CCTV Video : ಈ ಚಾಲಾಕಿ ಕಳ್ಳ ಮೊಬೈಲ್‌ ಎಗರಿಸಿದ ರೀತಿ ಕಂಡ್ರೆ ಶಾಕ್‌ ಆಗ್ತೀರಾ!

Thief Stolen Mobiles: ಕ್ಯಾಮರಾ ಮುಂದೆಯೇ ಮೊಬೈಲ್‌ ಕದ್ದು ಯಾವುದೇ ಭಯವಿಲ್ಲದೆ ಪರಾರಿಯಾಗಿದ್ದಾನೆ. ತಡರಾತ್ರಿ ದಟ್ಟ ಮಂಜಿನಲ್ಲಿ ಅಂಗಡಿಯ ಶಟರ್ ಬೀಗ ಒಡೆದು ಒಳ ನುಗ್ಗಿದ ಕಳ್ಳನೊಬ್ಬ ಮೊಬೈಲ್ ಕದ್ದು ಪರಾರಿಯಾಗಿದ್ದಾನೆ.

Written by - Chetana Devarmani | Last Updated : Dec 23, 2022, 09:07 AM IST
  • ಕ್ಯಾಮರಾ ಮುಂದೆಯೇ ಮೊಬೈಲ್‌ ಕದ್ದ ಕಳ್ಳ
  • ಕಳ್ಳ ಮೊಬೈಲ್‌ ಎಗರಿಸಿದ ರೀತಿ ಕಂಡ್ರೆ ಶಾಕ್‌ ಆಗ್ತೀರಾ
  • ಸಿಸಿಟಿವಿಯಲ್ಲಿ ಸೆರೆಯಾದ ಕಳ್ಳತನದ ದೃಶ್ಯ
CCTV Video : ಈ ಚಾಲಾಕಿ ಕಳ್ಳ ಮೊಬೈಲ್‌ ಎಗರಿಸಿದ ರೀತಿ ಕಂಡ್ರೆ ಶಾಕ್‌ ಆಗ್ತೀರಾ! title=
ಮೊಬೈಲ್‌ ಕದ್ದ ಕಳ್ಳ 

Thief CCTV Footage Video: ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮೊಬೈಲ್ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳ ಸಿಸಿಟಿವಿ ಕ್ಯಾಮೆರಾ ಮುಂದೆ ಹೋಗಿ ಮೊಬೈಲ್ ಕದ್ದು ಜೇಬಿನಲ್ಲಿಟ್ಟುಕೊಂಡಿದ್ದಾನೆ. ಸಿಸಿಟಿವಿ ಎದುರಿಗೆ ಇದ್ದದ್ದು ಕಂಡರೂ ಭಯವಿಲ್ಲದೇ ಕಳ್ಳತನ ಮಾಡಿದ್ದಾನೆ. ಟವೆಲ್ ನಿಂದ ಮುಖ ಮುಚ್ಚಿಕೊಂಡಿದ್ದ ಖದೀಮ ಚಾಲಾಕತನದಿಂದ ಕಳ್ಳತನ ಮಾಡಿದ್ದಾನೆ. ಕ್ಯಾಮರಾ ಮುಂದೆ ಕಳ್ಳತನ ಮಾಡಿ ನಂತರ ಯಾವುದೇ ಭಯವಿಲ್ಲದೇ ಅಲ್ಲಿಂದ ತೆರಳಿದ್ದಾನೆ. ಜವಾಹರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್‌ಎಸ್‌ಬಿ ರಸ್ತೆಯಲ್ಲಿರುವ ಸೂರಜ್ ಟೆಲಿಕಾಂನಲ್ಲಿ ತಡರಾತ್ರಿ ದಟ್ಟವಾದ ಮಂಜಿನ ನಡುವೆ ಅಪರಿಚಿತ ಯುವಕನೊಬ್ಬ ಅಂಗಡಿಯ ಶಟರ್‌ನ ಬೀಗ ಒಡೆದು ಒಳ ಪ್ರವೇಶಿಸಿದ್ದಾನೆ. ಕಳ್ಳ ಮುಖಕ್ಕೆ ಟವೆಲ್ ಕಟ್ಟಿಕೊಂಡಿದ್ದ.

