Old man Viral Video : ಇಂದಿನ ಜಗತ್ತಿನಲ್ಲಿ, ಸಾಮಾಜಿಕ ಮಾಧ್ಯಮವು ನಮ್ಮ ಜೀವನದೊಂದಿಗೆ ದೊಡ್ಡ ಬಾಂದವ್ಯವನ್ನೇ ಹೆಣೆದುಕೊಂಡಿದೆ. ಇಂಟರ್ನೆಟ್ ಒಂದು ಪ್ರತ್ಯೇಕ ಪ್ರಪಂಚವಾಗಿ ಕಾರ್ಯನಿರ್ವಹಿಸುತ್ತದೆ. ಇಲ್ಲಿ ನಾವು ಅನೇಕ ವಿಭಿನ್ನ ವಿಷಯಗಳನ್ನು ಕಲಿಯುತ್ತೇವೆ. ಇಲ್ಲಿ ಹಂಚಿಕೊಳ್ಳಲಾದ ಸಂದೇಶಗಳು, ಫೋಟೋಗಳು ಮತ್ತು ವೀಡಿಯೊಗಳು ನಮಗೆ ಅನೇಕ ಸಂದೇಶಗಳನ್ನು ನೀಡುತ್ತವೆ.
ಇದು ಉಪಯುಕ್ತ ಮಾಹಿತಿಯೊಂದಿಗೆ ಮನರಂಜನೆಯ ಮಾರ್ಗವಾಗಿದೆ. ಅಂತರ್ಜಾಲದಲ್ಲಿ ಹಂಚಿಕೊಳ್ಳಲಾದ ವೀಡಿಯೊಗಳು ನಮ್ಮ ದೈನಂದಿನ ಜೀವನದಲ್ಲಿ ನಾವು ಎದುರಿಸುತ್ತಿರುವ ಉದ್ವೇಗದಿಂದ ಸ್ವಲ್ಪ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಇದೀಗ ಅಂತದ್ದೇ ಒಂದು ವಿಡಿಯೋ ಸಖತ್ ವೈರಲ್ ಆಗಿದೆ ಅದನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.
ಇದನ್ನೂ ಓದಿ-Drinking Water Before Sleep: ರಾತ್ರಿ ಮಲಗುವ ಮುನ್ನ ನೀರು ಕುಡಿಯುವುದು ಎಷ್ಟು ಸರಿ
ಬೈಕ್ ನಲ್ಲಿ ಸ್ಟಂಟ್ ಮಾಡುತ್ತಿರುವ ವೃದ್ಧ:
ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಬಿಳಿ ಗಡ್ಡಧಾರಿ, ಬಿಳಿ ಕುರ್ತಾ ಪೈಜಾಮ ಧರಿಸಿರುವ ವೃದ್ಧರೊಬ್ಬರು ಬೈಕ್ ನಲ್ಲಿ ಹಲವು ಸಾಹಸಗಳನ್ನು ಮಾಡುತ್ತಿರುವುದು ಕಂಡು ಬರುತ್ತಿದೆ. ಒಂದು ಸಾರಿ ಬೈಕಿನ ಹ್ಯಾಂಡಲ್ ನಿಂದ ಕೈ ತೆಗೆದು ಬೈಕ್ ಓಡಿಸುತ್ತಾನೆ, ಇನ್ನೊಂದು ಸಾರಿ ಬೈಕಿನ ಹಿಂಬದಿಯಲ್ಲಿ ಮಲಗಿ ಬೈಕ್ ಮೇಲೆ ಬಲ್ಲೆ ಬಲ್ಲೆ ಎಂದು ಕೈ ಎತ್ತಿ ಬೀಸುತ್ತಾನೆ.
इन्हीं हरकतों की वजह से सरकार ने पुरानी पेंशन योजना बंद की है। 😅 pic.twitter.com/9On89AL5SJ
— Ankit Yadav Bojha (@Ankitydv92) August 13, 2023
ಇದನ್ನು ಬೈಕ್‌ನ ಹಿಂದಿನ ವ್ಯಕ್ತಿಯೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ಈ ವೀಡಿಯೋ ಅಪಾಯಕಾರಿ ಮಾತ್ರವಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಸಿಗುವ ಲೈಕ್ಸ್ ಮತ್ತು ವೀವ್ಸ್ ಗಳಿಗಾಗಿ ಜನರು ಏನು ಬೇಕಾದರೂ ಮಾಡಲು ಧೈರ್ಯ ಮಾಡುತ್ತಾರೆ ಎಂಬ ಸ್ಪಷ್ಟತೆಯನ್ನೂ ನೀಡುತ್ತದೆ.
ಇದನ್ನೂ ಓದಿ-ಚಂದ್ರಯಾನ-3 ಲ್ಯಾಂಡಿಂಗ್‌ನ ಕ್ಷಣ ಕ್ಷಣದ ಅಪ್ಡೇಟ್, ಮೊಬೈಲ್‌ನಲ್ಲಿ ಲೈವ್ ಸ್ಟ್ರೀಮಿಂಗ್ !
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.