Viral Video: ಹಾಸನದಲ್ಲಿ ಮದುವೆಗೆ ಒಪ್ಪದ ಶಿಕ್ಷಕಿಯ ಅಪಹರಣ, ಆಘಾತಕಾರಿ ವಿಡಿಯೋ ನೋಡಿ

Teacher Kidnap in Hassan: ಶಿಕ್ಷಕಿಯನ್ನು ಕಿಡ್ನಾಪ್ ಮಾಡಿರುವ ವಿಡಿಯೋ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Written by - Puttaraj K Alur | Last Updated : Nov 30, 2023, 04:50 PM IST
  • ಹಾಸನದಲ್ಲಿ ಹಾಡಹಗಲೇ ಸಿನಿಮೀಯ ರೀತಿಯಲ್ಲಿ ಶಾಲಾ‌ ಶಿಕ್ಷಕಿಯ ಅಪಹರಣ
  • ಮದುವೆಗೆ ಒಪ್ಪದ ಶಿಕ್ಷಕಿಯನ್ನು ಕಾರಿನಲ್ಲಿ ಅಪಹರಿಸಿದ ದುಷ್ಕರ್ಮಿಗಳು
  • ಶಾಲೆಗೆ ತೆರಳುತ್ತಿದ್ದ ಶಿಕ್ಷಕಿಯನ್ನು ಕಿಡ್ನಾಪ್ ಮಾಡಿದ ಆರೋಪಿಗಳ ಬಂಧನಕ್ಕೆ ಖಾಕಿ ಬಲೆ
Viral Video: ಹಾಸನದಲ್ಲಿ ಮದುವೆಗೆ ಒಪ್ಪದ ಶಿಕ್ಷಕಿಯ ಅಪಹರಣ, ಆಘಾತಕಾರಿ ವಿಡಿಯೋ ನೋಡಿ title=
ಶಾಲಾ‌ ಶಿಕ್ಷಕಿಯ ಅಪಹರಣ!

ಹಾಸನ: ಮದುವೆಗೆ ಒಪ್ಪದ ಶಿಕ್ಷಕಿಯನ್ನು ಸಿನಿಮೀಯ ರೀತಿಯಲ್ಲಿ ಅಪಹರಣ ಮಾಡಿರುವ ಆಘಾತಕಾರಿ ಘಟನೆ ಹಾಸನದಲ್ಲಿ ನಡೆದಿದೆ. ಗುರುವಾರ ಬೆಳಗ್ಗೆ ಶಾಲೆಗೆ ತೆರಳುತ್ತಿದ್ದ ವೇಳೆ ಶಿಕ್ಷಕಿಯನ್ನು ಸಿನಿಮೀಯ ಶೈಲಿಯಲ್ಲಿ ಕಿಡ್ನಾಪ್ ಮಾಡಲಾಗಿದೆ.

ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿ ಬಳಿ ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಶಿಕ್ಷಕಿಯನ್ನು ಆಕೆಯ ಸಂಬಂಧಿಕರೇ ಅಪಹರಿಸಿದ್ದಾರೆಂದು ತಿಳಿದುಬಂದಿದೆ. ಹಾಡಹಗಲೇ ಸಿನಿಮೀಯ ರೀತಿಯಲ್ಲಿ ಶಿಕ್ಷಕಿಯ ಕಿಡ್ನಾಪ್ ನಡೆದಿರುವ ಘಟನೆಯಿಂದ ಹಾಸನದ ಜನತೆ ಬೆಚ್ಚಿಬಿದ್ದಿದ್ದಾರೆ.

ಇದನ್ನೂ ಓದಿ: ಮತ್ತೆ ಮುನ್ನೆಲೆಗೆ ಬಂದ ಹುಬ್ಬಳ್ಳಿಯ ಈದ್ಗಾ ಮೈದಾನ

ಶಿಕ್ಷಕಿ ಅರ್ಪಿತಾ ಗುರುವಾರ ಬೆಳಗ್ಗೆ ಶಾಲೆಗೆ ಹೊರಟಿದ್ದರು. ಆಕೆಯ ಸಂಬಂಧಿ ರಾಮು ಎಂಬಾತ ಕಿಡ್ನಾಪ್ ಮಾಡಿದ್ದಾನೆ ಅಂತಾ ಶಿಕ್ಷಕಿಯ ಪೋಷಕರು ಆರೋಪಿಸಿದ್ದಾರೆ. 15 ದಿನಗಳ ಹಿಂದಷ್ಟೇ ರಾಮು ಮತ್ತು ಪೋಷಕರು ಮದುವೆ ಪ್ರಸ್ತಾಪದೊಂದಿಗೆ ಶಿಕ್ಷಕಿಯ ಮನೆಗೆ ಬಂದಿದ್ದರು. ಈ ವೇಳೆ ಮದುವೆಗೆ ಶಿಕ್ಷಕಿ ಅರ್ಪಿತಾ ಮತ್ತು ಆಕೆಯ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರಂತೆ.

ಮದುವೆ ಒಪ್ಪಿಲ್ಲವೆಂದು ಕೋಪಗೊಂಡ ರಾಮು ಎಂಬಾತನೇ ತಮ್ಮ ಮಗಳನ್ನು ಕಿಡ್ನಾಪ್ ಮಾಡಿದ್ದಾನೆಂದು ಶಿಕ್ಷಕಿ ಅರ್ಪಿತಾಳ ಕುಟುಂಬಸ್ಥರು ಆರೋಪಿಸಿದ್ದಾರೆ. ಬೆಳ್ಳಂಬೆಳಗ್ಗೆ ನಡೆದಿರುವ ಈ ಆಘಾತಕಾರಿ ಘಟನೆಯಿಂದ ಜನರಲ್ಲಿ ಆತಂಕವುಂಟಾಗಿದೆ.  

ಇದನ್ನೂ ಓದಿ: ಸರ್ಕಾರ ಸೂಸೈಡ್‌ ಮಾಡಿಕೊಂಡಿದೆ ಎಂಬ HDK ಹೇಳಿಕೆ

ಸ್ಥಳಕ್ಕೆ ಹಾಸನ ನಗರ ಠಾಣೆಯ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಶಿಕ್ಷಕಿಯನ್ನು ಕಿಡ್ನಾಪ್ ಮಾಡಿರುವ ವಿಡಿಯೋ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಆರೋಪಿಯ ಬಂಧನಕ್ಕೆ ಖಾಕಿಪಡೆ ಬಲೆ ಬೀಸಿದೆ. ತಂಡಗಳನ್ನು ರಕ್ಷಿಚಿಸಿದ್ದು, ಎಲ್ಲಾ ಚೆಕ್‍ಪೋಸ್ಟ್ ಗಳಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಆದಷ್ಟು ಬೇಗ ಆರೋಪಿಯನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಶಿಕ್ಷಕಿಯ ಕಿಡ್ನಾಪ್ ವಿಡಿಯೋ ಇಲ್ಲಿದೆ ನೋಡಿ:

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News