Snake Giving Birth : ರಸ್ತೆ ಮಧ್ಯೆ ಮರಿಗಳಿಗೆ ಜನ್ಮ ಕೊಟ್ಟ ಹಾವು, ಅಬ್ಬಾ.. ಒಂದೇ ಬಾರಿ ಹೊರಬಂದವು ಇಷ್ಟೊಂದು ಮರಿನಾಗರ!

Snake Giving Birth video : ಸುಮಾರು 3,000 ವಿವಿಧ ಜಾತಿಯ ಹಾವುಗಳಿವೆ ಎಂದು ಸ್ನೇಕ್ ಸೈನ್ಸ್ ಹೇಳುತ್ತದೆ. ಹಾವುಗಳ ಸಂತಾನೋತ್ಪತ್ತಿ ಕೂಡ ಒಂದು ಹಾವಿನಿಂದ ಇನ್ನೊಂದು ಹಾವಿಗೆ ಬದಲಾಗುತ್ತದೆ.   

Written by - Chetana Devarmani | Last Updated : Jul 20, 2023, 11:11 AM IST
  • ಸುಮಾರು 3,000 ವಿವಿಧ ಜಾತಿಯ ಹಾವುಗಳಿವೆ
  • ರಸ್ತೆ ಮಧ್ಯೆ ಮರಿಗಳಿಗೆ ಜನ್ಮ ಕೊಟ್ಟ ಹಾವು
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್‌
Snake Giving Birth : ರಸ್ತೆ ಮಧ್ಯೆ ಮರಿಗಳಿಗೆ ಜನ್ಮ ಕೊಟ್ಟ ಹಾವು, ಅಬ್ಬಾ.. ಒಂದೇ ಬಾರಿ ಹೊರಬಂದವು ಇಷ್ಟೊಂದು ಮರಿನಾಗರ!  title=
Snake Giving Birth

Snake Viral video : ಪ್ರಪಂಚದಾದ್ಯಂತ ಇರುವ ಎಲ್ಲಾ ಹಾವುಗಳು ಬಹುತೇಕ ಒಂದೇ ರೀತಿಯ ದೇಹದ ಆಕಾರವನ್ನು ಹೊಂದಿದ್ದರೂ, ಸುಮಾರು 3,000 ಜಾತಿಯ ಹಾವುಗಳಿವೆ ಎಂದು ಸ್ನೇಕ್ ಸೈನ್ಸ್ ಹೇಳುತ್ತದೆ. ಹಾಗೆಯೇ ಹಾವುಗಳ ಸಂತಾನೋತ್ಪತ್ತಿ ಕೂಡ ಒಂದು ಹಾವಿನಿಂದ ಇನ್ನೊಂದು ಹಾವಿಗೆ ಬದಲಾಗುತ್ತದೆ ಎಂಬುದು ಅನೇಕರಿಗೆ ಆಶ್ಚರ್ಯವನ್ನುಂಟು ಮಾಡುವ ಇನ್ನೊಂದು ವಿಷಯ. ಹಾವುಗಳು ಸಾಮಾನ್ಯವಾಗಿ ಮೊಟ್ಟೆಯಿಡುವ ಮೂಲಕ ಮಾತ್ರ ಜನ್ಮ ನೀಡುತ್ತವೆ ಎಂದು ಹಲವರು ಭಾವಿಸುತ್ತಾರೆ. ಆದರೆ ವಾಸ್ತವವಾಗಿ, ಕೆಲವು ಜಾತಿಯ ಹಾವುಗಳು ಸಸ್ತನಿಗಳಂತೆ ಮೊಟ್ಟೆಗಳನ್ನು ಇಡುವುದಿಲ್ಲ, ಆದರೆ ಮರಿಗಳಿಗೆ ಜನ್ಮ ನೀಡುತ್ತವೆ.

ನೀವು ಎಂದಾದರೂ ಹಾವುಗಳಿಗೆ ಜನ್ಮ ನೀಡುವುದನ್ನು ನೋಡಿದ್ದೀರಾ? ಅನೇಕ ಹಾವುಗಳು ಮೊಟ್ಟೆಗಳನ್ನು ಇಟ್ಟು ಮರಿಗಳು ಹೊರಬರುವುದನ್ನು ನೋಡಿರಬಹುದು. ಆದರೆ ಹಾವುಗಳು ಮರಿ ಹಾಕುವುದನ್ನು ನೋಡಿರಲಿಕ್ಕಿಲ್ಲ. ಅಂತಹವರಿಗಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ಹಾವಿನ ವಿಡಿಯೋ ಇಲ್ಲಿದೆ.

