Viral Video: ಮತ ಕೇಳಲು ಹುಡುಗಿಯ ಕಾಲಿಗೆ ಬಿದ್ದ ಈ ವ್ಯಕ್ತಿ ಮಾಡಿದ್ದೇನು ನೋಡಿ!

ಚುನಾವಣೆಗೂ ಮುನ್ನ ರಾಜಕೀಯ ನಾಯಕರು ಜನರ ಕೈ-ಕಾಲು ಹಿಡಿದು ಬೇಡುವುದನ್ನು ನೀವು ನೋಡಿರಬೇಕು. ಈಗ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲೂ ಇದೇ ಆಗುತ್ತಿದೆ. ರಾಜಸ್ಥಾನದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಅಭ್ಯರ್ಥಿಗಳು ವಿದ್ಯಾರ್ಥಿನಿಯರ ಕಾಲಿಗೆ ಬಿದ್ದು ಮತ ಕೇಳುತ್ತಿರುವುದು ಕಂಡು ಬಂದಿದೆ.

Written by - Puttaraj K Alur | Last Updated : Aug 26, 2022, 04:38 PM IST
  • ರಾಜಸ್ಥಾನದ ಭರತ್‌ಪುರದಲ್ಲಿ ನಡೆದ ವಿದ್ಯಾರ್ಥಿ ಸಂಘದ ಚುನಾವಣೆ
  • ಮತಯಾಚಿಸುವ ವೇಳೆ ವಿದ್ಯಾರ್ಥಿನೀಯ ಕಾಲಿಗೆ ಬಿದ್ದ ಅಭ್ಯರ್ಥಿ
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿರುವ ವಿಡಿಯೋ
Viral Video: ಮತ ಕೇಳಲು ಹುಡುಗಿಯ ಕಾಲಿಗೆ ಬಿದ್ದ ಈ ವ್ಯಕ್ತಿ ಮಾಡಿದ್ದೇನು ನೋಡಿ!  title=
ವಿದ್ಯಾರ್ಥಿನೀಯ ಕಾಲಿಗೆ ಬಿದ್ದ ಅಭ್ಯರ್ಥಿ!

ನವದೆಹಲಿ: ಭಾರತದಲ್ಲಿ ಪ್ರತಿ ವರ್ಷ ಒಂದಲ್ಲ ಒಂದು ರೀತಿಯ ಚುನಾವಣೆಗಳು ನಡೆಯುತ್ತವೆ. ಚುನಾವಣೆ ವೇಳೆ ಜನರನ್ನು ಓಲೈಸಲು ರಾಜಕಾರಣಿಗಳು ಇನ್ನಿಲ್ಲದ ಸರ್ಕಸ್ ಮಾಡುತ್ತಾರೆ. ದೊಡ್ಡ ಚುನಾವಣೆಗಳಲ್ಲಿ ಇದು ಸಹಜ. ಆದರೆ, ಈಗ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲೂ ಈ ರೀತಿಯ ಸರ್ಕಸ್ ಆರಂಭವಾಗಿದೆ.

ಹೌದು, ರಾಜಸ್ಥಾನದ ಭರತ್‌ಪುರದಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ನಡೆದಿದೆ. ಮತ ಯಾಚಿಸುವ ವೇಳೆ ಅಭ್ಯರ್ಥಿಯೊಬ್ಬ ಬಾಲಕಿಯ ಕಾಲಿಗೆ ಬಿದ್ದು ಬೇಡಿಕೊಳ್ಳುತ್ತಿರುವ ವಿಚಿತ್ರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ವೈರಲ್ ಆಗಿರೋ ವಿಡಿಯೋದಲ್ಲಿ ಅಭ್ಯರ್ಥಿ ಕೈಮುಗಿದು ವಿದ್ಯಾರ್ಥಿನೀಯ ಕಾಲು ಹಿಡಿದು ಮತ ಯಾಚಿಸಿದ್ದಾನೆ. ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ತುಂಬಾ ಫನ್ನಿಯಾಗಿರುವ ಈ ವಿಡಿಯೋ ಮತಯಾಚನೆ ವೇಳೆ ರಾಜಕಾರಣಿಗಳು ಮಾಡುವ ಸರ್ಕಸ್ ನೆನಪಿಸುವಂತಿದೆ.

