coronavirus: FACE MASKಗಳ ಕುರಿತು ಗಂಭೀರ ನಿರ್ಣಯ ಕೈಗೊಂಡ facebook-instagram

ವಿಶ್ವಾದ್ಯಂತ ಇದೀಗ ಫೇಸ್ ಮಾಸ್ಕ್ ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಹಲವು ನಗರಗಳಲ್ಲಿ ಇವುಗಳನ್ನು ಬ್ಲಾಕ್ ಮಾರ್ಕೆಟ್ ನಲ್ಲಿ ಮಾರಾಟ ನಡೆಸಲಾಗುತ್ತಿದೆ. ಇತರೆ ತಂತ್ರಜ್ಞಾನದ ಕಂಪನಿಗಳೂ ಕೂಡ ಮೌಲ್ಯವೃದ್ಧಿ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿಗಳನ್ನು ತಡೆಯಲು ತಮ್ಮ ಪ್ರಯತ್ನ ಮುಂದುವರೆಸಿವೆ.

Last Updated : Mar 7, 2020, 04:40 PM IST
coronavirus: FACE MASKಗಳ ಕುರಿತು ಗಂಭೀರ ನಿರ್ಣಯ ಕೈಗೊಂಡ facebook-instagram title=

ನವದೆಹಲಿ: ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಗಳಾಗಿರುವ ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್  ಗಳು ಶನಿವಾರ ತಮ್ಮ ಪ್ಲಾಟ್ಫಾರ್ಮ್ ಗಳ ಮೇಲೆ ಫೇಸ್ ಮಾಸ್ಕ್ ಗಳನ್ನು ಮಾರಾಟ ಮಾಡುವ ಜಾಹೀರಾತುಗಳಿಗೆ ಕಡಿವಾಣ ಹಾಕಿದ್ದು, ಕೊರೊನಾ ವೈರಸ್ ನಿಂದ ಸೃಷ್ಟಿಯಾಗಿರುವ ಎಮೆರ್ಜೆನ್ಸಿಯಿಂದ ಈ ಜನರಿಂದ ಲಾಭ ಮಾಡಿಕೊಳ್ಳುವುದನ್ನು ತಡೆಯುವುದು ಇದರ ಹಿಂದಿನ ಉದ್ದೇಶವಾಗಿದೆ. ಫೇಸ್ ಬುಕ್ ನ ಟ್ರಸ್ಟ್/ಇಂಟಿಗ್ರಿಟಿ ತಂಡದ ನೇತೃತ್ವ ಮಾಡುವ ರಾಬ್ ಲೀಥರ್ನ್ ಟ್ವಿಟ್ಟರ್ ಖಾತೆಯ ಮೇಲೆ ಈ ಕುರಿತು ಘೋಷಣೆ ಮಾಡಿದ್ದಾರೆ. IANSನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ ಈ ಕುರಿತು ಟ್ವೀಟ್ ಮಾಡಿರುವ ಲೀಥರ್ನ್, ಮೆಡಿಕಲ್ ಫೇಸ್ ಮಾಸ್ಕ್ ಮಾರಾಟ ಮಾಡುವ ಜಾಹಿರಾತುಗಳನ್ನು ಹಾಗೂ ಪ್ರಾಡಕ್ಟ್ ಲಿಸ್ಟಿಂಗ್ ಮೇಲೆ ನಿಷೇಧ ವಿಧಿಸಲಾಗುವುದು ಎಂದು ಹೇಳಿದ್ದಾರೆ. ಕೊವಿಡ್-19ರ ಮೇಲೆ ನಾವು ನಿರಂತರವಾಗಿ ನಮ್ಮ ಗಮನ ಕೇಂದ್ರೀಕರಿಸಿದ್ದು, ಒಂದು ವೇಳೆ ಈ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿಯ ಲಾಭವನ್ನು ಮಾಡಿಕೊಳ್ಳುವುದನ್ನು ತಡೆಯಲು ನಾವು ನಮ್ಮ ನೀತಿಗಳಲ್ಲಿ ಬದಲಾವಣೆ ತರಲಿದ್ದೇವೆ ಎಂದು ಹೇಳಿದ್ದಾರೆ.

