ನವದೆಹಲಿ: ಬಾಲ್ಯದಿಂದ ಕಾಲೇಜಿನವರೆಗೆ, ನಮ್ಮ ಅಧ್ಯಯನದ ಸಮಯದಲ್ಲಿ ನಾವು ಹಲವಾರು ರೀತಿಯ ಶಿಕ್ಷಕರನ್ನು ಕಂಡಿರಬಹುದು. ಅನೇಕ ಶಿಕ್ಷಕರು ತಮ್ಮ ಡಿಸಿಪ್ಲೇನ್ ಗಾಗಿ ಹೆಚ್ಚು ಹೆಸರುವಾಸಿಯಾಗಿರುತ್ತಾರೆ. ಆದರೆ ಕೆಲವರು ತಮ್ಮ ಬೋಧನಾ ವಿಧಾನಕ್ಕೆ ಹೆಸರುವಾಸಿಯಾಗಿರುತ್ತಾರೆ. ಈಗ ನೀವು ಯಾವುದೇ ಶಿಕ್ಷಕರನ್ನು ನೆನಪಿಸಿಕೊಳ್ಳಲಿ ಅಥವಾ ಇಲ್ಲದಿರಲಿ, ಜನರು ಯಾವಾಗಲೂ ಗಣಿತ ಶಿಕ್ಷಕರನ್ನು ನೆನಪಿಸಿಕೊಳ್ಳುತ್ತಾರೆ. ಅದು ಶಾಲಾ ಶಿಕ್ಷಕರಾಗಲಿ ಅಥವಾ ಕಾಲೇಜು ಶಿಕ್ಷಕರಾಗಲಿ... ಇದಕ್ಕೆ ಕಾರಣ ಗಣಿತವು ಕಠಿಣ ವಿಷಯವಾಗಿದೆ ಮತ್ತು ಇದು ಎಲ್ಲರಿಗೂ ಸುಲಭವಾಗಿ ತಲೆಗೆ ಹತ್ತುವುದಿಲ್ಲ, ಆದರೆ ಕೆಲವು ಶಿಕ್ಷಕರು ಕಠಿಣ ವಿಷಯವನ್ನು ತಮ್ಮದೇ ಆದ ರೀತಿಯಲ್ಲಿ ಸುಲಭಗೊಳಿಸುತ್ತಾರೆ. ಅಂತಹ ಒಂದು ವಿಡಿಯೋ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.(Viral News In Kannada)
ಗಣಿತ ಒಂದು ವಿಷಯವಾಗಿದ್ದು, ಅದರಲ್ಲಿ ನೀವು ಮಗ್ಗಿಗಳನ್ನು ಸರಿಯಾಗಿ ನನೆಪಿನಲ್ಲಿಟ್ಟುಕೊಂಡರೆ, ವಿಷಯ ತುಂಬಾ ಸುಲಭವಾಗುತ್ತದೆ ಮತ್ತು ಮಗ್ಗಿಗಳನ್ನು ನೆನಪಿಟ್ಟುಕೊಳ್ಳುವುದು ಅತ್ಯಂತ ಕಷ್ಟಕರವಾದ ವಿಷಯವಾಗಿದೆ. ನೀವು ಆವುಗಳನ್ನು ನೆನಪಿಸಿಕೊಂಡರೆ ಲೆಕ್ಕಾಚಾರಗಳು ಸುಲಭವಾಗುತ್ತವೆ. ಹೀಗಾಗಿ ಅವುಗಳನ್ನು ನೆನಪಿಟ್ಟುಕೊಳ್ಳಲು ನಾವು ವಿವಿಧ ವಿಧಾನಗಳನ್ನು ಅಳವಡಿಸಿಕೊಳ್ಳಲು ಇದು ಕಾರಣವಾಗಿದೆ. ಈಗ ವೈರಲ್ ಆಗುತ್ತಿರುವ ಈ ಟೀಚರ್ ಟ್ರಿಕ್ ನೋಡಿ, ಅವರು ತಮ್ಮ ಮಕ್ಕಳಿಗೆ ಮಗ್ಗಿಗಳನ್ನು ಅತ್ಯಂತ ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳುವ ರೀತಿಯಲ್ಲಿ ಹೇಳಿಕೊಡುತ್ತಿದ್ದಾರೆ.
