Man Drink Sanke Blood: ಜಗತ್ತಿನಲ್ಲಿ ಹಲವು ದೇಶಗಳಿವೆ. ಪ್ರತಿಯೊಂದು ದೇಶವು ತನ್ನದೇ ಆದ ವಿಶಿಷ್ಟ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಹೊಂದಿದೆ. ಜೊತೆಗೆ ಆಹಾರ ಪದ್ಧತಿಯೂ ವಿಭಿನ್ನ. ವಿಶೇಷವಾಗಿ ಚೀನಾದ ಕೆಲವು ರಾಜ್ಯಗಳಲ್ಲಿ ಕೆಲವರು ಬಾವಲಿಯನ್ನು ತಿನ್ನುತ್ತಾರೆ. ಇನ್ನು ಕೆಲವು ದೇಶಗಳಲ್ಲಿ ಮೊಲದ ಬಿರಿಯಾನಿ ತಿನ್ನುತ್ತಾರೆ. ಆದರೆ ಇಂಡೋನೇಷ್ಯಾದಲ್ಲಿ, ಒಂದು ಪ್ರದೇಶದಲ್ಲಿ ವಿಷಕಾರಿ ಹಾವುಗಳನ್ನೇ ಆಹಾರವಾಗಿ ಸೇವಿಸುವ ಜನರಿದ್ದಾರೆ. ಇದೆಲ್ಲ ಅಚ್ಚರಿ ಎನಿಸಿದರೂ ಸತ್ಯ. ಸದ್ಯ ಯುವಕನೊಬ್ಬ ಬೃಹತ್ ಗಾತ್ರದ ನಾಗರ ಹಾವನ್ನು ತಿನ್ನುತ್ತಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ನೆಟಿಜನ್‌ಗಳು ಅಚ್ಚರಿಗೊಂಡಿದ್ದಾರೆ.
ಇದನ್ನೂ ಓದಿ: Viral Video: ಎಣ್ಣೆ ಗುಂಗಲ್ಲಿ ಕೋತಿಯ ಕಿತಾಪತಿ! ಗಟಗಟನೆ ಬಿಯರ್ ಕುಡಿಯುವ ಮಂಗಣ್ಣನ ಫನ್ನಿ ವಿಡಿಯೋ
ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಅತ್ಯಂತ ಅಪಾಯಕಾರಿ ದೈತ್ಯ ನಾಗರ ಹಾವನ್ನು ಹಿಡಿದುಕೊಂಡು ಅದರ ಶಿರಚ್ಛೇದವನ್ನು ಮಾಡುವುದನ್ನು ನೋಡಬಹುದು. ಹಾವಿನ ತಲೆಯನ್ನು ಕತ್ತರಿಸಿದ ವ್ಯಕ್ತಿ ಅದರ ರಕ್ತವನ್ನು ಮತ್ತೊಬ್ಬನ ಬಾಯಿಗೆ ಸುರಿಯುವ ದೃಶ್ಯ ಎಲ್ಲರ ಮೈ ಝುಮ್ಮೆನಿಸುವಂತಿದೆ. ಇದು ತುಂಬಾ ಅಪಾಯಕಾರಿ ಹಾವು ಎಂದು ತಿಳಿದಿದ್ದರೂ, ಅದನ್ನು ಹಿಡಿದು ಅದರ ತಲೆ ಕತ್ತರಿಸಿ ರಕ್ತವನ್ನು ಕುಡಿಯಲು ಗಟ್ಟಿ ಗುಂಡಿಗೆಯೇ ಇರಬೇಕು. ಏಕೆಂದರೆ ನಾಗರ ಹಾವುಗಳು ಅತ್ಯಂತ ಅಪಾಯಕಾರಿ ಮಾತ್ರವಲ್ಲ ವಿಷಕಾರಿ ಹಾವುಗಳು. ಅವರು ಒಮ್ಮೆ ಕಚ್ಚಿದರೆ, ವ್ಯಕ್ತಿಯ ಪ್ರಾಣ ಕಳೆದುಕೊಳ್ಳುವ ಸಾಧ್ಯತೆಗಳಿವೆ.
ಅಲ್ಲದೇ ಈ ವಿಡಿಯೋ ನೋಡಿದ್ರೆ.. ಹಾವಿನ ತಲೆಯನ್ನು ಕತ್ತರಿಸಿದ ವ್ಯಕ್ತಿ ನಾಗರ ಹಾವಿನ ಮೇಲಿದ್ದ ಚರ್ಮವನ್ನು ನಿಧಾನವಾಗಿ ತೆಗೆದಿದ್ದಾನೆ. ಮೇಲಾಗಿ ಹಾವಿನ ಒಳಗಿದ್ದ ಸಣ್ಣ ಕರುಳನ್ನು ಹೊರತೆಗೆದು ತುಂಡು ಮಾಡಿ ಪಕ್ಕದಲ್ಲಿದ್ದ ಯುವಕನಿಗೆ ಕೊಟ್ಟಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ರೊಚ್ಚಿಗೆದ್ದಿದ್ದಾರೆ. YouTube ಚಾನಲ್ ಒಂದರಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ: Rakhi Sawant: ಈ ಬಾರಿ ಕಾರು ಚಾಲಕನ ನಂಬಿ ಮೋಸ ಹೋದ ರಾಖಿ.. ಎದೆಬಡಿದುಕೊಂಡು ಅಳುವಂಥದ್ದೇ ನಡೆದೋಯ್ತಾ?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.