Pit Bull: ಆತಂಕ ಹೆಚ್ಚಿಸಿದ ಚಿರತೆಗಿಂತ ಅಪಾಯಕಾರಿ ಪ್ರಾಣಿ, ನೋಡಿದ್ರೆ ನಿಮ್ಮ ತಲೇನು ಗಿರ್ರ್ ಅನ್ನೋದು ಗ್ಯಾರಂಟಿ

Viral Photo: ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಪ್ರಾಣಿಯ ಫೋಟೋವೊಂದನ್ನು (Rarest Pit Bull) ನೋಡಿ ನಿಟ್ಟಿಗರು ಕೂಡ ತಬ್ಬಿಬ್ಬಾಗಿದ್ದಾರೆ. ಈ ಪ್ರಾಣಿ ನೋಡಲು ಚಿರತೆಯಂತೆಯೇ ಕಾಣುತ್ತದೆ.  

Written by - Nitin Tabib | Last Updated : Feb 25, 2022, 02:53 PM IST
  • ನಾಯಿಯ ಈ ವಿಚಿತ್ರ ತಳಿಯ ಚಿತ್ರ ನೋಡಿ ನೀವೂ ಕೂಡ ಬೆಚ್ಚಿಬೀಳುವಿರಿ.
  • ಈ ನಾಯಿ ನೋಡಲು ಡಿಟ್ಟೋ ಚಿರತೆಯಂತೆಯೇ ಇದೆ.
  • ವಿಶ್ವದಲ್ಲಿಯೇ ಅತ್ಯಂತ ವಿರಳವಾಗಿ ಕಾಣಿಸುತ್ತದೆ ಈ ಪಿಟ್ ಬುಲ್
Pit Bull: ಆತಂಕ ಹೆಚ್ಚಿಸಿದ ಚಿರತೆಗಿಂತ ಅಪಾಯಕಾರಿ ಪ್ರಾಣಿ, ನೋಡಿದ್ರೆ ನಿಮ್ಮ ತಲೇನು ಗಿರ್ರ್ ಅನ್ನೋದು ಗ್ಯಾರಂಟಿ  title=
Rarest Pit Bull (File Photo)

Rarest Dog In The World - ವಿಶ್ವದಲ್ಲಿ ಕಾಣಸಿಗುವ ಕೆಲ ಪ್ರಾಣಿಗಳು ಅತ್ಯಂತ ದುರ್ಲಭ ಹಾಗೂ ವಿಚಿತ್ರವಾಗಿರುತ್ತವೆ ಎಂಬುದರಲ್ಲಿ ಯಾವುದೇ ಸಂದೇಹವೇ ಇಲ್ಲ. ಉದಾಹರಣೆಗೆ, ವಿಚಿತ್ರವಾಗಿ ಕಾಣುವ ಟಾಯಟಸ್ ಡಾಗ್ ಅನ್ನು ಒಮ್ಮೆ ವಿಕ್ಷೀಸಿ. ಪಿಟ್ ಬುಲ್ ಡಾಗ್ (Pit Bull Like Cheetah) ಬಗ್ಗೆ ನೀವು ಕೇಳಿರಬಹುದು. ಇದೊಂದು ಅಪಾಯಕಾರಿ ನಾಯಿಯಾಗಿದ್ದು, ಟಾಯ್ಟಸ್ (Titus Pit Bull) ಡಾಗ್ ರೀತಿಯೇ ಕಾಣಿಸುತ್ತದೆ. ಮೊದಲ ನೋಟದಲ್ಲಿ ಟಾಯ್ಟಸ್ ನಿಮಗೆ ಚಿರತೆಯಂತೆಯೇ ಕಾಣಿಸುತ್ತದೆ. ಆದರೆ ನಂತರ ಅದೊಂದು ನಾಯಿಯಾಗಿದೆ ಎಂಬುದು ನಿಮಗೆ ಆಶ್ಚರ್ಯಕ್ಕೀಡು ಮಾಡುತ್ತದೆ. ಈ ಟೈಟಸ್ ನಾಯಿಯ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. 

ನಾಯಿಯ ಈ ಪ್ರಜಾತಿ ನೋಡಿ ನೀವೂ ಕೂಡ ಬೆಚ್ಚಿ ಬೀಳುವಿರಿ
ನಾಯಿಯ (Rarest Dog In The Wold) ಮಾಲೀಕರು ಸಾಮಾಜಿಕ ಮಾಧ್ಯಮ ತಾಣ ರೆಡಿಟ್ ಮೇಲೆ ಟೈಟಸ್ ನಾಯಿಯ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ. ಅಲ್ಲಿ ಈ ನಾಯಿಗೆ 7000 ಕ್ಕೂ ಅಧಿಕ ಥಮ್ಪಸಪ್ ದೊರೆತಿವೆ. ತನ್ನ ವಿಭಿನ್ನ ಶೈಲಿಯ ಲುಕ್ ಕಾರಣ ಈ ನಾಯಿಯ ಫೋಟೋ ಇದೀಗ ಭಾರಿ ವೈರಲ್ ಆಗುತ್ತಿದೆ. ಬಳಿಕ ಸ್ಥಳೀಯ ನ್ಯೂಸ್ ಏಜೆನ್ಸಿ ಟೈಟಸ್ ಕುರಿತು ವರದಿ ಮಾಡಲು ಹೆಚ್ಚಿನ ಸಮಯಾವಕಾಶ ತೆಗೆದುಕೊಂಡಿಲ್ಲ. ಚಿರತೆಯಂತೆ ಕಾಣುವ ಈ ನಾಯಿ ಹಲವರನ್ನು ತನ್ನತ್ತ ಆಕರ್ಶಿಸಿದೆ. ಆದರೆ, ಕೆಲವರು ಈ ಭಾವಚಿತ್ರವನ್ನು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ-Russia-Ukraine War: ಉಕ್ರೇನ್ ದಾಳಿಯ Live Video, ಸೈಕಲ್ ಸವಾರನ ಮೇಲೆ ಕುಸಿದ ರಷ್ಯಾ ಮಿಸೈಲ್

