Viral Video: ವಾಹನದಲ್ಲಿ ಇಂಧನ ಖಾಲಿ, ಕೈದಿಗಳಿಂದಲೇ ವಾಹನ ತಳ್ಳಿಸಿದ ಪೊಲೀಸರು! 'ಅದು ಬಿಹಾರ' ಎಂದ ನೆಟ್ಟಿಗರು!

Viral Video: ಬಿಹಾರದ ಒಂದು ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗುತ್ತಿದ್ದು, ಇದರಿಂದ ಅಲ್ಲಿನ ಪೊಲೀಸರನ್ನು ಕಂಡು ಜಗತ್ತೇ ನಗುವಂತಾಗಿದೆ. ಅಲ್ಲಿನ ಭಾಗಲ್ಪುರ್ ಜಿಲ್ಲೆಯಲ್ಲಿ, ಹಾಜರುಪಡಿಸಲು ಕೈದಿಗಳನ್ನು ಜೀಪ್ ನಲ್ಲಿ ಸಾಗಿಸುತ್ತಿದ್ದಾಗ, ವಾಹನದ ಇಂಧನ ಖಾಲಿಯಾಗಿದ್ದು, ಪೊಲೀಸರ ಎದುರು ಸಮಸ್ಯೆ ಉದ್ಭವಿಸಿದೆ. ಇದಾದ ಬಳಿಕ ಪೊಲೀಸರು ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. (Viral News In Kannada)  

Written by - Nitin Tabib | Last Updated : Feb 5, 2024, 07:44 PM IST
  • ಇನ್ನೊಬ್ಬ ಬಳಕೆದಾರರು - 'ಇದು ಬಿಹಾರ, ಬಬುವಾ, ಈ ರಾಜ್ಯ ಬೀಗನರ್ಸ್ ಗಾಗಿ ಅಲ್ಲ' ಎಂದು ಬರೆದಿದ್ದಾರೆ.
  • ಮೂರನೇ ಬಳಕೆದಾರರು, 'ಪ್ರಶ್ನೆ ಪತ್ರಿಕೆ ತಯಾರಿಸಲು ಶಿಕ್ಷಕರು ವಿದ್ಯಾರ್ಥಿಗಳನ್ನು ಕೋರುತ್ತಿರುವಂತಿದೆ ಈ ದೃಶ' ಎಂದಿದ್ದಾರೆ.
  • ಇನ್ನೊಬ್ಬ ವ್ಯಕ್ತಿ 'ಇದಕ್ಕಾಗಿ ಅವನ ಶಿಕ್ಷೆಯನ್ನು ಕಡಿಮೆ ಮಾಡಬೇಕು' ಎಂದಿದ್ದಾರೆ. ಈ ವೀಡಿಯೊ ಬಗ್ಗೆ ನಿಮ್ಮ ಅಭಿಪ್ರಾಯವೇನು? ತಿಳಿಸಲು ಮರೆಯಬೇಡಿ.
Viral Video: ವಾಹನದಲ್ಲಿ ಇಂಧನ ಖಾಲಿ, ಕೈದಿಗಳಿಂದಲೇ ವಾಹನ ತಳ್ಳಿಸಿದ ಪೊಲೀಸರು! 'ಅದು ಬಿಹಾರ' ಎಂದ ನೆಟ್ಟಿಗರು! title=

ಭಾಗಲ್ಪುರ್ : ಬಿಹಾರ ಹಲವು ಕಾರಣಗಳಿಗಾಗಿ ಹೆಡ್ ಲೈನ್ ನಲ್ಲಿರುತ್ತದೆ. ಈ ರಾಜ್ಯವು ಆಡುಮಾತಿಗೆ, ಆಹಾರ ಮತ್ತು ಉಪವಾಸ ಹಬ್ಬಗಳಿಗೆ ಹೆಸರುವಾಸಿಯಾಗಿದೆ. ಇತ್ತೀಚೆಗಷ್ಟೇ ಬಿಹಾರ ಅಲ್ಲಿ ನಡೆಯುತ್ತಿರುವ ರಾಜಕೀಯ ನಾಟಕಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿತ್ತು. ಬಿಹಾರದ ರಾಜಕೀಯ ಗದ್ದಲದ ಬಗ್ಗೆ ಎಲ್ಲೆಡೆ ಮೀಮ್‌ಗಳು ನಡೆಯುತ್ತಿದ್ದರೆ, ಬಿಹಾರ ಪೊಲೀಸರು ಈಗ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ಮತ್ತೇನೂ ಅಲ್ಲ ವೈರಲ್ ಆಗಿರುವ ವಿಡಿಯೋ. Viral News In Kannada

