Cyclone Tauktae: 'ತೌಕ್ತೆ' ಎಂದರೆ 'ಗದ್ದಲ ಸೃಷ್ಟಿಸುವ ಹಲ್ಲಿ' ಎಂದರ್ಥ, ಇಲ್ಲಿದೆ ಚಂಡಮಾರುತಗಳಿಗೆ ಹೆಸರಿಡುವ ಪದ್ಧತಿ

Cyclone Tauktae: 'ತೌಕ್ತೆ' ಚಂಡಮಾರುತಕ್ಕೆ ಸಂಬಂಧಿಸಿದಂತೆ ದೇಶದ ನೈಋತ್ಯ ರಾಜ್ಯಗಳಲ್ಲಿ ಎಚ್ಚರಿಕೆ ನೀಡಲಾಗಿದೆ. ಈ ಚಂಡಮಾರುತಕ್ಕೆ ಮ್ಯಾನ್ಮಾರ್‌ನಿಂದ ಈ ಹೆಸರನ್ನು ಇಡಲಾಗಿದೆ.

Written by - Nitin Tabib | Last Updated : May 15, 2021, 08:21 PM IST
  • ಈ ರೀತಿ ಚಂಡಮಾರುತಗಳು ಸೃಷ್ಟಿಯಾಗುತ್ತವೆ.
  • ಈ ಚಂಡಮಾರುತಗಳು ಕೂಡ ಅಪಾರ ಹಾನಿ ಸೃಷ್ಟಿಸಿವೆ.
  • ಹೆಸರಿಡುವ ಪದ್ಧತಿ ಆರಂಭಿಸಿದ್ದು ಭಾರತ.
Cyclone Tauktae: 'ತೌಕ್ತೆ' ಎಂದರೆ 'ಗದ್ದಲ ಸೃಷ್ಟಿಸುವ ಹಲ್ಲಿ' ಎಂದರ್ಥ, ಇಲ್ಲಿದೆ ಚಂಡಮಾರುತಗಳಿಗೆ ಹೆಸರಿಡುವ ಪದ್ಧತಿ

ನವದೆಹಲಿ: Cyclone Tauktae - ದೇಶದ ನೈಋತ್ಯ ರಾಜ್ಯಗಳಲ್ಲಿ ತೌಕ್ತೆ (Cyclone Tauktae) ಚಂಡಮಾರುತಕ್ಕೆ ಸಂಬಂಧಿಸಿದಂತೆ ಹೈ ಅಲರ್ಟ್ ಜಾರಿಗೊಳಿಸಲಾಗಿದೆ. ಅರಬ್ಬಿ ಸಮುದ್ರದಲ್ಲಿ (Indian Ocean) ನಿರ್ಮಾಣಗೊಂಡ ಈ ಚಂಡಮಾರುತದ ಹಿನ್ನೆಲೆ NDRF ನ 53 ತುಕಡಿಗಳನ್ನು ಪ್ರಭಾವಕ್ಕೆ ಒಳಗಾಗುವ ರಾಜ್ಯಗಳಲ್ಲಿ ನಿಯೋಜಿಸಲಾಗಿದೆ.

ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ ಕೇರಳ, ಕರ್ನಾಟಕ, ತಮಿಳುನಾಡು, ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ತೌಕ್ತೆ ಅಪಾರ ಹಾನಿ ಸೃಷ್ಟಿಸಲಿದೆ ಎಂದು ಅಂದಾಜಿಸಿದೆ. ಇಲಾಖೆಯ ಪ್ರಕಾರ ಮೇ 17 ರಂದು ಅಪಾಯಕಾರಿ ಚಂಡಮಾರುತವಾಗಿ ಮಾರ್ಪಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಚಂಡಮಾರುತದ ಹಿನ್ನೆಲೆ ಕೇರಳ ಹಾಗೂ ತಮಿಳುನಾಡಿನಲ್ಲಿ ನೆರೆಹಾವಳಿ ಸೃಷ್ಟಿಯಾಗಲಿದೆ ಎನ್ನಲಾಗಿದೆ.

