Rahul Gandhi Attack On BJP: ನ್ಯೂಯಾರ್ಕ್ ಗೆ ಹೋಗಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರಾಹುಲ್

Rahul Gandhi On BJP: ಕರ್ನಾಟಕದಲ್ಲಿ ಧೃವೀಕರಣದ ರಾಜಕೀಯ ನಡೆಸಿದ ಬಿಜೆಪಿ ಸಮುದಾಯಗಳ ನಡುವೆ ದ್ವೇಷ ಮತ್ತು ಅಸೂಯೆಯನ್ನು ಸೃಷ್ಟಿಸಲು ಯತ್ನಿಸಿತು ಎಂದು ರಾಹುಲ್ ಆರೋಪಿಸಿದ್ದಾರೆ. ‘ಪ್ರಧಾನಿ ಅವರೇ ಖುದ್ದು ಇದಕ್ಕಾಗಿ ಯತ್ನಿಸಿದರು, ಆದರೆ ಅದು ಕೆಲಸ ಮಾಡಿತೆ?’ ಎಂದು ಅವರು ಪ್ರಶ್ನಿಸಿದ್ದಾರೆ, ಇದಕ್ಕೆ ಪ್ರೇಕ್ಷಕರು ‘ಇಲ್ಲ’ ಎಂದು ಉತ್ತರಿಸಿದ್ದಾರೆ.  

Written by - Nitin Tabib | Last Updated : Jun 4, 2023, 06:34 PM IST
  • ಬಿಜೆಪಿಯನ್ನು ಸೋಲಿಸಲು ಹೊರಟಿರುವುದು ಕಾಂಗ್ರೆಸ್ ಪಕ್ಷ ಮಾತ್ರವಲ್ಲ. ಭಾರತದ ಜನರು, ಮಧ್ಯಪ್ರದೇಶದ ಜನರು, ತೆಲಂಗಾಣದ ಜನರು, ರಾಜಸ್ಥಾನ-ಛತ್ತೀಸ್‌ಗಢದ ಕೂಡ ಬಿಜೆಪಿಯನ್ನು ಸೋಲಿಸಲಿದ್ದಾರೆ.
  • ಸಮಾಜದಲ್ಲಿ ಬಿಜೆಪಿ ಹರಡುತ್ತಿರುವ ದ್ವೇಷದಿಂದ ಮುಂದಕ್ಕೆ ಸಾಗಲು ಸಾಧ್ಯವಿಲ್ಲ ಎಂಬುದು ಇದೀಗ ಭಾರತ ಅರ್ಥಮಾಡಿಕೊಂಡಿರುವುದೇ ಇದಕ್ಕೆ ಕಾರಣ ಎಂದು ಕಾಂಗ್ರೆಸ್ ಮುಖಂಡ ಹೇಳಿದ್ದಾರೆ.
  • ಇನ್ನು ಕೆಲವು ರಾಜ್ಯಗಳಲ್ಲೂ ಇದೇ ರೀತಿ ಆಗಲಿದೆ ಎಂದು ಅವರು ಹೇಳಿದ್ದಾರೆ. ನಂತರ 2024ರಲ್ಲಿ (ಲೋಕಸಭಾ ಚುನಾವಣೆ) ಕೂಡ ಇದೆ ರೀತಿ ಮಾಡುತ್ತೇವೆ ಎಂದು ರಾಹುಲ್ ಹೇಳಿದ್ದಾರೆ.
Rahul Gandhi Attack On BJP: ನ್ಯೂಯಾರ್ಕ್ ಗೆ ಹೋಗಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರಾಹುಲ್ title=

