ಮಕ್ಕಳ ಮರಣ ಪ್ರಮಾಣದ ಮೇಲೆ COVID-19 ಪರಿಣಾಮ : ಇಲ್ಲಿದೆ ಅಂಕಿ-ಅಂಶ

ಆರೋಗ್ಯ ಸೇವೆಗಳು ಮತ್ತು ಆಹಾರದ ಕೊರತೆಯು ಮಕ್ಕಳ ಮರಣ ಪ್ರಮಾಣದಲ್ಲಿ 45 ಪ್ರತಿಶತದಷ್ಟು ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಆರಂಭಿಕ ಅಂದಾಜುಗಳು ಸೂಚಿಸುತ್ತವೆ.

Last Updated : Oct 6, 2020, 02:12 PM IST
  • ಮಕ್ಕಳ ಸಾವಿನ ಪ್ರಮಾಣ ಕೋವಿಡ್ -19 ರಿಂದ ಹೆಚ್ಚಾಗುತ್ತದೆ
  • ಮಕ್ಕಳ ಮರಣ ಪ್ರಮಾಣವು 45 ಪ್ರತಿಶತದವರೆಗೆ ಹೆಚ್ಚಾಗಬಹುದು
  • ಆರೋಗ್ಯ ಸೇವೆಗಳು ಮತ್ತು ಆಹಾರದ ಕೊರತೆಯೇ ಇದಕ್ಕೆ ಪ್ರಮುಖ ಕಾರಣ
ಮಕ್ಕಳ ಮರಣ ಪ್ರಮಾಣದ ಮೇಲೆ COVID-19 ಪರಿಣಾಮ :  ಇಲ್ಲಿದೆ ಅಂಕಿ-ಅಂಶ title=
Image courtesy: AFP

ವಾಷಿಂಗ್ಟನ್: ಕರೋನಾವೈರಸ್ ಸಾಂಕ್ರಾಮಿಕ ರೋಗವು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಮಕ್ಕಳ ಸಾವಿನ ಪ್ರಮಾಣವನ್ನು ಹೆಚ್ಚಿಸಬಹುದು ಎಂಬ ಆತಂಕಕಾರಿ ಅಂಶವನ್ನು ವಿಶ್ವಬ್ಯಾಂಕ್ (World Bank) ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಸೋಮವಾರ ಬಹಿರಂಗಪಡಿಸಿದ್ದಾರೆ.

ಮುಂದಿನ ವಾರ ನಡೆಯಲಿರುವ ವಿಶ್ವಬ್ಯಾಂಕ್ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿಯ ವಾರ್ಷಿಕ ಸಭೆಯ ಮುನ್ನ ವಾಸ್ತವ ಚರ್ಚೆಯ ಸಂದರ್ಭದಲ್ಲಿ ಮೆಲ್ಪಾಸ್ ಈ ವಿಷಯ ತಿಳಿಸಿದರು. ಆರಂಭಿಕ ಅಂದಾಜುಗಳು ಆರೋಗ್ಯ ಸೇವೆಗಳು ಮತ್ತು ಆಹಾರದ ಕೊರತೆಯಿಂದಾಗಿ ಮಕ್ಕಳ ಮರಣ ಪ್ರಮಾಣವು (Child Mortality Rate)  45 ಪ್ರತಿಶತದವರೆಗೆ ಹೆಚ್ಚಾಗಬಹುದು ಎಂದು ಅವರು ಹೇಳಿದರು.

ನಿರ್ಗತಿಕ ರಾಷ್ಟ್ರಗಳ ಆರೋಗ್ಯ ಮತ್ತು ಶಿಕ್ಷಣ (Education) ಸಾಮರ್ಥ್ಯವನ್ನು ಹೆಚ್ಚಿಸಲು ವಿಶ್ವಬ್ಯಾಂಕ್ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅವರು ಹೇಳಿದರು.

ಮಕ್ಕಳ ಯಶಸ್ಸಿಗೆ ಪಾಲಕರ ಈ ನಡವಳಿಕೆ ಬಹಳ ಮುಖ್ಯ!

ಶಿಕ್ಷಣದ ಮೇಲೂ ಪರಿಣಾಮ :
ಮುಂಬರುವ ವರ್ಷಗಳಲ್ಲಿ ಮಕ್ಕಳ (Children) ಮರಣ ಹೆಚ್ಚಳಕ್ಕೆ ಸಂಬಂಧಿಸಿದಂತೆ ವಿಶ್ವ ಬ್ಯಾಂಕ್ ಈ ಅಂದಾಜುಗಳನ್ನು ಮಾಡಿದೆ ಎಂದು ಮೆಲ್ಪಾಸ್ ಹೇಳಿದ್ದಾರೆ. ಸಾಂಕ್ರಾಮಿಕ ಸಮಯದಲ್ಲಿ ಶೈಕ್ಷಣಿಕ ಆಡಳಿತದಲ್ಲಿ ಎದುರಾಗುವ ತೊಂದರೆಗಳು ಭವಿಷ್ಯದಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಪ್ರಮುಖ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ವಿಶ್ವಬ್ಯಾಂಕ್ ಅಧ್ಯಕ್ಷರು ಅಭಿಪ್ರಾಯಪಟ್ಟಿದ್ದಾರೆ.

ಯೆಮೆನ್ ಯುದ್ಧದಲ್ಲಿ 5,000 ಕ್ಕೂ ಹೆಚ್ಚು ಮಕ್ಕಳ ಸಾವು! ಯುನಿಸೆಫ್

ಕೋವಿಡ್ -19 (Covid 19) ಏಕಾಏಕಿ ಸಂಭವಿಸಿದಾಗಿನಿಂದ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ 1.6 ಶತಕೋಟಿಗೂ ಹೆಚ್ಚು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಇದರೊಂದಿಗೆ ಈ ವಿದ್ಯಾರ್ಥಿಗಳಿಂದ ಅವರ ಸಂಪೂರ್ಣ ಜೀವಿತಾವಧಿಯ ಗಳಿಕೆಯಲ್ಲಿ US $ 10 ಟ್ರಿಲಿಯನ್ ನಷ್ಟವನ್ನು ಅಂದಾಜಿಸಲಾಗಿದೆ ಎಂದವರು ವಿವರಿಸಿದರು.

Trending News