ಚಂಡಮಾರುತಗಳು ಹೇಗೆ ಸೃಷ್ಟಿಯಾಗುತ್ತವೆ
ಬಿಸಿಯಾದ ಪ್ರದೇಶಗಳ ಸಾಗರದಲ್ಲಿ ಗಾಳಿಯು ಬಿಸಿಯಾದಾಗ ಮತ್ತು ಕಡಿಮೆ ವಾಯು ಒತ್ತಡದ ಪ್ರದೇಶವನ್ನು ಸೃಷ್ಟಿಸಿದಾಗ, ಘನೀಕರಣವು ಮೋಡಗಳನ್ನು ಸೃಷ್ಟಿಸುತ್ತದೆ ಎಂದು ಹವಾಮಾನಶಾಸ್ತ್ರಜ್ಞರು ಹೇಳುತ್ತಾರೆ. ಇದರ ನಂತರ, ಖಾಲಿ ಜಾಗವನ್ನು ತುಂಬಲು ತೇವಾಂಶವುಳ್ಳ ಗಾಳಿಯು ಬೇಗನೆ ಇಳಿಯುತ್ತದೆ. ಇದು ಬಲವಾದ ಗಾಳಿಯೊಂದಿಗೆ ಚಂಡಮಾರುತಕ್ಕೆ ಕಾರಣವಾಗುತ್ತದೆ.

ಈ ಚಂಡಮಾರುತಗಳು ಕೂಡ ಅಪಾರ ಹಾನಿ ಸೃಷ್ಟಿಸಿವೆ
ತೌಕ್ತೆ ಚಂಡಮಾರುತಕ್ಕೂ ಮೊದಲು, ಸೂಪರ್ ಸೈಕ್ಲೋನ್ ಆಂಫನ್ ಅಪಾರ ಹಾನಿಯನ್ನುಂಟು ಮಾಡಿತ್ತು. ಆಂಫನ್ (Cyclone Amphan) ಮೊದಲು, ಕತ್ರಿನಾ, ನಿವಾರ್, ನಿಸರ್ಗ್, ಹುಡ್ ಹುಡ್, ಫಾನಿ, ಬುಲ್ಬುಲ್, ಹಿಕಾಕಾ, ಲ್ಯಾರಿ, ಲಿಸಾ ಮತ್ತು ಕತ್ರಿನಾ ಸಹ ಸಮುದ್ರಕ್ಕೆ ಹೊಂದಿಕೊಂಡಂತೆ ಇರುವ ದೇಶಗಳಲ್ಲಿ ಅಪಾರ ಹಾನಿ ಸೃಷ್ಟಿಸಿವೆ. ಈ ಚಂಡಮಾರುತಗಳು ಅಪಾರ ಪ್ರಾಣ ಮತ್ತು ಆಸ್ತಿಪಾಸ್ತಿ ಹಾನಿಗೆ ಕಾರಣವಾಗಿವೆ.

ಇವುಗಳಿಗೆ ಹೆಸರಿಡುವ ಪದ್ಧತಿ ಭಾರತ ಆರಂಭಿಸಿದೆ
ಚಂಡಮಾರುತದ ವಿಲಕ್ಷಣ ಹೆಸರುಗಳಿಂದ ಅನೇಕ ಜನರು ಆಶ್ಚರ್ಯಚಕಿತರಾಗುತ್ತಾರೆ. ಇದರ ಹಿಂದೆ ಒಂದು ಇತಿಹಾಸವಿದೆ. ಅಟ್ಲಾಂಟಿಕ್ ಪ್ರದೇಶದಲ್ಲಿ 1953 ರ ಒಪ್ಪಂದದೊಂದಿಗೆ ಚಂಡಮಾರುತಗಳ ಹೆಸರನ್ನು ಪ್ರಾರಂಭಿಸಲಾಯಿತು. ಆದರೆ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಈ ವ್ಯವಸ್ಥೆಯು 2004 ರಲ್ಲಿ ಪ್ರಾರಂಭವಾಯಿತು. ಭಾರತದ ಉಪಕ್ರಮದಲ್ಲಿ ಈ ಪ್ರದೇಶದ 8 ದೇಶಗಳು ಬಿರುಗಾಳಿಗಳನ್ನು ಹೆಸರಿಸಲು ಪ್ರಾರಂಭಿಸಿದವು. ಭಾರತವನ್ನು ಹೊರತುಪಡಿಸಿ, ಇದರಲ್ಲಿ ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಮಾಲ್ಡೀವ್ಸ್, ಮ್ಯಾನ್ಮಾರ್, ಓಮನ್ ಮತ್ತು ಥೈಲ್ಯಾಂಡ್ ಸೇರಿವೆ. 2018 ರಲ್ಲಿ ಯುಎಇ, ಇರಾನ್, ಕತಾರ್ ಮತ್ತು ಯೆಮೆನ್ ಸೇರಿದಂತೆ ಹಲವು ದೇಶಗಳು ಈ ಕ್ಲಬ್‌ಗೆ ಸೇರಿಕೊಂಡವು.

