Woman With Mustache: ಮೀಸೆ ಹೊತ್ತ ಮಹಿಳೆಯನ್ನು ಎಂದಾದರು ನೋಡಿದ್ದೀರಾ? ಹೌದು, ಮೀಸೆ ನನ್ನ ಹೆಮ್ಮೆ ಎನ್ನುತ್ತಾಳೆ ಈ ಮಹಿಳೆ

Woman With Mustache: ಮೀಸೆ ಹೊತ್ತ ಮಹಿಳೆಯ ಛಾಯಾಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಇದೀಗ ಭಾರಿ ವೈರಲ್ ಆಗುತ್ತಿದೆ. ಜನ ಏನೇ ಮಾತನಾಡಿಕೊಂಡರೂ, ಕೇರಳದ ಶೀಜಾಗೆ ತನ್ನ ವೈರಲ್ ಆಗುತ್ತಿರುವ ಲುಕ್ ಬಗ್ಗೆ ಭಾರಿ ಹೆಮ್ಮೆ ಇದೆ.  

Written by - Nitin Tabib | Last Updated : Jul 26, 2022, 07:47 PM IST
  • ಕೇರಳದ ಶೀಜಾ ಅವರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.
  • ಅವಳ ಮೀಸೆಯಿಂದಾಗಿ ಅವಳು ಇಂಟರ್ನೆಟ್‌ನಲ್ಲಿ ಟ್ರೆಂಡ್ ಸೃಷ್ಟಿಸಿದ್ದಾಳೆ.
  • ಇದು ನಿಮಗೆ ನೋಡಲು ವಿಚಿತ್ರವೆನಿಸಬಹುದು. ಆದರೆ ಶೀಜಾಗೆ ತನ್ನ ಲುಕ್ ಬಗ್ಗೆ ತುಂಬಾ ಹೆಮ್ಮೆ ಇದೆ.
Woman With Mustache: ಮೀಸೆ ಹೊತ್ತ ಮಹಿಳೆಯನ್ನು ಎಂದಾದರು ನೋಡಿದ್ದೀರಾ? ಹೌದು, ಮೀಸೆ ನನ್ನ ಹೆಮ್ಮೆ ಎನ್ನುತ್ತಾಳೆ ಈ ಮಹಿಳೆ title=
Kerala Woman With Mustache

Woman With Mustache: ಕೇರಳದ ಶೀಜಾ ಅವರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಅವಳ ಮೀಸೆಯಿಂದಾಗಿ ಅವಳು ಇಂಟರ್ನೆಟ್‌ನಲ್ಲಿ ಟ್ರೆಂಡ್ ಸೃಷ್ಟಿಸಿದ್ದಾಳೆ. ಇದು ನಿಮಗೆ ನೋಡಲು ವಿಚಿತ್ರವೆನಿಸಬಹುದು ಆದರೆ ಶೀಜಾಗೆ ತನ್ನ ಲುಕ್ ಬಗ್ಗೆ ತುಂಬಾ ಹೆಮ್ಮೆ ಇದೆ. ಶ್ರೀಜಾ ತನಗೆ ಮೀಸೆ ಎಂದರೆ ತುಂಬಾ ಇಷ್ಟ ಎನ್ನುತ್ತಾರೆ. ಇದನ್ನು ಶೀಜಾ ತಮ್ಮ ವಾಟ್ಸಾಪ್ ಸ್ಟೇಟಸ್‌ನಲ್ಲಿ ಪ್ರಕಟಿಸಿದ್ದಾರೆ. ಇದರರ್ಥ ಶೀಜಾಳ ಲುಕ್ ಗೆ ನಿಮ್ಮ ಆಕ್ಷೇಪಣೆ ಇದ್ದರೆ, ನಿಮ್ಮ ಯೋಚನೆಗಳನ್ನು ನಿಮ್ಮ ಜೇಬಿನಲ್ಲಿ ಇರಿಸಿಕೊಳ್ಳಿ ಎಂದರ್ಥ.

ಇದನ್ನೂ ಓದಿ-Sabarimala: ಸೋರುತಿಹುದು ಶಬರಿಮಲೆ ಗರ್ಭಗುಡಿಯ ಚಿನ್ನದ ಛಾವಣಿ

ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಕೇರಳದ ಕಿನ್ನೌರ್ ಜಿಲ್ಲೆಯ ನಿವಾಸಿಯಾಗಿರುವ ಶೀಜಾ , "ನಾನು ಹೀಗೇ ಇದ್ದೇನೆ ಅಥವಾ ಹೀಗೆ ಇರುವುದರಿಂದ ನಾನು ಸುಂದರವಾಗಿಲ್ಲ ಎಂದು ನನಗೆ ಎಂದಿಗೂ ಅನಿಸಿಲ್ಲ ಎನ್ನುತ್ತಾರೆ. ನಿಸ್ಸಂಶಯವಾಗಿ ಅನೇಕ ಜನರು ನೋಡಲು ಇದು ತುಂಬಾ ವಿಚಿತ್ರವಾಗಿ ಎನ್ನುತ್ತಾರೆ, ಜನರು ನನ್ನನ್ನು ಟ್ರೋಲ್ ಮಾಡಿದ್ದಾರೆ. ಪುರುಷರಿಗೆ ಮೀಸೆ ಇರುತ್ತವೆ ಎಂದು ಹಲವರು ನನಗೆ ಹೇಳುತ್ತಾರೆ. ಆದರೆ ಅದು ಅವರ ಅಭಿಪ್ರಾಯವಾಗಿದೆ. ಹೇಗೆ ಬದುಕಬೇಕು ಅಥವಾ ಬದುಕಬಾರದು ಎನ್ನುವುದು ನನ್ನ ನನ್ನ ಆಯ್ಕೆ ಎನ್ನುತ್ತಾರೆ ಶೀಜಾ.

ಇದನ್ನೂ ಓದಿ-ಕಬಡ್ಡಿ ಆಡುತ್ತಲೇ ಪ್ರಾಣ ಕಿತ್ತುಕೊಂಡ ಜವರಾಯ: ಕಣ್ಣೀರು ತರಿಸುತ್ತೆ ಈ ವಿಡಿಯೋ

ಇನ್ನು ಮುಂದೆ ಮೀಸೆ ಇಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ಹೇಳುವ ಶೀಜಾ, ಕೋವಿಡ್ -19 ಕಾರಣ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಿದಾಗ, ಅವರು ಅದನ್ನು ಇಷ್ಟಪಡಲಿಲ್ಲ ಎನ್ನುತ್ತಾರೆ. ಶೀಜಾ ಕುಟುಂಬ ವಿಶೇಷವಾಗಿ ತಮ್ಮ ಮಗಳಿಗೆ ಸಾಕಷ್ಟು ಬೆಂಬಲ ನೀಡುತ್ತಿದೆ. ವರದಿಗಳ ಪ್ರಕಾರ, ಶೀಜಾ ಹುಬ್ಬುಗಳಿಗೆ ಥ್ರೆಡಿಂಗ್ ಅನ್ನು ಮಾಡುತ್ತಾರೆ ಆದರೆ ಮೀಸೆಗೆ ಕೈಯನ್ನು ಹಚ್ಚಲು ಕೂಡ ಬಿಡುವುದಿಲ್ಲ ಎನ್ನಲಾಗುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News