ಬ್ರಿಟನ್: ಶಾಲಾ-ಕಾಲೇಜುಗಳಲ್ಲಿ ಜಗಳ, ಹೊಡೆದಾಟಗಳ ಸುದ್ದಿಗಳು ಇತ್ತೀಚೆಗೆ ಹೆಚ್ಚಾಗಿ ಕೇಳಿಬರುತ್ತಿವೆ. ಅನೇಕ ಬಾರಿ ಮಕ್ಕಳ ಜಗಳಗಳು ಅತಿರೇಕಕ್ಕೆ ಹೋಗುತ್ತವೆ ಮತ್ತು ಅವರು ಪರಸ್ಪರರ ಮೇಲೆ ಆಕ್ರಮಣ ಮಾಡುತ್ತಾರೆ. ವಿದ್ಯಾರ್ಥಿಗಳ ಜಗಳದಲ್ಲಿ ಶಿಕ್ಷಕರು ಮಧ್ಯಸ್ಥಿಕೆ ವಹಿಸುತ್ತಾರೆ. ಆದರೆ ಇಂತಹ ವಿವಾದ ಬಗೆಹರಿಸಲು ಯತ್ನಿಸುತ್ತಿದ್ದ ಶಿಕ್ಷಕಿಯೊಬ್ಬರ ಜೀವಕ್ಕೆ ಅಪಾಯ ಎದುರಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಪ್ರಕರಣ ಸೆಪ್ಟೆಂಬರ್ 28 ರಂದು ಅಮೆರಿಕದ ಮಿಚಿಗನ್‌ನ ಫ್ಲಿಂಟ್‌ನಲ್ಲಿರುವ ಸೌತ್‌ವೆಸ್ಟರ್ನ್ ಕ್ಲಾಸಿಕಲ್ ಅಕಾಡೆಮಿಯಲ್ಲಿ ನಡೆದಿದೆ. ಇದರಲ್ಲಿ ಇಬ್ಬರು ಹುಡುಗಿಯರ ನಡುವೆ ತೀವ್ರ ಜಗಳ ನಡೆದಿದೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ ಇಬ್ಬರೂ ಪರಸ್ಪರ ತುಂಬಾ ನಿಂದಿಸಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಲು ಮುಂದಾದ ಶಿಕ್ಷಕಿ ಇಬ್ಬರ ಮನವೊಲಿಸಲು ಯತ್ನಿಸುತ್ತಿರುವುದು ಕಂಡು ಬಂದಿದೆ. ಆದರೆ ಹುಡುಗಿಯೊಬ್ಬಳು ಏಕಾಏಕಿ ಕೋಪಗೊಂಡು ತರಗತಿಯಲ್ಲಿ ಇಟ್ಟಿದ್ದ ಕಬ್ಬಿಣದ ಕುರ್ಚಿಯನ್ನು ಎತ್ತಿಕೊಂಡು ಇನ್ನೊಬ್ಬ ಹುಡುಗಿಯ ಮೇಲೆ ಎಸೆಯುತ್ತಾಳೆ.
ಇದನ್ನೂ ಓದಿ-Amir Khan ಪುತ್ರಿ Ira Khan ಭಾವೀ ಸಂಗಾತಿಯ ಜೊತೆಗಿನ ವರ್ಕ್ ಔರ್ Video Viral!
ಶಿಕ್ಷಕಿಯ ತಲೆಗೆ ಅಪ್ಪಳಿಸಿದ ಕುರ್ಚಿ
ಆದರೆ ಈ ಕುರ್ಚಿ ಎದುರಾಳಿ ಹುಡುಗಿಗೆ ಬಡಿಯುವ ಬದಲು ಶಿಕ್ಷಕಿಯ ತಲೆಗೆ ಬಡಿಯುತ್ತದೆ, ನಂತರ ಅವಳು ನೆಲದ ಮೇಲೆ ಬೀಳುತ್ತಾಳೆ. ಕೆಲಕಾಲ ಆಕೆಯ ದೇಹದಲ್ಲಿ ಯಾವುದೇ ರೀತಿಯ ಚಲನವಲನ ನಿಮಗೆ ಕಾಣಿಸುವುದಿಲ್ಲ . ಆದರೆ ಇಷ್ಟೆಲ್ಲಾ ಆದರೂ ಹುಡುಗಿಯರು ತಮ್ಮ ತಮ್ಮಲ್ಲೇ ಜಗಳವಾಡುವುದನ್ನು ನಿಲ್ಲಿಸದೆ ಪರಸ್ಪರ ಬೈಯುತ್ತಲೇ ಇರುತ್ತಾರೆ. ಇದರ ನಂತರ ಶಿಕ್ಷಕಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
A video on social media shows a disturbing incident at a school in Flint, Michigan, where a female student hurled a chair at another student's head, but it ended up striking a teacher instead. The altercation began when the two female students were arguing. #GUNviolence #crime pic.twitter.com/ganhV7f5IB
— US-Crimes (@OfficialUScrime) September 29, 2023
ಇದನ್ನೂ ಓದಿ-Viral Video: ದೆಹಲಿ ಮೆಟ್ರೊದಲ್ಲಿ ಬೀಡಿ ಹೊತ್ತಿಸಿದ ಕಾಕಾ... ವಿಡಿಯೋ ನೋಡಿ!
ವಿಷಯದ ಗಂಭೀರತೆಯನ್ನು ಕಂಡ ಶಾಲಾ ಆಡಳಿತವು ಆ ಬಾಲಕಿಯರ ಪೋಷಕರಿಗೆ ಪತ್ರ ಬರೆದಿದ್ದು, ಈ ಘಟನೆಯಲ್ಲಿ ಶಾಲೆಯ ಮಹಿಳಾ ಶಿಕ್ಷಕಿಯೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ವಿದ್ಯಾರ್ಥಿನಿಯರ ಮೇಲೆ ಕಾನೂನು ಕ್ರಮ ಜರುಗಿಸಬೇಕೋ ಅಥವಾ ಶಾಲೆಯಿಂದ ಹೊರಹಾಕಬೇಕೋ ಎಂಬುದು ಇನ್ನೂ ನಿರ್ಧಾರವಾಗಿಲ್ಲ ಎನ್ನಲಾಗಿದೆ. ಇದಲ್ಲದೆ, ಫ್ಲಿಂಟ್ ಕಮ್ಯುನಿಟಿ ಸ್ಕೂಲ್ ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ಪೋಷಕರಿಗೆ ಈ ವಿಷಯಗಳನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ತಿಳಿಸಿದ್ದಾರೆ. ಶಾಲೆಯಲ್ಲಿ ಸುರಕ್ಷಿತ ಮತ್ತು ಪೋಷಣೆಯ ವಾತಾವರಣವನ್ನು ಸೃಷ್ಟಿಸಲು ಅವರು ಬದ್ಧರಾಗಿರುವುದಾಗಿ ಹೇಳಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.