Corona Vaccine For Children - ಮಕ್ಕಳಿಗೆಂದೇ ತಯಾರಿಸಲಾಗುತ್ತಿರುವ ಮಾಡರ್ನಾ Covid-19 ಲಸಿಕೆ (Moderna Corona Vaccine) ಹಾಗೂ ಪ್ರೋಟೀನ್ ಆಧಾರಿತ ಇನ್ನೊಂದು ಲಸಿಕೆ ಆರಂಭಿಕ ಪರೀಕ್ಷಾ ಪ್ರಯೋಗಗಳಲ್ಲಿ ಪರಿಣಾಮಕಾರಿ ಎಂದು ಸಾಬೀತಾಗಿವೆ. ಈ ಎರಡೂ ಲಸಿಕೆಗಳನ್ನು ಆರಂಭದಲ್ಲಿ 'ರೀಸಸ್ ಮಕಾಕ್' ಪ್ರಜಾತಿಯ ಕೋತಿಯ 16 ಮರಿಗಳ ಮೇಲೆ ಪರೀಕ್ಷಿಸಲಾಗಿದೆ.
ಮಕ್ಕಳಿಗೆ ಪರಿಣಾಮಕಾರಿ ಸಾಬೀತಾಗುವ ಸಾಧ್ಯತೆ
ಈ ಎರಡೂ ಲಸಿಕೆಗಳು (Corona Vaccine) ತನ್ನ ಆರಂಭಿಕ ಪರೀಕ್ಷೆಯಲ್ಲಿ ಸುರಕ್ಷಿತವೆಂದು ಸಾಬೀತಾಗಿವೆ ಮತ್ತು SARS-COV-2 ವೈರಸ್ ವಿರುದ್ಧ ಹೋರಾಡುವಲ್ಲಿ ಪರಿಣಾಮಕಾರಿಯಾದ ಪ್ರತಿಕಾಯಗಳನ್ನುಉತ್ಪಾದಿಸುವ ಕ್ಷಮತೆ ಹೊಂದಿವೆ. 'ಸೈನ್ಸ್ ಇಮ್ಯುನೊಲಾಜಿ' ಜರ್ನಲ್ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಮಕ್ಕಳಲ್ಲಿ ಈ ಲಸಿಕೆಗಳು ಸಾಂಕ್ರಾಮಿಕದ ಅಪಾಯ ಕಡಿಮೆ ಮಾಡುವಲ್ಲಿ ಪರಿಣಾಮಕಾರಿ ಅಸ್ತ್ರವೆಂದು ಸಾಬೀತಾಗಬಹುದು ಎನ್ನಲಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಅಮೇರಿಕ ಮೂಲದ ನ್ಯೂಯಾರ್ಕ್-ಪ್ರೆಸ್ಬಾಯಿಟೆರಿಯನ್ ಕಾಮನ್ಸ್ಕೈ ಚಿಲ್ಡ್ರನ್ ಆಸ್ಪತ್ರೆಯ ಸೆಲಿ ಪರ್ಮಾರ್, 'ಚಿಕ್ಕ ಮಕ್ಕಳಿಗೆ ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಗಳು ಕೋವಿಡ್ -19 (Covid-19) ಹರಡುವಿಕೆಯನ್ನು ಸೀಮಿತಗೊಳಿಸಲು ಸಹಾಯ ಮಾಡುತ್ತದೆ. ಏಕೆಂದರೆ ಮಕ್ಕಳು SARS-CoV-2 ಸೋಂಕಿನಿಂದ ಅನಾರೋಗ್ಯಕ್ಕೆ ಒಳಗಗಿರಲಿ ಅಥವಾ ಒಳಗಾಗದೆ ಇರಲಿ, ಅವರು ಕ್ಯಾರಿಯರ್ ರೀತಿ ಸೋಂಕನ್ನು ಹರಡಬಹುದು ಎಂಬುದು ನಮ್ಮೆಲ್ಲರಿಗೂ ತಿಳಿದ ವಿಷಯವಾಗಿದೆ' ಎಂದು ಪರ್ಮಾರ್ ಹೇಳಿದ್ದಾರೆ.
