Viral News: ವ್ಯಕ್ತಿಗೆ ಥಳಿಸಿದ ವಿಡಿಯೋ ವೈರಲ್; ಉತ್ತರಪ್ರದೇಶದಲ್ಲಿ ಆಸ್ಪತ್ರೆ ಕ್ಲೋಸ್!

15 ದಿನಗಳಷ್ಟು ಹಳೆಯದೆಂದು ಹೇಳಲಾದ ಈ ವೈರಲ್ ವಿಡಿಯೋದಲ್ಲಿ ಯುವಕನನ್ನು ಬೆಲ್ಟ್ ಮತ್ತು ಪೈಪ್‌ನಿಂದ ಅಮಾನುಷವಾಗಿ ಹೊಡೆಯುವುದನ್ನು ಕಾಣಬಹುದುದಾಗಿದೆ.   

Written by - Puttaraj K Alur | Last Updated : Dec 27, 2022, 01:18 PM IST
  • ಯುವಕನೊಬ್ಬನಿಗೆ ಅಮಾನುಷವಾಗಿ ಥಳಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್
  • ಫೈಜುಲ್ಲಾಗಂಜ್‌ನಲ್ಲಿರುವ ಖಾಸಗಿ ಆಸ್ಪತ್ರೆಯನ್ನು ಬಂದ್ ಮಾಡಿಸಿದ ಉತ್ತರಪ್ರದೇಶದ ಆರೋಗ್ಯ ಇಲಾಖೆ
  • ಯುವಕನ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಪೊಲೀಸರ ವಿಚಾರಣೆ
Viral News: ವ್ಯಕ್ತಿಗೆ ಥಳಿಸಿದ ವಿಡಿಯೋ ವೈರಲ್; ಉತ್ತರಪ್ರದೇಶದಲ್ಲಿ ಆಸ್ಪತ್ರೆ ಕ್ಲೋಸ್! title=
ಆಸ್ಪತ್ರೆಯಲ್ಲಿ ಯುವಕನಿಗೆ ಥಳಿತ!

ನವದೆಹಲಿ: ಯುವಕನೊಬ್ಬನಿಗೆ ಅಮಾನುಷವಾಗಿ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಉತ್ತರಪ್ರದೇಶದ ಆರೋಗ್ಯ ಇಲಾಖೆಯು ಫೈಜುಲ್ಲಾಗಂಜ್‌ನಲ್ಲಿರುವ ಖಾಸಗಿ ಆಸ್ಪತ್ರೆಯನ್ನು ಮುಚ್ಚಲಾಗಿದೆ.

ಪ್ರಕರಣ ಸಂಬಂಧ ಇದೀಗ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಪೊಲೀಸರು ವಿಚಾರಣೆ ಪ್ರಾರಂಭಿಸಿದ್ದಾರೆ. ಇದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮೂವರು ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ತನಿಖೆಗಾಗಿ ಹೆಚ್ಚುವರಿ ಮುಖ್ಯ ವೈದ್ಯಕೀಯ ಅಧಿಕಾರಿ (ACMO) ಡಾ.ಎ.ಪಿ.ಸಿಂಗ್ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.

ಇದನ್ನೂ ಓದಿ: Viral Video: ಶಾಲೆಯಲ್ಲಿಯೇ ಜುಟ್ಟು ಹಿಡಿದು ಕಿತ್ತಾಡಿಕೊಂಡ ಪ್ರಿನ್ಸಿಪಾಲ್-ಟೀಚರ್: ಶಿಕ್ಷಕರ ಜಡೆಜಗಳ ಕಂಡ ಮಕ್ಕಳು ಮಾಡಿದ್ದೇನು?

15 ದಿನಗಳಷ್ಟು ಹಳೆಯದು ಎನ್ನಲಾಗಿರುವ ಈ ವೈರಲ್ ವಿಡಿಯೋದಲ್ಲಿ ಯುವಕನೊಬ್ಬನಿಗೆ ಬೆಲ್ಟ್ ಮತ್ತು ಪೈಪ್‍ನಿಂದ ಅಮಾನುಷವಾಗಿ ಥಳಿಸುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ. ಯುವಕ ಸಹಾಯಕ್ಕಾಗಿ ಅಂಗಲಾಚಿದರೂ ಬಿಡದೆ ಆತನ ಮೇಲೆ ಮನಬಂದಂತೆ ಹಲ್ಲೆ ನಡೆಸಲಾಗಿದೆ. ಯುವಕನಿಗೆ ತಕ್ಕ ಪಾಠ ಕಲಿಸುವುದಾಗಿ ಮಹಿಳೆಯೊಬ್ಬರು ಹಗ್ಗದಿಂದ ಕಟ್ಟಿ ಬೆದರಿಸುತ್ತಿದ್ದ ದೃಶ್ಯ ಕಂಡು ಬಂದಿದೆ.

‘ಆಸ್ಪತ್ರೆಯೊಳಗೆ ವಿಡಿಯೋ ಚಿತ್ರೀಕರಿಸಿರುವುದನ್ನು ನಾವು ನೋಡಿದ್ದೇನೆ. ಈ ಪ್ರಕರಣದ ತನಿಖೆ ಪೂರ್ಣಗೊಂಡು ತಪ್ಪಿತಸ್ಥರನ್ನು ಗುರುತಿಸುವವರೆಗೂ ಆಸ್ಪತ್ರೆಯನ್ನು ಬಂದ್ ಮಾಡಲಾಗುತ್ತದೆ. ಆಸ್ಪತ್ರೆಯ ಸಿಬ್ಬಂದಿ ಹೇಳುವ ಪ್ರಕಾರ ಹಲ್ಲೆಗೊಳಗಾದ ಯುವಕ ಕಳ್ಳನಂತೆ. ಹೀಗಾಗಿ ಆತನ ಮೇಲೆ ಹಲ್ಲೆ ನಡೆಸಿದ್ದೇವೆಂದು ಹೇಳುತ್ತಿದ್ದಾರೆ. ಆದರೆ, ಆತ ಕಳ್ಳನಾಗಿದ್ದರೆ ಈ ರೀತಿ ಹಲ್ಲೆ ಮಾಡುವುದು ಬಿಟ್ಟು ಪೊಲೀಸರಿಗೆ ಒಪ್ಪಿಸಬೇಕಿತ್ತು’ ಎಂದು ಸಿಂಗ್ ಹೇಳಿದ್ದಾರೆ.  

ಇದನ್ನೂ ಓದಿ: Shocking News: ಚಹಾ ಮಾಡಿಕೊಡದ ಪತ್ನಿಯನ್ನು ಹತ್ಯೆ ಮಾಡಿದ ಪತಿ!

ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ಯುವಕನ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ನಿಖರ ಕಾರಣ ತಿಳಿದುಬರಲಿದೆ. ಆದರೆ ಯುವಕನಿಗೆ ಮನಬಂದಂತೆ ಥಳಿಸಿರುವುದು ಸರಿಯಲ್ಲವೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News