Assembly Elections 2023: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಂತರ ಕಾಂಗ್ರೆಸ್ ಪಕ್ಷದ ಆತ್ಮವಿಶ್ವಾಸ ಮುಗಿಲು ಮುಟ್ಟಿದೆ. ಮತ್ತೊಂದೆಡೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಸ್ತುತ ಅಮೆರಿಕ ಪ್ರವಾಸದಲ್ಲಿದ್ದಾರೆ ಮತ್ತ್ತು ಅವರು ನ್ಯೂಯಾರ್ಕ್ ನಲ್ಲಿ ಮತ್ತೊಮ್ಮೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ನಂತರ ತೆಲಂಗಾಣ ಮತ್ತು ಇತರ ರಾಜ್ಯಗಳ ಚುನಾವಣೆಯಲ್ಲಿ ತಮ್ಮ ಪಕ್ಷವು ಬಿಜೆಪಿಯನ್ನು ನಿರ್ನಾಮ ಮಾಡಲಿದೆ ಎಂದು ರಾಹುಲ್ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷವಷ್ಟೇ ಅಲ್ಲ, ಭಾರತದ ಜನತೆಯೂ ಕೂಡ ಬಿಜೆಪಿಯ ದ್ವೇಷ ತುಂಬಿದ ಸಿದ್ಧಾಂತವನ್ನು ಸೋಲಿಸಲಿದ್ದಾರೆ ಎಂದು ರಾಹುಲ್ ಈ ಸಂದರ್ಭದಲ್ಲಿ ಹೇಳಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಯನ್ನು ಸೋಲಿಸಬಹುದು ಎಂದು ತೋರಿಸಿದ್ದೇವೆ ಎಂದು ರಾಹುಲ್ ಹೇಳಿದ್ದಾರೆ. ನಾವು ಅವರನ್ನು ಸೋಲಿಸಲಿಲ್ಲ, ನಾಶಪಡಿಸಿದ್ದೇವೆ. ಕರ್ನಾಟಕದಲ್ಲಿ ಅವರನ್ನು ಹೀನಾಯವಾಗಿ ಸೋಲಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ವಾಷಿಂಗ್ಟನ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋಗೆ ಭೇಟಿ ನೀಡಿದ ಬಳಿಕ ರಾಹುಲ್ ನ್ಯೂಯಾರ್ಕ್‌ಗೆ ಆಗಮಿಸಿದ್ದಾರೆ ಮತ್ತು ಭಾನುವಾರ ಮ್ಯಾನ್‌ಹ್ಯಾಟನ್‌ನ ಜಾವಿಟ್ಸ್ ಸೆಂಟರ್‌ನಲ್ಲಿ ಸಮುದಾಯ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ ತಂತ್ರಗಳನ್ನು ಪ್ರಯೋಗಿಸಿದೆ ಎಂದು ಅವರು ಹೇಳಿದ್ದಾರೆ. ಇಡೀ ಮಾಧ್ಯಮ ಅವರ ಜೊತೆಗಿತ್ತು. ನಮ್ಮ ಬಳಿ ಇದ್ದ 10 ಪಟ್ಟು ಹಣ ಅವರ ಬಳಿ ಇತ್ತು, ಸರ್ಕಾರ ಇತ್ತು, ಏಜೆನ್ಸಿ ಇತ್ತು. ಅವರು ಎಲ್ಲವನ್ನೂ ಹೊಂದಿದ್ದರು, ಆದರೆ ನಾವು ಅವರನ್ನು ಅಲ್ಲಿ ಸೋಲಿಸಿದ್ದೇವೆ.

ಮುಂದಿನ ಚುನಾವಣೆಯಲ್ಲಿ ತೆಲಂಗಾಣದಲ್ಲಿಯೂ ಅವರನ್ನು ನಿರ್ನಾಮ ಮಾಡಲಿದ್ದೇವೆ ಎಂಬುದನ್ನು ನೀವು ನೋಡಬೇಕು ಎಂದು ನಾವು ಬಯಸುತ್ತೇವೆ, ಈ ಚುನಾವಣೆಯ ನಂತರ ತೆಲಂಗಾಣದಲ್ಲಿ ಬಿಜೆಪಿಯನ್ನು ಹುಡುಕಾಡುವುದು ಕೂಡ ಕಷ್ಟವಾಗುತ್ತದೆ ಎಂದು ಮಾಜಿ ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದಾರೆ. ಈ ವರ್ಷದ ಕೊನೆಯಲ್ಲಿ ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ ಎಂಬುದು ಇಲ್ಲಿ ಉಲ್ಲೇಖನೀಯ.
 
