Viral Video: ನಡುರಸ್ತೆಯಲ್ಲಿ ಒಂದೇ ಬಾರಿ 10 ಹಾವುಗಳ ಮಿಲನ.. ಮೈಝುಮ್ಮೆನ್ನಿಸುವ ವಿಡಿಯೋ ವೈರಲ್‌

Snake Viral Video : ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ನಾವು 10 ನಾಗರ ಹಾವುಗಳು ರೊಮ್ಯಾನ್ಸ್ ಮಾಡುವುದನ್ನು ನೋಡಬಹುದು. ನಡುರಸ್ತೆಯಲ್ಲಿ ಒಂದೇ ಬಾರಿ 10 ಹಾವುಗಳ ಮಿಲನದ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.   

Written by - Chetana Devarmani | Last Updated : Jun 9, 2023, 12:54 PM IST
  • ಒಂದೇ ಬಾರಿ 10 ಹಾವುಗಳ ಮಿಲನ
  • ಮೈಝುಮ್ಮೆನ್ನಿಸುವ ವಿಡಿಯೋ ವೈರಲ್‌
  • ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋ
Viral Video: ನಡುರಸ್ತೆಯಲ್ಲಿ ಒಂದೇ ಬಾರಿ 10 ಹಾವುಗಳ ಮಿಲನ.. ಮೈಝುಮ್ಮೆನ್ನಿಸುವ ವಿಡಿಯೋ ವೈರಲ್‌  title=
Snake Video

Snake Viral Video : ಇಂದಿನ ಒತ್ತಡದ ಜಗತ್ತಿನಲ್ಲಿ ಸಾಮಾಜಿಕ ಮಾಧ್ಯಮ ಮನರಂಜನೆಯ ಒಂದು ಮಾರ್ಗವಾಗಿದೆ. ಜನರು ಇಂಟರ್ನೆಟ್‌ನಲ್ಲಿ ಅನೇಕ ರೀತಿಯ ವೈರಲ್‌ ವಿಡಿಯೋಗಳನ್ನು ನೋಡುತ್ತಾರೆ. ಕೆಲವು ಮೋಜಿನ ಸಂಗತಿಗಳ ಜೊತೆಗೆ ಸಾಕಷ್ಟು ಉಪಯುಕ್ತ ಮಾಹಿತಿಯನ್ನು ಇವು ಒಳಗೊಂಡಿರುತ್ತವೆ. ಈ ವೈರಲ್‌ ವಿಡಿಯೋಗಳಲ್ಲಿ ಕೆಲವು ನಮ್ಮನ್ನು ರಂಜಿಸಿದರೆ ಮತ್ತೆ ಕೆಲವು ಭಯ ಭೀತರನ್ನಾಗಿಸುತ್ತವೆ. ಸಾಮಾನ್ಯವಾಗಿ, ಹಾವುಗಳ ವಿಡಿಯೋಗಳು ಅನೇಕ ಜನರನ್ನು ಆಕರ್ಷಿಸುತ್ತವೆ. ಪ್ರಪಂಚದ ಅತ್ಯಂತ ಭಯಭೀತ ಜೀವಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟ ಹಾವಿನ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಬೇಗ ವೈರಲ್‌ ಆಗಿ ಬಿಡುತ್ತವೆ. ಇದೀಗ ಅಂಥದ್ದೇ ಒಂದು ವಿಡಿಯೋ ವೈರಲ್‌ ಆಗಿದೆ. 

ಇದನ್ನೂ ಓದಿ: ನಾಗರ ಹಾವು ಹೇಗೆ ಮೊಟ್ಟೆ ಇಡುತ್ತೆ ನೋಡಿ, ಅಚ್ಚರಿಯ ವಿಡಿಯೋ ವೈರಲ್‌

ನಾಗರಹಾವು ವಿಶ್ವದ ವಿಷಕಾರಿ ಹಾವು ಎಂದು ಗುರುತಿಸಲಾಗಿದೆ. ಇದು ಸುಮಾರು 22 ಅಡಿಗಳವರೆಗೆ ಬೆಳೆಯುತ್ತದೆ. ಈ ಹಾವುಗಳು ಸಾಮಾನ್ಯವಾಗಿ ದಟ್ಟವಾದ ಕಾಡುಗಳಲ್ಲಿ ಕಂಡುಬರುತ್ತವೆ. ಇದರ ವಿಷವು ಒಂದೇ ಕಡಿತದಲ್ಲಿ ಮನುಷ್ಯನನ್ನು ಕೊಲ್ಲುವಷ್ಟು ಪ್ರಬಲವಲ್ಲ. ಆದರೆ ಇದರ ಕಡಿತವು 75% ವರೆಗಿನ ಮರಣ ಪ್ರಮಾಣವನ್ನು ಹೊಂದಿದೆ. ಈ ಹಾವುಗಳು 6 ಕೆಜಿ ವರೆಗೆ ತೂಕ ಹೊಂದಿರುತ್ತವೆ. ಆಗ್ನೇಯ ಏಷ್ಯಾದಲ್ಲಿ ಹೆಚ್ಚಾಗಿ ನಾಗರಹಾವುಗಳು ಕಂಡುಬರುತ್ತವೆ. 

ನಾಗರ ಹಾವಿಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ನಾವು 10 ನಾಗರಹಾವುಗಳನ್ನು ರಸ್ತೆಯ ಮಧ್ಯದಲ್ಲಿ ನೋಡಬಹುದು. ಈ ಹಾವುಗಳು ಒಂದೇ ಸ್ಥಳದಲ್ಲಿ ಮಿಲನ ಹೊಂದುತ್ತಿವೆ. ಇದು ಬಹಳ ಅಪರೂಪದ ದೃಶ್ಯ. ಈ ದೃಶ್ಯ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದಉ, ಸಖತ್‌ ವೈರಲ್‌ ಆಗುತ್ತಿದೆ. ಈ ವಿಡಿಯೋವನ್ನು YouTube ನಲ್ಲಿ ಹಂಚಿಕೊಳ್ಳಲಾಗಿದೆ. ಇದು ಸಾವಿರಾರು ವೀಕ್ಷಣೆಗಳು ಮತ್ತು ಲೈಕ್‌ಗಳನ್ನು ಪಡೆದುಕೊಂಡಿದೆ.  

ಇದನ್ನೂ ಓದಿ: ಲೋಟದಲ್ಲಿರುವ ನೀರನ್ನು ಗಟ ಗಟನೆ ಕುಡಿಯುವ ಹಾವು.! ಅಪರೂಪದ ವಿಡಿಯೋ ವೈರಲ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News