Viral Video: ಆಸ್ಟ್ರೇಲಿಯದಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಗರ್ಲ್ ಫ್ರೆಂಡ್ ಗೆ ಪ್ರಪೋಸ್ ಮಾಡಿದ ಭಾರತೀಯ, ಹುಡುಗಿ ರಿಯಾಕ್ಷನ್ ವೈರಲ್!

Viral Video: ನೀವು ಮತ್ತು ನಿಮ್ಮ ಗರ್ಲ್ ಫ್ರೆಂಡ್ ಬೇರೆ ಬೇರೆ ತಂಡಗಳನ್ನು ಬೆಂಬಲಿಸುತ್ತಿರುವಿರಾ? ಇದು ನಿಮ್ಮ ನಡುವೆ ಉದ್ವಿಘ್ನತೆಗೆ ಕಾರಣವಾಗಬಹುದೇ ಎಂದು ಕಾಮೆಂಟ್ರಿ ಹೇಳುವವರು ಭಾರತೀಯ ಮೂಲದ ಓರ್ವ ಯುವಕನನ್ನು ಪ್ರಶ್ನಿಸಿದಾಗ ಈ ಸಂತಸದ ಕ್ಷಣ ಕ್ರ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. (Viral News In Kannada)  

Written by - Nitin Tabib | Last Updated : Jan 3, 2024, 05:17 PM IST
  • ಈ ವೀಡಿಯೋಗೆ ಜನರು ಭಾರಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದು, ವಿವಿಧ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಓರ್ವ ಬಳಕೆದಾರ,
  • "ಹೊಸ ವರ್ಷವನ್ನು ಪ್ರಾರಂಭಿಸಲು ಒಂದು ಮಾರ್ಗವಾಗಿದೆ. ಜೀವನವಿಡೀ ನೆನಪಿನಲ್ಲಿಟ್ಟುಕೊಳ್ಳಬಹುದಾದ ಒಂದು ಅವಿಸ್ಮರಣೀಯ ಕ್ಷಣ"
  • ಎಂದು ಮತ್ತೊಬ್ಬ ಬಳಕೆದಾರ ಪ್ರತಿಕ್ರಿಯಿಸಿದ್ದಾರೆ. "ಇದು ಎಷ್ಟು ಕ್ಯೂಟ್ ಆಗಿದೆ," ಎಂದು ಮೂರನೇ ಬಳಕೆದಾರ ಹೇಳಿದ್ದಾರೆ.
Viral Video: ಆಸ್ಟ್ರೇಲಿಯದಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಗರ್ಲ್ ಫ್ರೆಂಡ್ ಗೆ ಪ್ರಪೋಸ್ ಮಾಡಿದ ಭಾರತೀಯ, ಹುಡುಗಿ ರಿಯಾಕ್ಷನ್ ವೈರಲ್! title=

ಆಸ್ಟ್ರೇಲಿಯ: ಬಿಗ್ ಬ್ಯಾಷ್ ಲೀಗ್  ಪಂದ್ಯದ ಮಧ್ಯದಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಭಾರತೀಯ ಮೂಲದ ಕ್ರಿಕೆಟ್ ಅಭಿಮಾನಿಯೊಬ್ಬ ತನ್ನ ಗೆಳತಿಗೆ ಪ್ರಪೋಸ್ ಮಾಡಿದ್ದು ಆಕೆಗೆ ಭಾರಿ ಸಂತಸದ ಶಾಕ್ ನೀಡಿದೆ. ನೀವು ಮತ್ತು ನಿಮ್ಮ ಗರ್ಲ್ ಫ್ರೆಂಡ್ ಬೇರೆ ಬೇರೆ ತಂಡಗಳನ್ನು ಬೆಂಬಲಿಸುತ್ತಿರುವಿರಾ? ಇದು ನಿಮ್ಮ ನಡುವೆ ಉದ್ವಿಘ್ನತೆಗೆ ಕಾರಣವಾಗಬಹುದೇ ಎಂದು ಕಾಮೆಂಟ್ರಿ ಹೇಳುವವರು ಭಾರತೀಯ ಮೂಲದ ಓರ್ವ ಯುವಕನನ್ನು ಪ್ರಶ್ನಿಸಿದಾಗ ಈ ಸಂತಸದ ಕ್ಷಣ ಕ್ರ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಇದಕ್ಕೆ ಉತ್ತರಿಸಿದ ಆ ವ್ಯಕ್ತಿ,  "ಹೌದು, ನಾನು ದೊಡ್ಡ ಸ್ಟಾರ್ ಅಭಿಮಾನಿ ಮತ್ತು ಅವಳು ರೆನೆಗೇಡ್ಸ್ ಅಭಿಮಾನಿ. ಆದರೆ ಅವಳು ಗ್ಲೆನ್ ಮ್ಯಾಕ್ಸ್ವೆಲ್ ಅನ್ನು ಪ್ರೀತಿಸುತ್ತಾಳೆ ಮತ್ತು ನಾನು ಕೂಡ ಮ್ಯಾಕ್ಸ್ವೆಲ್ ಅಭಿಮಾನಿಯಾಗಿದ್ದೇನೆ, ಹಾಗಾಗಿ ನಾನು ಅವಳನ್ನು ಇಲ್ಲಿಗೆ ಕರೆತಂದಿದ್ದೇನೆ ..." ಎಂದಿದ್ದಾನೆ. (Viral News In Kannada)