ರಾಹುಲ್ ಅವರ ಕಾರ್ಯಕ್ರಮದಲ್ಲಿ ನ್ಯೂಯಾರ್ಕ್ ಸಿಟಿ ಮೇಯರ್ ಎರಿಕ್ ಆಡಮ್ಸ್ ಸೇರಿದಂತೆ ಅಪಾರ ಸಂಖ್ಯೆಯ ಕಾಂಗ್ರೆಸ್ ಬೆಂಬಲಿಗರು, ಪಕ್ಷದ ಸದಸ್ಯರು, ಅಧಿಕಾರಿಗಳು ಮತ್ತು ವಲಸಿಗ ಸಮುದಾಯದ ಸದಸ್ಯರು ಭಾಗವಹಿಸಿದ್ದರು. ರಾಹುಲ್, 'ತೆಲಂಗಾಣ ಮಾತ್ರವಲ್ಲದೆ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲೂ ಚುನಾವಣೆ ನಡೆಯಬೇಕಿದೆ. ನಾವು ಕರ್ನಾಟಕದಲ್ಲಿ ಮಾಡಿದಂತೆಯೇ ಈ ರಾಜ್ಯಗಳಲ್ಲಿಯೂ ಬಿಜೆಪಿಯ ಜೊತೆಗೆ ಅದೇ ಕೆಲಸ ಮಾಡುತ್ತೇವೆ ಎಂದಿದ್ದಾರೆ. 

'ರಾಜಸ್ಥಾನ-ಛತ್ತೀಸ್‌ಗಢದಲ್ಲಿಯೂ ಕೂಡ ಬಿಜೆಪಿಯನ್ನು ನಿರ್ನಾಮ ಮಾಡುತ್ತೇವೆ
ಬಿಜೆಪಿಯನ್ನು ಸೋಲಿಸಲು ಹೊರಟಿರುವುದು ಕಾಂಗ್ರೆಸ್ ಪಕ್ಷ ಮಾತ್ರವಲ್ಲ. ಭಾರತದ ಜನರು, ಮಧ್ಯಪ್ರದೇಶದ ಜನರು, ತೆಲಂಗಾಣದ ಜನರು, ರಾಜಸ್ಥಾನ-ಛತ್ತೀಸ್‌ಗಢದ ಕೂಡ ಬಿಜೆಪಿಯನ್ನು ಸೋಲಿಸಲಿದ್ದಾರೆ. ಸಮಾಜದಲ್ಲಿ ಬಿಜೆಪಿ ಹರಡುತ್ತಿರುವ ದ್ವೇಷದಿಂದ ಮುಂದಕ್ಕೆ ಸಾಗಲು ಸಾಧ್ಯವಿಲ್ಲ ಎಂಬುದು ಇದೀಗ ಭಾರತ ಅರ್ಥಮಾಡಿಕೊಂಡಿರುವುದೇ ಇದಕ್ಕೆ ಕಾರಣ ಎಂದು ಕಾಂಗ್ರೆಸ್ ಮುಖಂಡ ಹೇಳಿದ್ದಾರೆ. ಇನ್ನು ಕೆಲವು ರಾಜ್ಯಗಳಲ್ಲೂ ಇದೇ ರೀತಿ ಆಗಲಿದೆ ಎಂದು ಅವರು ಹೇಳಿದ್ದಾರೆ. ನಂತರ 2024ರಲ್ಲಿ (ಲೋಕಸಭಾ ಚುನಾವಣೆ) ಕೂಡ ಇದೆ ರೀತಿ ಮಾಡುತ್ತೇವೆ ಎಂದು ರಾಹುಲ್ ಹೇಳಿದ್ದಾರೆ.