ಇದನ್ನೂ ಓದಿ: Viral Video: ಸಮುದ್ರದ ತೀರದಲ್ಲಿ ಉಡಗಳ ಆಲಿಂಗನ

ವಿದ್ಯಾರ್ಥಿ ಸಂಘದ ಚುನಾವಣೆಗೆ ಮತದಾನ

ಶುಕ್ರವಾರ ಅಂದರೆ ಇಂದು ರಾಜಸ್ಥಾನದ ಅನೇಕ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗಳಿಗೆ ಮತದಾನ ನಡೆದಿದೆ. ಕೊರೊನಾ ಭೀತಿಯಿಂದ 2 ವರ್ಷಗಳ ನಂತರ ರಾಜ್ಯದಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ನಡೆದಿದೆ. ರಾಜ್ಯದ ಪ್ರಮುಖ ಶಿಕ್ಷಣ ಸಂಸ್ಥೆಯಾದ ಜೈಪುರದಲ್ಲಿರುವ ರಾಜಸ್ಥಾನ ವಿಶ್ವವಿದ್ಯಾಲಯದಲ್ಲಿ ಸುಮಾರು 20,700 ವಿದ್ಯಾರ್ಥಿಗಳು ತಮ್ಮ ಮತ ಚಲಾಯಿಸಿದ್ದಾರೆ. ರಾಜ್ಯಾದ್ಯಂತ ಸುಮಾರು 6 ಲಕ್ಷ ವಿದ್ಯಾರ್ಥಿಗಳು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅವಕಾಶ ಪಡೆದುಕೊಂಡಿದ್ದಾರೆಂದು ವಿಶ್ವವಿದ್ಯಾಲಯದ ವಕ್ತಾರರು ತಿಳಿಸಿದ್ದಾರೆ. ಮಧ್ಯಾಹ್ನ 1 ಗಂಟೆಯವರೆಗೆ ಮತದಾನ ನಡೆದಿದ್ದು, ಶನಿವಾರ ಮತ ಎಣಿಕೆ ನಡೆಯಲಿದೆ.

ABVP ಮತ್ತು NSUI ನಡುವೆ ಸ್ಪರ್ಧೆ

ರಾಜಸ್ಥಾನ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (NSUI) ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ನಡುವೆ ಪ್ರಮುಖ ಸ್ಪರ್ಧೆ ಏರ್ಪಟ್ಟಿದೆ. ರಾಜಸ್ಥಾನ ವಿಶ್ವವಿದ್ಯಾಲಯದ ಅಧ್ಯಕ್ಷ ಸ್ಥಾನಕ್ಕೆ ಎನ್‌ಎಸ್‌ಯುಐನಿಂದ ರಿತು ಬರಾಲಾ, ಎಬಿವಿಪಿಯಿಂದ ನರೇಂದ್ರ ಯಾದವ್, ಸ್ವತಂತ್ರವಾಗಿ ನಿಹಾರಿಕಾ ಜೋರ್ವಾಲ್, ನಿರ್ಮಲ್ ಚೌಧರಿ, ಪ್ರತಾಪಭಾನು ಮೀನಾ ಮತ್ತು ಹಿತೇಶ್ವರ್ ಬೈರ್ವಾ ಕಣದಲ್ಲಿದ್ದಾರೆ.

ಇದನ್ನೂ ಓದಿ: Viral Video : ನಿಂತಿದ್ದ ವಾಹನದ ಮೇಲೇರಿ ಹೋಗುತ್ತಿತ್ತು ಹೆಬ್ಬಾವು.! ಇಷ್ಟುದ್ದದ ಹಾವನ್ನು ನೋಡಿರಲು ಸಾಧ್ಯವೇ ಇಲ್ಲ .!

ನಿಹಾರಿಕಾ ಅವರು ರಾಜ್ಯ ಸರ್ಕಾರದ ಸಚಿವ ಮುರಾರಿ ಲಾಲ್ ಮೀನಾ ಅವರ ಪುತ್ರಿಯಾಗಿದ್ದು, ಎನ್‌ಎಸ್‌ಯುಐ ಟಿಕೆಟ್ ಸಿಗದ ಕಾರಣ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಮಂಗಳವಾರ ನಡೆದ ಅಭ್ಯರ್ಥಿಗಳ ನಾಮಪತ್ರಗಳ ಪರಿಶೀಲನೆ ವೇಳೆ ಎಬಿವಿಪಿಯ ಇಬ್ಬರು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿತ್ತು. ಆದರೆ ನಂತರ ಇಬ್ಬರೂ ಅಭ್ಯರ್ಥಿಗಳ ನಾಮಪತ್ರಗಳನ್ನು ಮಾನ್ಯವೆಂದು ಪರಿಗಣಿಸಲಾಯಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News