ಈ ನಾಯಿ ನೋಡಲು ಡಿಟ್ಟೋ ಚಿರತೆಯಂತೆಯೇ ಕಾಣುತ್ತದೆ
ಜನ ಈ ನಾಯಿಯ ಚಿತ್ರವನ್ನು ಪ್ರಶ್ನಿಸಲು ಕಾರಣ ಎಂದರೆ, ಫೋಟೋ ಹಂಚಿಕೊಂಡಿರುವ ವ್ಯಕ್ತಿ ಕೇವಲ ತನ್ನ ನಾಯಿಯ ಒಂದೇ ಚಿತ್ರವನ್ನು ಹಂಚಿಕೊಂಡಿದ್ದಾನೆ. ಟೈಟಸ್ ಕೂಡ ಯಾವುದಾದರೊಂದು ಗ್ರೂಮರ್ ಸ್ಟುಡಿಯೋದಲ್ಲಿ ಕುಳಿತಿರುವಂತೆ ಕಾಣುತ್ತಿದೆ. ಫೋಟೋ ವಿಕ್ಷೀಸಿರುವ ಹಲವು ನೆಟ್ಟಿಗರು ಟೈಟಸ್ ಮೈಮೇಲೆ ಷಾಹಿಯ ಸ್ಪಾಟ್ ಗಳಿರುವುದಾಗಿ ಅಂದಾಜಿಸುತ್ತಿದ್ದಾರೆ. ಫೋಟೋ ಹಂಚಿಕೊಂಡಿರುವ ವ್ಯಕ್ತಿ ಟೈಟಸ್ ಒಂದು ಅಲ್ಬಾನಿಯ ಪಿಟ್ ಬುಲ್ ಆಗಿದ್ದು, ಈ ನಾಯಿಗಳ ಪ್ರಜಾತಿ ನಶಿಸಿಹೋಗಿದೆ ಎಂದಿದ್ದಾರೆ. 

ಇದನ್ನೂ ಓದಿ-Russia Ukraine Crisis: ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಪ್ರಧಾನಿ ಮೋದಿ ಮಾತುಕತೆ, ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆಯ ಬಗ್ಗೆ ಚರ್ಚೆ

ವಿಶ್ವದಲ್ಲಿಯೇ ಅತ್ಯಂತ ವಿರಳವಾಗಿ ಕಾಣಿಸುವ ಪಿಟ್ ಬುಲ್ 
ನ್ಯೂಸ್ ವೆಬ್ ಸೈಟ್ ಸೈನ್ಸ್ ಕ್ಲಬ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಈ ನಾಯಿಯ ಪ್ರಜಾತಿಯ ಹೆಸರು ಟೈಟಸ್ ಆಗಿದೆ. ಇದು ಬೇಟೆ ನಾಯಿಯಲ್ಲ. ಇದು ವಿಶ್ವದಲ್ಲಿಯೇ ಅತ್ಯಂತ ವಿರಳವಾಗಿ ಕಾಣಸಿಗುವ ಪಿಟ್ ಬುಲ್ ನಾಯಿಯಾಗಿದ್ದು, ಇಡೀ ಭೂಮಿಯ ಮೇಲೆ ಅದೊಂದೇ ನಾಯಿ ಎನ್ನಲಾಗುತ್ತದೆ. ಇತರ ನಾಯಿಗಳ ಹೋಲಿಕೆಯಲ್ಲಿ ಈ ನಾಯಿಯ ಸಾಮ್ಯತೆ ತುಂಬಾ ವಿಭಿನ್ನವಾಗಿದೆ. ಏಕೆಂದರೆ ಅದು ಚಿರತೆಯಂತೆ ಕಾಣಿಸುತ್ತದೆ ಮತ್ತು ಅದರ ಸೌಂದರ್ಯವನ್ನು ಶಬ್ದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಈ ರೀತಿಯ ಮ್ಯೂಟೆಶನ್ ನೈಸರ್ಗಿಕ ಎಂದು ಹೇಳಲಾಗುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಇದನ್ನು ತಯಾರಿಸುವ ಹಲವು ವಿಧಾನಗಳಿವೆ. ಆದರೆ ಪಿಟ್ ಬುಲ್ ಡಾಗ್ ಮೇಲೆ ಈ ರೀತಿಯ ಕಲೆಗಳನ್ನು ಮೂಡಿಸಲಾಗಿದೆ ಎನ್ನುತ್ತಾರೆ. 

ಇದನ್ನೂ ಓದಿ-Russia-Ukraine Conflict: ಇಂದು ರಷ್ಯಾ ಅಧ್ಯಕ್ಷ ಪುಟೀನ್ ಜೊತೆ ಪ್ರಧಾನಿ ಮೋದಿ ಮಾತುಕತೆ ಸಾಧ್ಯತೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News