ಇದನ್ನೂ ಓದಿ : Funny Video : ಕೋತಿ ಜೊತೆಯೇ ಚೇಷ್ಟೆ ಮಾಡಲು ಹೋದ್ರೆ ಏನಾಗುತ್ತೆ ಗೊತ್ತಾ? ಬಿದ್ದು ಬಿದ್ದು ನಗ್ತೀರಾ!

ಮೊದಲಿನಿಂದಲೂ ವಿಡಿಯೋ ನೋಡುತ್ತಿದ್ದರೆ ಅಂಗಡಿಯೊಳಗೆ ನುಗ್ಗಿದ ಕಳ್ಳ ಅಲ್ಲಿಟ್ಟಿದ್ದ ಮೊಬೈಲ್ ಗಳನ್ನು ಒಂದೊಂದಾಗಿ ತೆಗೆಯಲು ಆರಂಭಿಸಿರುವುದು ಕಂಡು ಬರುತ್ತದೆ. ಈ ವೇಳೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದಾನೆ. ಆದರೆ, ಕ್ಯಾಮೆರಾ ಕಣ್ಣಿಗೆ ಸಿಕ್ಕಿಬೀಳುತ್ತೇನೆ ಎಂಬ ಭಯ ಅವನಿಗಿರಲಿಲ್ಲ. ಆರಾಮವಾಗಿ ಒಂದೊಂದಾಗಿ ಮೊಬೈಲ್ ಫೋನುಗಳನ್ನು ಹುಡುಕಿ ತೆಗೆದು ಜೇಬಿನಲ್ಲಿ ತುಂಬಿಸಿಕೊಳ್ಳುತ್ತಾನೆ. ಸುಮಾರು ಅರ್ಧ ಡಜನ್ ಮೊಬೈಲ್ ತೆಗೆದುಕೊಳ್ಳುತ್ತಾನೆ. ಅಂಗಡಿಯಲ್ಲಿಟ್ಟಿದ್ದ ದುಬಾರಿ ಬೆಲೆಯ ಮೊಬೈಲ್ ಅನ್ನು 2-3 ನಿಮಿಷದಲ್ಲಿ ಕಳ್ಳ ಕದ್ದಿದ್ದಾನೆ.

 

 

ಮೊಬೈಲ್ ಜತೆಗೆ ಬಿಡಿಭಾಗಗಳು ಹಾಗೂ ಇಪ್ಪತ್ತು ಸಾವಿರ ರೂಪಾಯಿ ನಗದನ್ನು ಕಳ್ಳ ಕದ್ದೊಯ್ದಿದ್ದಾನೆ. ಈ ವೇಳೆ ಕಳ್ಳತನದ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸುಮಾರು ಎರಡೂವರೆ ನಿಮಿಷಗಳ ಸಿಸಿಟಿವಿ ದೃಶ್ಯಗಳಲ್ಲಿ, ಕಳ್ಳ ಅಂಗಡಿಗೆ ನುಗ್ಗಿ ಕಬೋರ್ಡ್‌ನಿಂದ ಮೊಬೈಲ್ ತೆಗೆದು ತನ್ನ ಕೋಟ್‌ನಲ್ಲಿ ಇಟ್ಟುಕೊಂಡಿದ್ದಾನೆ. ಅಂಗಡಿಯವನು ಅಂಗಡಿಗೆ ಬಂದು ನೋಡಿದಾಗ ಕಳ್ಳತನವಾಗಿರುವ ವಿಷಯ ತಿಳಿಯಿತು. ಅಪರಿಚಿತ ಕಳ್ಳನೊಬ್ಬ ಅಂಗಡಿಯಲ್ಲಿದ್ದ ಐದು ಆ್ಯಂಡ್ರಾಯ್ಡ್ ಮೊಬೈಲ್, ಏಳು ಕೀಪ್ಯಾಡ್ ಮೊಬೈಲ್, ಇಪ್ಪತ್ತು ಸಾವಿರ ನಗದು ಹಾಗೂ ಇಪ್ಪತ್ತು ಪೆನ್‌ಡ್ರೈವ್‌ಗಳನ್ನು ಕದ್ದೊಯ್ದಿದ್ದಾನೆ ಎಂದು ಅಂಗಡಿಯವರು ತಿಳಿಸಿದ್ದಾರೆ.

ಇದನ್ನೂ ಓದಿ : WATCH : ಓಹ್..! ಎಂದಾದರೂ ಹೀಗೆ ಅಪಘಾತ ಆಗುವುದನ್ನು ನೀವು ನೋಡಿದ್ದಿರಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News