ಇದಾದ ಬಳಿಕ ಆ ವ್ಯಕ್ತಿ ಎದ್ದು ತನ್ನ ಸಂಗಾತಿಯ ಕಡೆಗೆ ತಿರುಗಿ ಉಂಗುರವನ್ನು ಹೊರತೆಗೆದು ಮಂಡಿಯೂರಿ, 'ಇದೊಂದು ದೊಡ್ಡ ಸಂದರ್ಭ ಆದ್ದರಿಂದ ನಾನು ಅವಳಿಗೆ ಉಂಗುರವನ್ನು ತೊಡಿಸಲು ಬಯಸುತ್ತೇನೆ' ಎಂದು ಹೇಳುತ್ತಾನೆ. ತದನಂತರ ಪ್ರೇಕ್ಷಕರು ಮತ್ತು ಸಂದರ್ಶಕರು ಸಹ ಜೋರಾಗಿ ಹರ್ಷ ವ್ಯಕ್ತಪಡಿಸಲು ಆರಂಭಿಸುತ್ತಾರೆ ಮತ್ತು ಹುಡುಗಿ ಆತನ  ಪ್ರಸ್ತಾಪಕ್ಕೆ ಹೌದು ಎಂದು ಹೇಳುತ್ತಾಳೆ ಮತ್ತು ಉಂಗುರವನ್ನು ಧರಿಸಿಕೊಳ್ಳುತ್ತಾಳೆ, ಆದರೆ, ಆಕೆ ವ್ಯಕ್ತಪಡಿಸಿರುವ ಸಂತಸದ ಶಾಕ್ ಇದೀಗ ಭಾರಿ ವೈರಲ್ ಆಗುತ್ತಿದೆ. 

ಈ ವೀಡಿಯೊವನ್ನು 7ಕ್ರಿಕೆಟ್ ತನ್ನ ಅಧಿಕೃತ X ಖಾತೆಯಲ್ಲಿ ಹಂಚಿಕೊಂಡಿದೆ, ಇದು 1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ-ನಡು ರಸ್ತೆಯಲ್ಲಿಯೇ ಯುವಕನ ಅಶ್ಲೀಲ ಕೃತ್ಯ, ಮಹಿಳಾ ಪೊಲೀಸ್ ಅಧಿಕಾರಿಯನ್ನು ತಬ್ಬಿಕೊಂಡು ಮುತ್ತಿಕ್ಕಿದ, ವಿಡಿಯೋ ವೈರಲ್!

ಈ ವೀಡಿಯೋಗೆ ಜನರು ಭಾರಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದು, ವಿವಿಧ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಓರ್ವ ಬಳಕೆದಾರ, "ಹೊಸ ವರ್ಷವನ್ನು ಪ್ರಾರಂಭಿಸಲು ಒಂದು ಮಾರ್ಗವಾಗಿದೆ. ಜೀವನವಿಡೀ ನೆನಪಿನಲ್ಲಿಟ್ಟುಕೊಳ್ಳಬಹುದಾದ ಒಂದು ಅವಿಸ್ಮರಣೀಯ ಕ್ಷಣ" ಎಂದು ಮತ್ತೊಬ್ಬ ಬಳಕೆದಾರ ಪ್ರತಿಕ್ರಿಯಿಸಿದ್ದಾರೆ.  "ಇದು ಎಷ್ಟು ಕ್ಯೂಟ್ ಆಗಿದೆ," ಎಂದು ಮೂರನೇ ಬಳಕೆದಾರ ಹೇಳಿದ್ದಾರೆ. 

ಇದನ್ನೂ ಓದಿ-ನಿಮ್ಮ ಮನೆಯಲ್ಲಿನ ಸೋಫಾ, ನಿಮ್ಮನ್ನು ಊರ ತುಂಬಾ ಸುತ್ತಾಡಿಸಬಹುದು ಗೊತ್ತಾ? ವಿಡಿಯೋ ನೋಡಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ-

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News