Viral Video: ಅಬ್ಬಾ... ವೃದ್ಧ ದಂಪತಿಯ ಈ ಡ್ಯಾನ್ಸ್‌ ನೋಡಿದ್ರೆ ಫಿದಾ ಆಗ್ತೀರಾ...

ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬ ಮಾತಿದೆ. ಅದಕ್ಕೆ ತಕ್ಕಂತೆ ಈ ವೃದ್ಧ ದಂಪತಿಯ ನೃತ್ಯ ನೋಡುಗರ ಮನ ಸೆಳೆದಿದೆ. weddingbazaarofficial ಎಂಬ ಇನ್‌ಸ್ಟಾಗ್ರಾಂ ಅಧಿಕೃತ ಖಾತೆಯಲ್ಲಿ ವೃದ್ಧ ದಂಪತಿಯ ಡ್ಯಾನ್ಸ್‌ ವಿಡಿಯೋ ಅಪ್‌ಲೋಡ್‌ ಮಾಡಲಾಗಿದೆ. 

Written by - Bhavishya Shetty | Last Updated : May 2, 2022, 02:01 PM IST
  • ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬ ಮಾತಿದೆ. ಅದಕ್ಕೆ ತಕ್ಕಂತೆ ಈ ವೃದ್ಧ ದಂಪತಿಯ ನೃತ್ಯ ನೋಡುಗರ ಮನ ಸೆಳೆದಿದೆ. weddingbazaarofficial ಎಂಬ ಇನ್‌ಸ್ಟಾಗ್ರಾಂ ಅಧಿಕೃತ ಖಾತೆಯಲ್ಲಿ ವೃದ್ಧ ದಂಪತಿಯ ಡ್ಯಾನ್ಸ್‌ ವಿಡಿಯೋ ಅಪ್‌ಲೋಡ್‌ ಮಾಡಲಾಗಿದೆ.
 Viral Video: ಅಬ್ಬಾ... ವೃದ್ಧ ದಂಪತಿಯ ಈ ಡ್ಯಾನ್ಸ್‌ ನೋಡಿದ್ರೆ ಫಿದಾ ಆಗ್ತೀರಾ... title=
Wedding Viral Video

ಇತ್ತೀಚಿನ ದಿನಗಳಲ್ಲಿ ಮನೋಲ್ಲಾಸ ನೀಡುವ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ದೊರಕುತ್ತವೆ. ನವ ಜೋಡಿಗಳ ಮದುವೆ ಡ್ಯಾನ್ಸ್‌ ವಿಡಿಯೋಗಳಂತೂ ಹೆಚ್ಚಾಗಿ ಕಾಣಸಿಗುತ್ತದೆ. ಇನ್ನು ನವಜೋಡಿಗಳಂತೇ ವೃದ್ಧ ದಂಪತಿ ಮದುವೆ ಮನೆಯಲ್ಲಿ ಸಖತ್‌ ಸ್ಟೆಪ್‌ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ದಂಪತಿ ಡ್ಯಾನ್ಸ್‌ ನೆಟ್ಟಿಗರು ಫಿದಾ ಆಗಿದ್ದಾರೆ. 

ಇದನ್ನು ಓದಿ: ಸಾಗರದಾಚೆಗೆ ʼನಮ್‌ ರೇಡಿಯೋʼ ಹವಾ: ಕನ್ನಡ ಕೇಳುಗರ ಮನಮುಟ್ಟಿದ ಅಂತರ್ಜಾಲ ರೇಡಿಯೋ

ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬ ಮಾತಿದೆ. ಅದಕ್ಕೆ ತಕ್ಕಂತೆ ಈ ವೃದ್ಧ ದಂಪತಿಯ ನೃತ್ಯ ನೋಡುಗರ ಮನ ಸೆಳೆದಿದೆ. weddingbazaarofficial ಎಂಬ ಇನ್‌ಸ್ಟಾಗ್ರಾಂ ಅಧಿಕೃತ ಖಾತೆಯಲ್ಲಿ ವೃದ್ಧ ದಂಪತಿಯ ಡ್ಯಾನ್ಸ್‌ ವಿಡಿಯೋ ಅಪ್‌ಲೋಡ್‌ ಮಾಡಲಾಗಿದೆ. ಈ ವಿಡಿಯೋದಲ್ಲಿ 75 ವರ್ಷದ ವೃದ್ಧ ತನ್ನ ಮಡದಿ ಜೊತೆ ಹಾಡಿಗೆ ಭರ್ಜರಿ ಸ್ಟೆಪ್ಸ್‌ ಹಾಕಿದ್ದಾರೆ. ಈ ಆನಂದದ ವಿಡಿಯೋ ಎಂಥವರನ್ನೂ ಮೋಡಿ ಮಾಡುವಂತಿದೆ. 

ಇತ್ತೀಚಿನ ಮದುವೆಗಳು ಸಂಭ್ರಮ ಸಡಗರದ ಜೊತೆ ಡ್ಯಾನ್ಸ್‌, ಹಾಡುಗಳಿಂದ ಕೂಡಿರುತ್ತದೆ. ಅದೇ ರೀತಿ ಇಲ್ಲಿ ನಡೆದ ಮದುವೆ ಸಮಾರಂಭದಲ್ಲಿ ದಂಪತಿ ಉತ್ಸಾಹದಿಂದ ಕುಣಿದಿದ್ದಾರೆ. ಈ ದೃಶ್ಯವನ್ನು ನೆರೆದಿದ್ದವರು ಖುಷಿಯಿಂದ ಕಣ್ತುಂಬಿಕೊಂಡಿದ್ದಾರೆ. ಜತೆಗೆ, ಇವರನ್ನು ಇನ್ನಷ್ಟು ಹುರಿದುಂಬಿಸುತ್ತಿದ್ದಾರೆ. ನವ ಜೋಡಿಯಂತೆ ನಾಚಿಸುವ ಇವರ ನೃತ್ಯ ಉಲ್ಲಾಸಪೂರ್ಣವಾಗಿದೆ. 

ಇದನ್ನು ಓದಿ: Ringworm Treatment: ದದ್ದು, ತುರಿಕೆ ಮತ್ತು ರಿಂಗ್ವರ್ಮ್ ನಿಂದ ಪರಿಹಾರ ಪಡೆಯುವುದು ಹೇಗೆ?

ಇನ್ನು ಈ ವಿಡಿಯೋಗೆ ನೆಟ್ಟಿಗರು ಫಿದಾ ಆಗಿದ್ದು, ಸಾಕಷ್ಟು ವೀಕ್ಷಣೆ ಪಡೆದಿದೆ. ಜೊತೆಗೆ  ಮೆಚ್ಚುಗೆ ಮತ್ತು ಉತ್ತಮ ಪ್ರತಿಕ್ರಿಯೆಗಳೂ ವ್ಯಕ್ತವಾಗಿವೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News