ರಸ್ತೆಯಲ್ಲಿ ಹೋಗುವಾಗ ಹಾವು ಮರಿಗಳಿಗೆ ಜನ್ಮ ನೀಡುತ್ತದೆ. ಆ ವೇಳೆ ಹಾವು ಒಂದೆಡೆ ನಿಂತು ಅಲ್ಲೇ ಸುಳಿದಾಡುತ್ತಿತ್ತು. ಮತ್ತೊಂದೆಡೆ, ಈ ವಿಡಿಯೋದಲ್ಲಿ ಹಾವಿನ ಬಾಲದ ಕೆಳಭಾಗದಲ್ಲಿ ಹಾವಿನ ಮರಿಗಳು ಹೊರಬರುವುದನ್ನು ಕಾಣಬಹುದು.

ಇದನ್ನೂ ಓದಿ: Viral Video: ಟೊಮೆಟೊದಲ್ಲಿ ಮಗಳ ತುಲಾಭಾರ ಮಾಡಿದ ತಂದೆ

ಈ ದೃಶ್ಯವನ್ನು ನೋಡಿದ ಪ್ರತ್ಯಕ್ಷದರ್ಶಿಗಳು ಅಲ್ಲಿಯೇ ನಿಂತು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ವಿಡಿಯೋ ರೆಕಾರ್ಡ್ ಮಾಡಲು ಆರಂಭಿಸಿದರು. ಹೀಗಾಗಿ ಯೂಟ್ಯೂಬರ್ ಒಬ್ಬರು ಈ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.. ಇದೀಗ ಆ ವಿಡಿಯೋ ವೈರಲ್ ಆಗುತ್ತಿದೆ. ಅನೇಕ ನೆಟಿಜನ್‌ಗಳು ಈ ವಿಡಿಯೋವನ್ನು ಬಹಳ ಆಸಕ್ತಿಯಿಂದ ವೀಕ್ಷಿಸುತ್ತಿದ್ದಾರೆ.

ಹಾವುಗಳು ಅನೇಕ ಜನರಿಗೆ ಆಸಕ್ತಿಯನ್ನುಂಟು ಮಾಡುತ್ತವೆ. ಈ ವಿಡಿಯೋದಲ್ಲಿ ಹಾವು ಮರಿಗಳನ್ನು ಹಾಕುತ್ತಿದ್ದಂತೆ ಅದಕ್ಕೆ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಾವಿನ ವಿಜ್ಞಾನವನ್ನು ತಿಳಿದುಕೊಳ್ಳಲು ಆಸಕ್ತಿ ಹೊಂದಿರುವ ಅನೇಕ ಉತ್ಸಾಹಿಗಳಿದ್ದಾರೆ. ಹಾವುಗಳು ಯಾವಾಗ, ಏಕೆ ಮತ್ತು ಹೇಗೆ ವರ್ತಿಸುತ್ತವೆ ಎಂಬುದರ ಬಗ್ಗೆ ಅನೇಕರಿಗೆ ಅನುಮಾನಗಳಿವೆ. ಹಾಗಾಗಿಯೇ ಇಂಟರ್‌ನೆಟ್‌ನಲ್ಲಿ ಹಾವುಗಳಿಗೆ ಸಂಬಂಧಿಸಿದ ವಿಡಿಯೋಗಳಿಗೆ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ವಿಡಿಯೋವನ್ನು ಕೂಡ 2.74 ಕೋಟಿ ಜನರು ವೀಕ್ಷಿಸಿದ್ದು, 1 ಲಕ್ಷ 25 ಸಾವಿರ ಮಂದಿ ಲೈಕ್ ಮಾಡಿದ್ದಾರೆ.

ಇದನ್ನೂ ಓದಿ: Sonia Gandhi Dance: ರೈತರೊಂದಿಗೆ ಸೋನಿಯಾ ಗಾಂಧಿ ಡ್ಯಾನ್ಸ್, ವಿಡಿಯೋ ವೈರಲ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News