ಇದನ್ನೂ ಓದಿ-Viral Video: ತನ್ನ ಮಕ್ಕಳ ಬೇಟೆಗಾಗಿ ಬಂದ ಚಿರತೆಯ ಬೆವರಿಳಿಸಿದ ಮುಳ್ಳು ಹಂದಿಗಳು
ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಟೀಚರ್ ಸಾಮಾನ್ಯ ರೀತಿಯಲ್ಲಿ ಮಗ್ಗಿಗಳ ಟೇಬಲ್ ಹೇಳಿಕೊಡುತ್ತಿಲ್ಲ, ಆದರೆ ಎಣಿಕೆ ಮಾಡುವ ಮೂಲಕ ಹೇಳುವುದನ್ನು ನೀವು ನೋಡಬಹುದು. ಟೀಚರ್ 4ರ ಮಗ್ಗಿ ಬರೆಯುವ ಮೂಲಕ ಸುಲಭವಾಗಿ ತೋರಿಸುತ್ತಾರೆ, ಇದಕ್ಕಾಗಿ ಅವರು ಈಗಾಗಲೇ ಬರೆದಿರುವ 1, 2 ಮತ್ತು 3 ರ ಮಗ್ಗಿಗಳನ್ನು ಎಣಿಸುತ್ತಾರೆ ಮತ್ತು 4 ರ ಟೇಬಲ್ ಬರೆಯುತ್ತಾರೆ ಮತ್ತು ಈ ವಿಧಾನವು ನಿಜವಾಗಿಯೂ ತುಂಬಾ ಸರಿಯಾಗಿದೆ ಮತ್ತು ವಿಶಿಷ್ಟವಾಗಿದೆ. ಇದರಿಂದಾಗಿ ಟೇಬಲ್ ಕೂಡ ಪೂರ್ಣಗೊಂಡಿದೆ ಮತ್ತು ಈ ಕಠಿಣ ಮಗ್ಗಿಗಳು ಕೂಡ ನೆನಪಿನಲ್ಲುಳಿಯುತ್ತವೆ.
ಇದನ್ನೂ ಓದಿ-Viral Video: ಹೆಚ್ಚು ಗಾಳಿ ಬೇಕೆಂದು ಬಸ್ ಕಿಟಕಿಯಿಂದ ತಲೆ ಹೊರಕ್ಕೆ ಚಾಚಿದ ಪ್ರಯಾಣಿಕ, ನಂತರ ಆಗಿದ್ದೇನು ನೀವೇ ನೋಡಿ!
ಈ ವೀಡಿಯೊವನ್ನು ಬಾಬುರಾಮ್ ಚೌಧರಿ ಎಂಬ ಬಳಕೆದಾರರು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ, ಇದನ್ನು ಇದುವರೆಗೆ ಸಾವಿರಾರು ಜನರು ನೋಡಿದ್ದಾರೆ ಮತ್ತು ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಈ ಕುರಿತು ಬರೆದುಕೊಂಡ ಓರ್ವ ಬಳಕೆದಾರದಾರ, 'ನನಗೆ ಇಂತಹ ಟೀಚರ್ ಸಿಕ್ಕಿದ್ದರೆ, ಮಗ್ಗಿಗಳು ನಿಜವಾಗಿಯೂ ಸುಲಭವಾಗುತ್ತಿದ್ದವು' ಎಂದು ಬರೆದಿದ್ದಾರೆ, ಇನ್ನೊಬ್ಬರು, 'ಮಗ್ಗಿಗಳನ್ನು ಕಂಠಪಾಠ ಮಾಡುವ ವಿಧಾನವು ತುಂಬಾ ನಿಖರವಾಗಿದೆ ಮತ್ತು ಈ ರೀತಿಯಲ್ಲಿ ಮಗ್ಗಿಗಳನ್ನು ನೆನಪಿಟ್ಟುಕೊಳ್ಳುವುದು ತುಂಬಾ ಇಂಟರೆಸ್ಟಿಂಗ್ ಆಗಿದೆ' ಎಂದು ಬರೆದಿದ್ದಾರೆ. ಅನೇಕ ಬಳಕೆದಾರರು ಇದರ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ಸಹ ನೀಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