ಬಾಂಗ್ಲಾದೇಶ: ಕಳೆದ 6 ತಿಂಗಳಲ್ಲಿ 600 ಮಹಿಳೆಯರ ಮೇಲೆ ಅತ್ಯಾಚಾರ

    

Last Updated : Jul 17, 2018, 02:15 PM IST
ಬಾಂಗ್ಲಾದೇಶ:  ಕಳೆದ 6 ತಿಂಗಳಲ್ಲಿ 600 ಮಹಿಳೆಯರ ಮೇಲೆ ಅತ್ಯಾಚಾರ  title=
file photo

ಢಾಕಾ: ಕಳೆದ ಆರು ತಿಂಗಳಲ್ಲಿ ಬಾಂಗ್ಲಾದೇಶದಲ್ಲಿ ಕನಿಷ್ಠ 592 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ ಎಂದು ಬಾಂಗ್ಲಾದೇಶ ಮಹಿಳಾ ಪರಿಷತ್ (ಬಿಎಂಪಿ) ವರದಿ ಬಹಿರಂಗಪಡಿಸಿದೆ.

ಸೋಮವಾರದಂದು ಮಹಿಳಾ ಹಕ್ಕುಗಳ ಸಂಘಟನೆ ಬಿಡುಗಡೆ ಮಾಡಲಾದ ವರದಿಯಲ್ಲಿ, ಎಲ್ಲಾ ಅತ್ಯಾಚಾರ ಘಟನೆಗಳಲ್ಲೂ 98 ಮಹಿಳೆಯರು ಮತ್ತು ಮಕ್ಕಳು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದಾರೆ. ಅದರಲ್ಲಿ 29 ಜನ ಅತ್ಯಾಚಾರದ ನಂತರ ಕೊಲ್ಲಲ್ಪಟ್ಟಿದ್ದಾರೆ ಮತ್ತು 61 ಮಂದಿ ಅತ್ಯಾಚಾರದ ಪ್ರಯತ್ನದಿಂದ ತಪ್ಪಿಸಿಕೊಂಡಿದ್ದಾರೆ ಎಂದು ಬಾಂಗ್ಲಾದೇಶದ ಪ್ರಮುಖ ದಿನಪತ್ರಿಕೆ ವರದಿ ಮಾಡಿದೆ.

ಇದಲ್ಲದೆ, ಅತ್ಯಾಚಾರ, ಈವ್-ಟೀಸಿಂಗ್, ವರದಕ್ಷಿಣೆ ಬೇಡಿಕೆ ಮತ್ತು ಇತರರಿಗೆ ದೈಹಿಕ ಚಿತ್ರಹಿಂಸೆ ಸೇರಿದಂತೆ ವಿವಿಧ ರೀತಿಯ ಹಿಂಸೆಗಳಿಗೆ 2,063 ಮಹಿಳೆಯರು ಮತ್ತು ಮಕ್ಕಳು ಬಲಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.ಆಸಿಡ್ ದಾಳಿಯಲ್ಲಿ 10 ಮಹಿಳೆಯರು ಮತ್ತು ಮಕ್ಕಳು ಬಲಿಯಾಗಿದ್ದಾರೆ ಮತ್ತು 45 ಬೆಂಕಿಗೆ ಆಹುತಿಯಾಗಿದ್ದಾರೆ  ಎಂದು ವರದಿ ಬಹಿರಂಗಪಡಿಸಿದೆ. 77 ಅಪಹರಣ ಮತ್ತು 13 ಕಳ್ಳ ಮಾನವ ಸಾಗಾಣಿಕೆ ಪ್ರಕರಣಗಳು ಈ ಅವಧಿಯಲ್ಲಿ ವರದಿಯಾಗಿವೆ.

113 ಮಹಿಳೆಯರು  ವರದಕ್ಷಿಣೆಗಾಗಿ ಚಿತ್ರಹಿಂಸೆಗೊಳಿಸಲಾಗಿದ್ದು, ಅದರಲ್ಲಿ 51 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿ ಹೇಳಿದೆ.ಮತ್ತೊಂದೆಡೆ, ಒಟ್ಟು 84 ಮಂದಿ ಬಾಲ್ಯ ವಿವಾಹಕ್ಕೆ ಬಲಿಪಶುವಾಗಿದ್ದಾರೆಎಂದು ತಿಳಿದು ಬಂದಿದೆ.BMP ಜನವರಿ 1 ರಿಂದ ಜೂನ್ 30 ರವರೆಗೆ 14 ದಿನಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳ ಸಂಗ್ರಹವನ್ನು ಪಟ್ಟಿ ಮಾಡಿದೆ.

Trending News