ ಇರುತ್ತವೆ. ಕೋತಿಗಳು ಇಂತಹ ಚೇಷ್ಟೆಯ ಕೆಲಸಗಳಿಂದಲೇ ಸಾಮಾಜಿಕ ಮಾಧ್ಯಮಗಳಲ್ಲಿ ಜನರ ಗಮನಸೆಳೆಯುವುದು.  
 
ಇದೀಗ ಕೋತಿಯ ಒಂದು ತಮಾಷೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಇದರಲ್ಲಿ ಕೋತಿ ಒಂದು ರಾಶಿ ಪಾತ್ರೆಗಳನ್ನು ತೊಳೆಯುತ್ತಿರುವುದನ್ನು ಕಾಣಬಹುದು. ಒಬ್ಬ ಮಹಿಳೆ ಬಂದು ಕೋತಿಗೆ ಪಾತ್ರೆಗಳ ಮೇಲೆ ಪಾತ್ರೆಗಳನ್ನು ತೊಳೆಯಲು ಕೊಡುತ್ತಾರೆ. ಮಂಗ ಕೂಡ ಸುಮ್ಮನೆ ತನ್ನ ಕೆಲಸ ತಾನು ಮಾಡುತ್ತಿದೆ.

ಇದನ್ನೂ ಓದಿ: ಡಿವೋರ್ಸ್‌ ವದಂತಿ ಮಧ್ಯೆ ದೀಪಿಕಾ - ರಣವೀರ್‌ ವಿಡಿಯೋ ವೈರಲ್‌!

ಈ ವೈರಲ್‌ ವಿಡಿಯೋ ನೋಡಿದರೆ ಕೋತಿಯನ್ನು ಆ ಮಹಿಳೆ ಸಾಕಿದ್ದಾರೆ ಎನಿಸುತ್ತದೆ. ಕೋತಿ ಮಾಡಿದ ಯಾವುದೋ ತಪ್ಪಿಗೆ ಪಾತ್ರೆ ತೊಳೆಯುವ ಶಿಕ್ಷೆಗೆ ಗುರಿಯಾಗಿದೆ ಎನ್ನಲಾಗಿದೆ. ಒಂದು ರಾಶಿ ಪಾತ್ರೆಯನ್ನು ಕೋತಿ ತೊಳೆದಿದೆ. ಮಂಗ ಮೌನವಾಗಿ ಪಾತ್ರೆಗಳನ್ನು ಒಂದರ ನಂತರ ಒಂದರಂತೆ ತೊಳೆಯುವ ವಿಡಿಯೋ ನೋಡುಗರಲ್ಲಿ ನಗು ತರಿಸುತ್ತದೆ.

 

 

ಕೋತಿಯ ವೈರಲ್‌ ವಿಡಿಯೋದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಕೋತಿಯ ಈ ವೀಡಿಯೊವನ್ನು  ____arun____520 ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋ ನೆಟ್ಟಿಗರನ್ನು ಸಖತ್‌ ರಂಜಿಸುತ್ತಿದೆ. 

ಇದನ್ನೂ ಓದಿ: ವೈರಲ್‌ ವಿಡಿಯೋ: 6 ಅಡಿ ಹಾವನ್ನು ಲುಂಗಿಯಲ್ಲಿ ಹಾಕಿಕೊಂಡ ವ್ಯಕ್ತಿ.. ಮುಂದೆ ನೋಡಿ ನಗು ತಡೆಯೋಕೆ ಆಗಲ್ಲ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News