ನೀವು ಏಕಾಂಗಿಯೇ? ಮಹಿಳೆಯೇ? 20 ವರ್ಷ ಮೇಲ್ಪಟ್ಟವರೇ? ಈ ಅರ್ಹತೆಗಳು ನಿಮಗಿದ್ದರೆ ಡೇಟಿಂಗ್ ಮಾಡಲೆಂದೇ ಈ ಕಂಪನಿಗಳು ನಿಮಗೆ ವಿಶೇಷ ರಜೆ ನೀಡಲಿವೆ. ಅದ್ಯಾವ ಕಂಪನಿ ಎಂದು ಯೋಚಿಸುತ್ತಿದ್ದೀರಾ? ಇಂಥ ವಿಶೇಷ ರಜೆ ನೀಡುವ ಕಂಪನಿ ಇರುವುದು ಭಾರತದಲ್ಲಲ್ಲ, ಮುಂದುವರೆದ ದೇಶವಾದ ಚೀನಾದಲ್ಲಿ!
ಚೀನಾದ ಎರಡು ಸಂಸ್ಥೆಗಳು ತಮ್ಮ ಕಂಪನಿಯ 20 ವರ್ಷ ಮೇಲ್ಪಟ್ಟ ಅವಿವಾಹಿತ ಮಹಿಳಾ ಉದ್ಯೋಗಿಗಳು ಊರಿಗೆ ಹೋಗಿ ಡೇಟ್ ಮಾಡಲು ವಾರ್ಷಿಕವಾಗಿ 8 ದಿನಗಳ ವಿಶೇಷ ರಜೆಯನ್ನು ನೀಡುವುದಾಗಿ ತಿಳಿಸಿದೆ.
ಹಾಂಗ್ ಝೌ ಸಾಂಗ್ಚೆಗ್ ಪರ್ಫಾರ್ಮೆನ್ಸ್ ಮತ್ತು ಹಾಂಗ್ ಝೌ ಸಾಂಗ್ಚೆಗ್ ಟೂರಿಸಂ ಮ್ಯಾನೇಜ್ಮೆಂಟ್ ಕಂಪನಿಗಳು 20-30 ವರ್ಷದವರೆಗಿನ ಅವಿವಾಹಿತ ಉದ್ಯೋಗಸ್ಥ ಮಹಿಳೆಯರಿಗೆ ವಾರ್ಷಿಕವಾಗಿ ಹೆಚ್ಚುವರಿ 8 ದಿನಗಳ 'ಡೇಟಿಂಗ್ ರಜೆ' ನೀಡುವುದಾಗಿ ಹೇಳಿದೆ ಎಂದು 'ದಿ ಟೆಲಿಗ್ರಾಫ್' ವರದಿ ಮಾಡಿದೆ.
ಆರ್ಥಿಕ ಪರಿಸ್ಥಿತಿ ಮತ್ತು ಮಧ್ಯಮ ವರ್ಗದ ಚೀನಿ ಮಹಿಳೆಯರು ಹೆಚ್ಚಾಗಿ ವೃತ್ತಿ ಜೀವನದ ಮೇಲೆ ಕೇಂದ್ರೀಕೃತ ಮತ್ತು ವೈವಿಧ್ಯಗೊಳಿಸುವ ಆರ್ಥಿಕತೆಯು ತಮ್ಮ ವೃತ್ತಿಜೀವನದ ಮೇಲೆ ಹೆಚ್ಚು ಕೇಂದ್ರೀಕರಿಸುತ್ತಿದ್ದು, ವಿವಾಹದಿಂದ ದೂರ ಉಳಿಯುತ್ತಿದ್ದಾರೆ ಎನ್ನಲಾಗಿದೆ.
ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯದ ಪ್ರಕಾರ, 2013ರಿಂದೀಚೆಗೆ ಚೀನಾದಲ್ಲಿ ವಿವಾಹ ಪ್ರಮಾಣ ಕುಸಿದಿದ್ದು, ವಿಶ್ವದ ಎರಡನೇ ಅತಿ ದೊಡ್ಡ ದೇಶದಲ್ಲಿ 200 ಮಿಲಿಯನ್ ವಯಸ್ಕರು ವಿವಾಹವಾಗದೆ ಹಾಗೇ ಉಳಿದಿದ್ದಾರೆ ಎನ್ನಲಾಗಿದೆ.