ನವದೆಹಲಿ: Coronavirs Updates - ಪ್ರಸ್ತುತ, ಭಾರತದಲ್ಲಿ ಕರೋನಾ ವೈರಸ್‌ನ (Coronavirus) ಪರಿಸ್ಥಿತಿ ಉತ್ತಮವಾಗಿದೆ ಮತ್ತು ರೋಗಿಗಳ ಗ್ರಾಫ್ ಇಳಿಕೆಯಾಗಿದೆ, ಆದರೆ ನೆರೆಯ ಚೀನಾ ಮತ್ತು ಯುರೋಪಿನ ಕೆಲವು ದೇಶಗಳಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದೆ. ಕಳೆದ ಕೆಲವು ವಾರಗಳಲ್ಲಿ ಅಲ್ಲಿ ಕೊರೊನಾ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಭಾರತದಲ್ಲೂ ಆತಂಕಗಳು ಹೆಚ್ಚಾಗತೊಡಗಿವೆ. ಅಪಾಯದ ಹಿನ್ನೆಲೆ, ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು (ಆರೋಗ್ಯ) ಅವರಿಗೆ ಪತ್ರ ಬರೆದು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚನೆಗಳನ್ನು ನೀಡಿದ್ದಾರೆ.
Union Health Secretary Rajesh Bhushan writes to all Addl Chief Secys, Principal Secys, Secys (Health) of all States/UTs, emphasizing that there should be a continued focus on the five-fold strategy, i.e., Test-Track-Treat-Vaccination and adherence to COVID Appropriate Behavior. pic.twitter.com/XIqkvXR1fF
— ANI (@ANI) March 18, 2022
ಇದನ್ನೂ ಓದಿ-ಉತ್ತರ ಜಪಾನಿನಲ್ಲಿ 7.3 ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ
ಸಲಹೆಗಳು ಇಲ್ಲಿವೆ
ಟೆಸ್ಟ್, ಟ್ರ್ಯಾಕ್, ಟ್ರೀಟ್, ವ್ಯಾಕ್ಸಿನೇಷನ್ ಮತ್ತು ಕೋವಿಡ್ ನಿಯಮಗಳನ್ನು ಎಲ್ಲೆಡೆ ಅನುಸರಿಸುವ ಐದು ಅಂಶಗಳ ಸೂತ್ರವನ್ನು ಅನುಸರಿಸುವತ್ತ ಗಮನ ಹರಿಸುವ ಅವಶ್ಯಕತೆ ಇದೆ ಎಂದು ರಾಜೇಶ್ ಭೂಷಣ್ ತಮ್ಮ ಪತ್ರದ ಮೂಲಕ ಎಲ್ಲರಿಗೂ ತಿಳಿಸಿದ್ದಾರೆ. ಈ ಐದು ಅಂಶಗಳಲ್ಲಿ ಮೇಲೆ ಎಲ್ಲಾ ಅಧಿಕಾರಿಗಳು ಮತ್ತು ಇಲಾಖೆಗಳು ಸರಿಯಾಗಿ ಕೆಲಸ ಮಾಡಬೇಕಾಗಿದೆ ಎಂದು ಅವರು ಹೇಳಿದ್ದಾರೆ. ಹೊಸ ಅಪಾಯದ ಹಿನ್ನೆಲೆ ಜನರು ಕೂಡ ಜಾಗರೂಕರಾಗಬೇಕಿದೆ ಎಂದು ವೈದ್ಯರು ಸಹ ಹೇಳುತ್ತಿದ್ದಾರೆ.
ಈ ದೇಶಗಳಲ್ಲಿ ಪರಿಸ್ಥಿತಿ ಸರಿಯಾಗಿಲ್ಲ.
ಇದನ್ನೂ ಓದಿ-ರಷ್ಯಾಕ್ಕೆ ವಿಮಾನದ ಬಿಡಿ ಭಾಗಗಳನ್ನು ಪೂರೈಸಲು ನಿರಾಕರಿಸಿದ ಚೀನಾ
ಕೊರೊನಾ (Corona) ಚೀನಾವನ್ನು (Corona Cases In China) ಮತ್ತೊಮ್ಮೆ ಚಿಂತೆಗೀಡು ಮಾಡಿದೆ. ಕಳೆದ ಕೆಲವು ವಾರಗಳಿಂದ ಚೀನಾದಲ್ಲಿ ದಾಖಲೆಯ ಪ್ರಮಾಣದಲ್ಲಿ ಕರೋನಾ ರೋಗಿಗಳು ಪತ್ತೆಯಾಗುತ್ತಿದ್ದಾರೆ. ಮಾರ್ಚ್ 14 ರಂದು, ಚೀನಾದಲ್ಲಿ 3602 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ, ಇದು ಫೆಬ್ರವರಿ 2020ಕ್ಕಿಂತ ಅತಿ ಹೆಚ್ಚು. ಫೆಬ್ರವರಿ 20 ರಿಂದ, ಚೀನಾದಲ್ಲಿ ದೈನಂದಿನ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ 5 ದಿನಗಳ ಅಂಕಿಅಂಶಗಳನ್ನು ಗಮನಿಸಿದರೆ, ಪ್ರತಿದಿನ 1000 ಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಚೀನಾದಲ್ಲಿ, 2021 ರಲ್ಲಿ 15,248 ಕರೋನಾ ಪ್ರಕರಣಗಳು ಕಂಡುಬಂದರೆ, 2022 ರ 3 ತಿಂಗಳಲ್ಲಿ ಸೋಂಕಿತರ ಸಂಖ್ಯೆ 23 ಸಾವಿರ ಗಡಿ ದಾಟಿದೆ. ಇದೇವೇಳೆ, ಯುಕೆ ಮತ್ತು ಜರ್ಮನಿಯಲ್ಲಿಯೂ ಕೂಡ ಕರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ.
ಇದನ್ನೂ ಓದಿ-ಕೊರೊನಾ ಕುರಿತು ವಿಶ್ವ ಆರೋಗ್ಯ ಸಂಸ್ಥೆಯಿಂದ ಮಹತ್ವದ ಮಾಹಿತಿ ಬಿಡುಗಡೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.