18 ವರ್ಷಗಳ ಹಿಂದೆ ಕಾಣೆಯಾಗಿದ್ದವಳ ಮೃತದೇಹ ಸಿಕ್ಕಿದ್ದು ಎಲ್ಲಿ ಗೊತ್ತಾ?

ಕಳೆದ 18 ವರ್ಷಗಳ ಹಿಂದೆ ಕ್ರೊವೇಷಿಯಾದ ವಿದ್ಯಾರ್ಥಿ ಡೊಮಿನಿಕ್ ಎಂಬಾಕೆ ನಾಪತ್ತೆಯಾಗಿದ್ದಳು. 

Last Updated : Feb 18, 2019, 10:28 AM IST
18 ವರ್ಷಗಳ ಹಿಂದೆ ಕಾಣೆಯಾಗಿದ್ದವಳ ಮೃತದೇಹ ಸಿಕ್ಕಿದ್ದು ಎಲ್ಲಿ ಗೊತ್ತಾ? title=

ಝಾಗ್ರೆಬ್​: ಬರೋಬ್ಬರಿ 18 ವರ್ಷಗಳ ಹಿಂದೆ ಕಾಣೆಯಾಗಿದ್ದವಳ ಮೃತದೇಹ ಫ್ರೀಜರ್​ನಲ್ಲಿ ಪತ್ತೆಯಾದ ಘಟನೆ ಕ್ರೊವೇಷಿಯಾದ ಝಾಗ್ರೆಬ್​ನಲ್ಲಿ ಭಾನುವಾರ ನಡೆದಿದೆ. 

ಕಳೆದ 18 ವರ್ಷಗಳ ಹಿಂದೆ ಕ್ರೊವೇಷಿಯಾದ ವಿದ್ಯಾರ್ಥಿ ಡೊಮಿನಿಕ್ ಎಂಬಾಕೆ ನಾಪತ್ತೆಯಾಗಿದ್ದಳು. ಆಗ ಆಕೆಗೆ 23 ವರ್ಷ ವಯಸ್ಸಾಗಿತ್ತು. ಈ ಬಗ್ಗೆ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಸದ್ಯ ಪ್ರಕರಣವನ್ನು ಬೇಧಿಸಿರುವ ಪೊಲೀಸರು 18 ವರ್ಷಗಳ ಬಳಿಕ ಆಕೆಯಾ ಮೃತ ದೇಹ ಪತ್ತೆಹಚ್ಚಿದ್ದಾರೆ.

ಅಚ್ಚರಿಯ ವಿಷಯವೆಂದರೆ, ನಾಪತ್ತೆಯಾಗಿದ್ದ ಡೊಮಿನಿಕ್ ಎಂಬಾಕೆಯ ದೇಹ ಆಕೆಯ ಸಹೋದರಿ ಜಾಸ್ಮಿನ ಡೊಮಿನಿಕ್(45) ಮನೆಯ ಫ್ರೀಜರ್'ನಲ್ಲಿ ದೊರೆತಿದೆ. ಈ ಬಗ್ಗೆ ಎಎಫ್ ಪಿ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಈ ಸಂಬಂಧ ಜಾಸ್ಮಿನಾಳನ್ನು ಭಾನುವಾರ ಪೊಲೀಸರು ಬಂಧಿಸಿದ್ದು ವಿಚಾರಣೆಗೆ ಒಳಪಡಿಸಿದ್ದಾರೆ. ಅಲ್ಲದೆ, ಡೊಮಿನಿಕ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.
 

Trending News