'ಚೆನ್ನೈ ಸಂಪರ್ಕ'ದಿಂದಾಗಿ ಇಂಡೋ-ಚೀನಾ ದ್ವಿಪಕ್ಷೀಯ ಸಂಬಂಧದಲ್ಲಿ ಹೊಸ ಯುಗ ಆರಂಭ-ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಇಲ್ಲಿನ ತಾಜ್ ಫಿಷರ್ ಮೆನ್ಸ್  ಕೋವ್ ರೆಸಾರ್ಟ್ ಮತ್ತು ಸ್ಪಾ ಬೀಚ್ ರೆಸಾರ್ಟ್‌ನಲ್ಲಿ ತಮ್ಮ ಅನೌಪಚಾರಿಕ ಮಾತುಕತೆಯನ್ನು ಶನಿವಾರ ಮುಕ್ತಾಯಗೊಳಿಸಿದರು. 

Last Updated : Oct 12, 2019, 01:27 PM IST
 'ಚೆನ್ನೈ ಸಂಪರ್ಕ'ದಿಂದಾಗಿ ಇಂಡೋ-ಚೀನಾ ದ್ವಿಪಕ್ಷೀಯ ಸಂಬಂಧದಲ್ಲಿ ಹೊಸ ಯುಗ ಆರಂಭ-ಪ್ರಧಾನಿ ಮೋದಿ title=
Photo courtesy: Twitter

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಇಲ್ಲಿನ ತಾಜ್ ಫಿಷರ್ ಮೆನ್ಸ್  ಕೋವ್ ರೆಸಾರ್ಟ್ ಮತ್ತು ಸ್ಪಾ ಬೀಚ್ ರೆಸಾರ್ಟ್‌ನಲ್ಲಿ ತಮ್ಮ ಅನೌಪಚಾರಿಕ ಮಾತುಕತೆಯನ್ನು ಶನಿವಾರ ಮುಕ್ತಾಯಗೊಳಿಸಿದರು. 

ಉಭಯ ನಾಯಕರು ಪ್ರಸ್ತುತ ನಿಯೋಗ ಮಟ್ಟದ ಮಾತುಕತೆಗಳಲ್ಲಿ ನಿರತರಾಗಿದ್ದು, ನಂತರ ಎರಡು ದಿನಗಳ ಅನೌಪಚಾರಿಕ ಶೃಂಗಸಭೆಯ ಫಲಿತಾಂಶಗಳ ಪ್ರತ್ಯೇಕ ಹೇಳಿಕೆಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಅನೌಪಚಾರಿಕ ಮಾತುಕತೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ 'ವುಹಾನ್ ಶೃಂಗಸಭೆ ನಮ್ಮ ಸಂಬಂಧಗಳಲ್ಲಿ ಹೊಸ ಆವೇಗ ಮತ್ತು ನಂಬಿಕೆಯನ್ನು ಹುಟ್ಟುಹಾಕಿದೆ ಮತ್ತು ಇಂದಿನ 'ಚೆನ್ನೈ ಸಂಪರ್ಕದಿಂದಾಗಿ ಭಾರತ-ಚೀನಾ ಸಂಬಂಧಗಳಲ್ಲಿ ಹೊಸ ಯುಗ ಪ್ರಾರಂಭವಾಗಿದೆ. ನಾವು ನಮ್ಮ ಭಿನ್ನಾಭಿಪ್ರಾಯಗಳನ್ನು ವಿವೇಕದಿಂದ ನಿರ್ವಹಿಸುತ್ತೇವೆ ಮತ್ತು ಅವುಗಳನ್ನು ವಿವಾದಗಳಾಗಿ ಪರಿವರ್ತಿಸಲು ಅನುಮತಿಸುವುದಿಲ್ಲ ಎಂದು ನಾವು ನಿರ್ಧರಿಸಿದ್ದೇವೆ. ನಮ್ಮ ಕಾಳಜಿಗಳ ಬಗ್ಗೆ ನಾವು ಸೂಕ್ಷ್ಮವಾಗಿರುತ್ತೇವೆ ಮತ್ತು ನಮ್ಮ ಸಂಬಂಧವು ಜಗತ್ತಿನಲ್ಲಿ ಶಾಂತಿ ಮತ್ತು ಸ್ಥಿರತೆಗೆ ಕೊಡುಗೆ ನೀಡುತ್ತದೆ' ಎಂದು ಹೇಳಿದರು.

ಇನ್ನೊಂದೆಡೆ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮಾತನಾಡಿ 'ನಿಮ್ಮ ಆತಿಥ್ಯದಿಂದ ನಮಗೆ ಮನ ತುಂಬಿ ಬಂದಿದೆ. ನಾನು ಮತ್ತು ನನ್ನ ಸಹೋದ್ಯೋಗಿಗಳಿಗೆ  ಅದನ್ನು ಬಹಳ ಬಲವಾಗಿ ತಟ್ಟಿದೆ. ಇದು ನನಗೆ ಮತ್ತು ನಮಗೆ ಮರೆಯಲಾಗದ ಅನುಭವವಾಗಿರುತ್ತದೆ ಎಂದು ಹೇಳಿದರು. 

 

Trending News