ಇನ್ಸ್ಟಾಗ್ರಾಮ್ ಮುಖ್ಯಸ್ಥ ಆಡಮ್ ಮೊಸೇರಿ ಕೂಡ ಲೀಥರ್ನ್ ಅವರ ಈ ನಿರ್ಣಯಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ತಮ್ಮ ಮಾಧ್ಯಮದ ಮೂಲಕ ಈ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿಯ ಲಾಭ ಪಡೆಯುವುದನ್ನು ವಿರೋಧಿಸುವುದಾಗಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ ನಾವೂ ಕೂಡ ಮುಂಬರುವ ಕೆಲ ದಿನಗಳಲ್ಲಿ ಇದನ್ನು ಆರಂಭಿಸಲಿದ್ದೇವೆ ಎಂದು ಹೇಳಿದ್ದಾರೆ.

ತನ್ನ ವೇದಿಕೆಯಲ್ಲಿ, ಕೊರೊನಾವೈರಸ್‌ಗೆ ಸಂಬಂಧಿಸಿದ ಹುಡುಕಾಟಗಳೊಂದಿಗೆ ಪಾಪ್-ಅಪ್ ಅಥವಾ ಮಾಹಿತಿಯು ಸ್ವಯಂಚಾಲಿತವಾಗಿ ಬರಲಿದೆ ಎಂದು ಘೋಷಿಸಿದ್ದ ಫೇಸ್ ಬುಕ್, ಇದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಯಿಂದ ಹೊರಬಂದ ಅಗತ್ಯವಾದ ಸೂಚನೆಯನ್ನು ಒಳಗೊಂಡಿರಲಿದೆ ಎಂದು ಹೇಳಿತ್ತು.

ಇತರೇ ತಂತ್ರಜ್ಞಾನ ಕಂಪನಿಗಳು ಸಹ ಬೆಲೆ ಏರಿಕೆ ಮತ್ತು ಆರೋಗ್ಯ ಸಂಬಂಧಿತ ತಪ್ಪು ಮಾಹಿತಿಯನ್ನು ತಡೆಯಲು ಪ್ರಯತ್ನಿಸುತ್ತಿವೆ. ಟೆಕ್ ಕ್ರಂಚ್ ವರದಿಯ ಪ್ರಕಾರ, ಹ್ಯಾಂಡ್ ಸ್ಯಾನಿಟೈಜರ್ ಮತ್ತು ಫೇಸ್ ಮಾಸ್ಕ್ ನಂತಹ ಉತ್ಪನ್ನಗಳ ಮೇಲಿನ ಹೆಚ್ಚಿನ ಬೆಲೆಯ ಕೊಡುಗೆಗಳನ್ನು ತೆಗೆದುಹಾಕಲು ಅಮೆಜಾನ್ ಸಹ ಕಾರ್ಯನಿರ್ವಹಿಸುತ್ತಿದೆ.

ಮತ್ತೊಂದೆಡೆ, ಇಬೇ ಎನ್ 95 (ಎನ್ 95) ಮತ್ತು ಎನ್ 100 (ಎನ್ 100) ಫೇಸ್ ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್ಸ್ ಮತ್ತು ಆಲ್ಕೋಹಾಲ್ ವೈಪ್ಸ್ ಉತ್ಪನ್ನಗಳ ಪಟ್ಟಿಯನ್ನು ನಿಷೇಧಿಸಿದೆ. ಫೇಸ್ ಮಾಸ್ಕ್‌ಗೆ ಪ್ರಸ್ತುತ ವಿಶ್ವಾದ್ಯಂತ ಹೆಚ್ಚಿನ ಬೇಡಿಕೆಯಿದೆ. ಅನೇಕ ನಗರಗಳಲ್ಲಿ ಇವುಗಳನ್ನು ಬ್ಲಾಕ್ ಮಾರ್ಕೆಟ್ ನಲ್ಲಿ ಮಾರಾಟ ಮಾಡಲಾಗುತ್ತಿದೆ.

Trending News