ನವದೆಹಲಿ: ದೆಹಲಿ ಮೆಟ್ರೋ ಒಮ್ಮೆ ನೃತ್ಯಗಳಿಗೆ ಮತ್ತೊಮ್ಮೆ ಯಾತ್ರಿಗಳ ನಡುವೆ ಫೈಟ್ ಗಳ ಮೂಲಕ ನಿರಂತರವಾಗಿ ಸುದ್ದಿಯಲ್ಲಿದೆ. ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಇದರಲ್ಲಿ ಇಬ್ಬರು ಪರಸ್ಪರ ಹೊಡೆದಾಡಿಕೊಳ್ಳುತ್ತಿರುವ ದೃಶ್ಯ ಕಂಡು ಬಂದಿದೆ. ಸೀಟಿನ ವಿಚಾರಕ್ಕೆ ಸಂಬಂಧಿಸಿದಂತೆ ಈ ವಿವಾದ ನಡೆದಿದೆ ಎಂದು ಹೇಳಲಾಗುತ್ತಿದೆ. ವಿಷಯ ಎಷ್ಟು ಉಲ್ಬಣಗೊಂಡಿದೆ ಎಂದರೆ ಇಬ್ಬರೂ ವೃತ್ತಿಪರ ಬಾಕ್ಸರ್‌ಗಳಂತೆ ಗುದ್ದಾಡಲು ಆರಂಭಿಸಿದ್ದಾರೆ. ಈ ಸಮಯದಲ್ಲಿ, ಕೋಚ್‌ನಲ್ಲಿದ್ದ ಕೆಲವು ಪ್ರಯಾಣಿಕರು ಮಧ್ಯಪ್ರವೇಶಿಸಲು ಯತ್ನಿಸಿದ್ದಾರೆ, ಆದರೆ ಇಬ್ಬರೂ ವ್ಯಕ್ತಿಗಳ ಬಾಕ್ಸಿಂಗ್ ನಿಲ್ಲುವ ಮಾತೆ ಎತ್ತಿಲ್ಲ. (Viral News In Kannada)
ಇದನ್ನೂ ಓದಿ-ಈ ಡ್ರೈವರ್ ನ ಡ್ರೈವಿಂಗ್ ಸ್ಕಿಲ್ ಗೆ ಆನಂದ್ ಮಹೀಂದ್ರಾ ಕೂಡ ನಿಬ್ಬೆರಗಾಗಿದ್ದಾರೆ... ನೋಡಿ ಈ ವೈರಲ್ ವಿಡಿಯೋ!
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಇಬ್ಬರು ಪ್ರಯಾಣಿಕರ ನಡುವೆ ಹೊಡೆದಾಟ ನಡೆದಿದೆ. ಇವರಲ್ಲಿ ಒಬ್ಬ ಮಧ್ಯ ವಯಸ್ಕನಂತೆ ಕಾಣುತ್ತಿದ್ದಾನೆ, ಜಗಳವಾಡುತ್ತಿದ್ದವನು ತುಂಬಾ ಕೋಪಗೊಂಡು ಅವನ ಜೊತೆಗೆ ಗುದ್ದಾಡುತ್ತಿದ್ದಾನೆ ಎಂಬಂತೆ ತೋರುತ್ತಿದೆ. ಆದರೆ ಮಧ್ಯವಯಸ್ಕ ಪ್ರಯಾಣಿಕನೂ ಹಿಂದೆ ಸರಿಯದೆ ಅವನನ್ನು ಒದ್ದು ಕೆಳಗೆ ಬೀಳುವಂತೆ ಮಾಡಿದ್ದಾನೆ. ಈ ಸಮಯದಲ್ಲಿ, ಹತ್ತಿರದ ಪ್ರಯಾಣಿಕರು ಮಧ್ಯಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿ-ವೇಗದ ಮುಂದೆ ಮಂಡಿಯೂರಿದ ಸರೋವರದ ಆಳ, ನೀರಿನ ಮೇಲೆ ಕಾರ್ ಓಡಿಸಿಕೊಂಡು ಹೋದ ವ್ಯಕ್ತಿ... ವಿಡಿಯೋ ನೋಡಿ!
ವೀಡಿಯೊದಲ್ಲಿ ನಡೆಯುತ್ತಿರುವ ಜಗಳಕ್ಕೆ ನಿಖರವಾದ ಕಾರಣವನ್ನು ಬಹಿರಂಗವಾಗಿಲ್ಲ, ಆದರೆ ಮಧ್ಯವಯಸ್ಕ ಪ್ರಯಾಣಿಕನು ಕೋಪಗೊಂಡ ಮನಸ್ಥಿತಿಯಲ್ಲಿ ಇತರ ವ್ಯಕ್ತಿಗೆ ಕೆಲವು ನಿಂದನೀಯ ಮಾತುಗಳನ್ನು ಆಡಿದ್ದಾನೆ ಎಂಬುದು ವಿಡಿಯೋದ ಆಡಿಯೊದಲ್ಲಿ ಸ್ಪಷ್ಟವಾಗಿ ಕೇಳಿಸುತ್ತಿದೆ, ಅದನ್ನು ಕೇಳಿದ ನಂತರ ಆತನ ಪಿತ್ತ ನೆಟ್ಟಿಗೆರಿದ್ದು. ರೈಲು ಇಬ್ಬರೂ ಯಾತ್ರಿಗಳಿಗೆ ಒಂದು ಅಖಾಡ ಆಗಿ ಮಾರ್ಪಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು @lovelybakshi ಹ್ಯಾಂಡಲ್ ಮೂಲಕ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲಾಗಿದೆ.
ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ ನೋಡಿ
Boxing-Match kinda kalesh b/w Two man inside Delhi metro over seat issues
pic.twitter.com/x6o4DScrN7— Ghar Ke Kalesh (@gharkekalesh) December 16, 2023
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