ಇದನ್ನೂ ಓದಿ- ಅಸಿಯಾನ್ ರಾಷ್ಟ್ರಗಳ ರಕ್ಷಣಾ ಸಚಿವರ ಸಭೆ ಉದ್ದೇಶಿಸಿ ರಾಜನಾಥ್ ಸಿಂಗ್ ಭಾಷಣ
ಕೋತಿಗಳಲ್ಲಿ ದೀರ್ಘಕಾಲದವರೆಗೆ ಉಳಿದ ಆಂಟಿಬಾಡಿಗಳು
'ಇದರಲ್ಲಿ ಇನ್ನೊಂದು ಪ್ರಮುಖ ವಿಷಯವೆಂದರೆ, ಹಲವು ಮಕ್ಕಳು ಆನಾರೋಗ್ಯಕ್ಕೆ ಒಳಗಾಗಿದ್ದರು ಮತ್ತು ಹಲವರು ಸೋಂಕಿನ (Coronavirus) ಕಾರಣ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಸೋಂಕನ್ನು ತಡೆಗಟ್ಟಲು ವಿಧಿಸಲಾಗಿರುವ ನಿರ್ಬಂಧನೆಗಳಿಂದ ಮಕ್ಕಳಲ್ಲಿ ಇನ್ನೂ ಹಲವು ನಕಾರಾತ್ಮಕ ಪರಿಣಾಮ ಉಂಟಾಗಿದೆ. ಹೀಗಾಗಿ ಮಕ್ಕಳನ್ನು ಕೊವಿಡ್-19 ಸೋಂಕಿನಿಂದ ರಕ್ಷಿಸಲು ಲಸಿಕೆಯ (Covid-19 Vaccine For Children) ಅವಶ್ಯಕತೆ ಇದೆ' ಎಂದು ಪರ್ಮಾರ್ ಹೇಳಿದ್ದಾರೆ. ರಿಸಮ್ ಮೆಕಾಕ್ ಪ್ರಜಾತಿಯ 16 ಕೋತಿಮರಿಗಳಲ್ಲಿ ಲಸಿಕೆಯ ಕಾರಣ ವೈರಸ್ ನಿಂದ ಹೋರಾಡುವ ಸಾಮರ್ಥ್ಯ 22 ವಾರಗಳವರೆಗಿತ್ತು.
ಇದನ್ನೂ ಓದಿ-New Corona Vaccine: Coronavirus ವಿರುದ್ಧ ಸಿಕ್ತು ಮತ್ತೊಂದು ಅಸ್ತ್ರ, ಶೇ.90ರಷ್ಟು ಪರಿಣಾಮಕಾರಿ
ಕೋತಿಮರಿಗಳಿಗೆ 30 ಮೈಕ್ರೋಗ್ರಾಮ್ ಲಸಿಕೆಯ ಪ್ರಮಾಣ ನೀಡಲಾಗಿತ್ತು
ಈ ಕುರಿತು ಹೇಳಿಕೆ ನೀಡಿರುವ ಉತ್ತರ ಕೆರೊಲಿನಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕ್ರಿಸ್ಟಿನಾ ಡಿ ಪ್ಯಾರಿಸ್, 'ನಾವು ಸಂಭಾವ್ಯ ಪ್ರತಿಕಾಯದ ಮಟ್ಟವನ್ನು ವಯಸ್ಕರೊಂದಿಗೆ ಹೋಲಿಸಲು ನೋಡುತ್ತಿದ್ದೇವೆ, ಆದರೆ, ಮಕಾಕ್ ಪ್ರಜಾತಿಯ ಕೋತಿ ಮರಿಗಳಿಗೆ ಲಸಿಕೆ ಪ್ರಮಾಣವು ಕೇವಲ 30 ಮೈಕ್ರೋಗ್ರಾಂಗಳಷ್ಟಿತ್ತು. ವಯಸ್ಕರಲ್ಲಿ ಇದರ ಪ್ರಮಾಣ 100 ಮೈಕ್ರೋಗ್ರಾಂಗಳಷ್ಟಿರುತ್ತದೆ. ಮಾಡರ್ನಾದ ಲಸಿಕೆಯಲ್ಲಿ, ಬಲವಾದ' ಟಿ 'ಕೋಶ ಪ್ರತಿಕ್ರಿಯೆಯನ್ನು ನಾವು ನೋಡಿದ್ದೇವೆ, ಇದು ರೋಗದ ತೀವ್ರತೆಯನ್ನು ಸೀಮಿತಗೊಳಿಸುವಲ್ಲಿ ಮುಖ್ಯವಾಗಿದೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ' ಎಂದಿದ್ದಾರೆ.
ಇದನ್ನೂ ಓದಿ-Corona Vaccine: ಪ್ರತಿ 6 ತಿಂಗಳಿಗೊಮ್ಮೆ ಹಾಕಿಸಬೇಕು Corona Booster Dose! WHO ಹೇಳಿದ್ದೇನು?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.