ವಾಸ್ತವದಲ್ಲಿ ಏನಾಗಿದೆ ಎಂದರೆ ಖೈದಿಗಳನ್ನು ಹಾಜರುಪಡಿಸಲು ಕರೆದೊಯ್ಯುತ್ತಿದ್ದ ಪೊಲೀಸ್ ವಾಹನದಲ್ಲಿ ಇಂಧನ ಖಾಲಿಯಾಗಿದೆ. ಕೈದಿಗಳನ್ನು ಭಾಗಲ್ಪುರದಿಂದ ನವ್ಗಾಚಿಯಾಗೆ ಕರೆದೊಯ್ಯಲಾಗುತ್ತಿತ್ತು. ಇದಾದ ಬಳಿಕ ಪೊಲೀಸರು ಪೆಟ್ರೋಲ್ ವ್ಯವಸ್ಥೆ ಮಾಡುವ ಬದಲು ಕೈದಿಗಳನ್ನು 500 ಮೀಟರ್ ವರೆಗೆ ವಾಹನ ತಳ್ಳುವಂತೆ ಮಾಡಿದ್ದಾರೆ. ಕೈಗೆ ಕೈಕೋಳ ಹಾಕಿಕೊಂಡ ಖೈದಿಗಳು ಕಾರನ್ನು ತಳ್ಳುತ್ತಿದ್ದಾರೆ. ಈ ವೀಡಿಯೊ ಇದೀಗ ಸಾಮಾಜಿಕ ಮಾಧ್ಯಮದದಲ್ಲಿ ಭಾರಿ ಹೈಲೈಟ್ ಆಗುತ್ತಿದೆ.

ಅಂತಹ ದೃಶ್ಯವನ್ನು ನೋಡಿಲ್ಲ
ಈ ವಿಡಿಯೋಗೆ ಜನರು ಭಾರೀ ಕಾಮೆಂಟ್ ಮಾಡುತ್ತಿದ್ದಾರೆ. ಎಲ್ಲಾ ಕೈದಿಗಳು ಸೊಂಟಕ್ಕೆ ಹಗ್ಗವನ್ನು ಕಟ್ಟಿಕೊಂಡು ಕಾರನ್ನು ಬದಿಗೆ ತಳ್ಳುತ್ತಿರುವುದನ್ನು ನೀವು ವೀಡಿಯೊದಲ್ಲಿ ನೋಡಬಹುದು ಮತ್ತು ಪೊಲೀಸರು ಸಹ ನಡೆದುಕೊಂಡು ಹೋಗುತ್ತಿದ್ದಾರೆ. ಈ ವೀಡಿಯೋ ನೋಡಿದ ಜನರಿಗೂ ಹಳೆಯ ದಿನಗಳು ನೆನಪಾಗುತ್ತಿವೆ. ಇದಕ್ಕೆ ಕಾಮೆಂಟ್ ಮಾಡಿದ ಓರ್ವ ಬಳಕೆದಾರರು- ನ್ಯಾಯಾಲಯದ ತೀರ್ಪಿಗೂ ಮುನ್ನ 'ಆಕ್ಟ್ ಆಫ್ ಕೈಂಡ್ ನೆಸ್ ಅನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು' ಎಂದಿದ್ದಾರೆ.

ಇದನ್ನೂ ಓದಿ-Viral Video: ವಿದ್ಯಾರ್ಥಿಗಳಿಗೆ ಮಗ್ಗಿಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಈ ಟೀಚರ್ ಹೇಳಿಕೊಡುತ್ತಿರುವ ತಂತ್ರ ಸಕ್ಕತ್ತಾಗಿದೆ!
 
ಶಿಕ್ಷೆಯನ್ನು ಕಡಿಮೆ ಮಾಡಿ
ಇನ್ನೊಬ್ಬ ಬಳಕೆದಾರರು - 'ಇದು ಬಿಹಾರ, ಬಬುವಾ, ಈ ರಾಜ್ಯ ಬೀಗನರ್ಸ್ ಗಾಗಿ ಅಲ್ಲ'  ಎಂದು ಬರೆದಿದ್ದಾರೆ. ಮೂರನೇ ಬಳಕೆದಾರರು,  'ಪ್ರಶ್ನೆ ಪತ್ರಿಕೆ  ತಯಾರಿಸಲು ಶಿಕ್ಷಕರು ವಿದ್ಯಾರ್ಥಿಗಳನ್ನು ಕೋರುತ್ತಿರುವಂತಿದೆ ಈ ದೃಶ' ಎಂದಿದ್ದಾರೆ. ಇನ್ನೊಬ್ಬ ವ್ಯಕ್ತಿ 'ಇದಕ್ಕಾಗಿ ಅವನ ಶಿಕ್ಷೆಯನ್ನು ಕಡಿಮೆ ಮಾಡಬೇಕು' ಎಂದಿದ್ದಾರೆ. ಈ ವೀಡಿಯೊ ಬಗ್ಗೆ ನಿಮ್ಮ ಅಭಿಪ್ರಾಯವೇನು? ತಿಳಿಸಲು ಮರೆಯಬೇಡಿ. 

ಇದನ್ನೂ ಓದಿ-Viral Video: ಹೆಚ್ಚು ಗಾಳಿ ಬೇಕೆಂದು ಬಸ್ ಕಿಟಕಿಯಿಂದ ತಲೆ ಹೊರಕ್ಕೆ ಚಾಚಿದ ಪ್ರಯಾಣಿಕ, ನಂತರ ಆಗಿದ್ದೇನು ನೀವೇ ನೋಡಿ!

ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News