ಇದನ್ನೂ ಓದಿ-Weather Report: ಮುಂಗಾರು ಆಗಮಿಸಿದೆಯಾ ಅಥವಾ ಇನ್ನೂ ನಿರೀಕ್ಷಿಸಬೇಕಾ? ಇಲ್ಲಿದೆ ಹವಾಮಾನ ಇಲಾಖೆಯ ಭವಿಷ್ಯವಾಣಿ

ಪ್ರತಿಪಕ್ಷಗಳು ಒಗ್ಗಟ್ಟಾಗಿವೆ, ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಇದೊಂದು ಸೈದ್ಧಾಂತಿಕ ಹೋರಾಟ. ಒಂದೆಡೆ ಬಿಜೆಪಿಯ ಒಡೆದಾಳುವ, ದ್ವೇಷ ತುಂಬಿದ ಸಿದ್ದಾಂತವಿದ್ದರೆ, ಇನ್ನೊಂದೆಡೆ ಕಾಂಗ್ರೆಸ್ ಪಕ್ಷದ ಅಕ್ಕರೆ, ಪ್ರೀತಿಯ ಸಿದ್ಧಾಂತವಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Odisha Train Accident: ಬಾಲಾಸೋರ್ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ರೇಲ್ವೆ ಅಧಿಕೃತ ಹೇಳಿಕೆ ಪ್ರಕಟ
 
ಕರ್ನಾಟಕದಲ್ಲಿ ಬಿಜೆಪಿ ಧೃವಿಕಾರಣದ ರಾಜಕೀಯಕ್ಕೆ ಮುಂದಾಗಿದೆ ಮತ್ತು ಸಮುದಾಯಗಳ ನಡುವೆ ದ್ವೇಷ ಮತ್ತು ಅಸೂಯೆ ಸೃಷ್ಟಿಸಲು ಮುಂದಾಯಿತು ಎಂದು ರಾಹುಲ್ ಆರೋಪಿಸಿದ್ದಾರೆ. ‘ಖುದ್ದು ಪ್ರಧಾನಿ ಅವರೇ ಇದಕ್ಕಾಗಿ ಯತ್ನಿಸಿದರು, ಆದರೆ ಅದು ಕೆಲಸ ಮಾಡಿತೆ?’ ಎಂದು ಅವರು ಪ್ರಶ್ನಿಸಿದ್ದಾರೆ, ಇದಕ್ಕೆ ಪ್ರೇಕ್ಷಕರು ‘ಇಲ್ಲ’ ಎಂದು ಉತ್ತರಿಸಿದ್ದಾರೆ. ಬೆಲೆ ಏರಿಕೆ, ನಿರುದ್ಯೋಗ ಮತ್ತು ಭ್ರಷ್ಟಾಚಾರದ ವಿಷಯಗಳ ಮೇಲೆ ಚುನಾವಣೆ ಕೇಂದ್ರೀಕೃತವಾಗಿದೆ ಎಂಬುದನ್ನೂ ಕರ್ನಾಟಕದ ಜನರು ಎತ್ತಿತೋರಿಸಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ. 'ಭಾರತ್ ಜೋಡೋ ಯಾತ್ರೆ'ಯ ಸಂದರ್ಭದಲ್ಲಿ ನೀಡಲಾದ ಘೋಷಣೆಯನ್ನು ಉಲ್ಲೇಖಿಸಿದ ಅವರು, 'ನಫ್ರತ್ ಕೆ ಬಜಾರ್ ಮೇ ಮೊಹಬ್ಬತ್ ಕಿ ದುಕಾನ್ ಖೋಲೇಂಗೆ' (ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ವ್ಯಾಪಾರ ಆರಂಭಿಸುವೆವು) ಎಂದು ಹೇಳಿದ್ದರು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News