'ತೌಕ್ತೆ' ಹೆಸರನ್ನು ಮ್ಯಾನ್ಮಾರ್ ಇಟ್ಟಿದೆ 
ಹಿಂದೂ ಮಹಾಸಾಗರದಲ್ಲಿ ಉದ್ಭವಿಸುವ ಚಂಡಮಾರುತಗಳಿವೆ ಹೆಸರನ್ನಿಡುವ ವಿಶೇಷ ಪ್ರಕ್ರಿಯೆ ಇದೆ. ಇದರ ಅಡಿಯಲ್ಲಿ, ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚಂಡಮಾರುತದ ಸಾಧ್ಯತೆಯಿದ್ದರೆ, ಭಾರತ (India) ಸೇರಿದಂತೆ 13 ಸದಸ್ಯರು ವರ್ಣಮಾಲೆಯಂತೆ ಇದಕ್ಕೆ ವಿಶೇಷ ಹೆಸರನ್ನು ನೀಡುತ್ತಾರೆ. ಈ ಬಾರಿ ಚಂಡಮಾರುತದ ಹೆಸರನ್ನು ಸೂಚಿಸುವ ಸರದಿ ಮ್ಯಾನ್ಮಾರ್‌ ನದ್ದಾಗಿತ್ತು. ಅವರು ಈ ಚಂಡಮಾರುತಕ್ಕೆ 'ಸೈಕ್ಲೋನ್ ಟೌಕ್ಟೇ' ಎಂದು ಹೆಸರಿಟ್ಟಿದ್ದಾರೆ. ಮ್ಯಾನ್ಮಾರ್ ಪ್ರಕಾರ ಇದರ ಅರ್ಥ 'ತುಂಬಾ ಗದ್ದಲ ಸೃಷ್ಟಿಸುವ ಹಲ್ಲಿ'ಯಾಗಿದೆ.

ಇದನ್ನೂ ಓದಿ-ತೌಕ್ತೆ ಚಂಡಮಾರುತ ನಿಭಾಯಿಸಲು ಕೇಂದ್ರದಿಂದ 100 NDRF ತಂಡಗಳ ನಿಯೋಜನೆ!

ಮುಂದಿನ 25 ವರ್ಷಗಳ ಪಟ್ಟಿ ಸಿದ್ಧವಾಗಿದೆ
ಭವಿಷ್ಯದ ಚಂಡಮಾರುತಗಳ (Cyclone) ಹೆಸರನ್ನು ಸಹ ಹಿಂದೂ ಮಹಾಸಾಗರದ ಈ ದೇಶಗಳು ನಿರ್ಧರಿಸಿದೆ. ಪಟ್ಟಿಯ ಪ್ರಕಾರ, ಮ್ಯಾನ್ಮಾರ್ (Myanmar) 'ತೌಕ್ತೆ' (Cyclone Tauktae) ನಂತರ ಒಮಾನ್ ನ 'ಯಾಸ್' ಮತ್ತು ಪಾಕಿಸ್ತಾನ 'ಗುಲಾಬ್' ಹೆಸರನ್ನು ನಿರ್ಧರಿಸಿವೆ. ಅಂದರೆ, ಮುಂದೆ ಬರುವ ಚಂಡಮಾರುತದ ಹೆಸರು 'ಯಾಸ್' ಆಗಿದ್ದರೆ, ಅದರ ನಂತರ ಬರುವ ಚಂಡಮಾರುತದ ಹೆಸರು 'ಗುಲಾಬ್' ಇರಲಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ಈ ಹೆಸರುಗಳ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯನ್ನು ಮುಂದಿನ 25 ವರ್ಷಗಳವರೆಗೆ ಸಿದ್ಧಪಡಿಸಲಾಗಿದೆ.

ಇದನ್ನೂ ಓದಿ- Tauktae Cyclone Effect : ತೌಕ್ತೆ ಸೈಕ್ಲೋನ್ ಪರಿಣಾಮ ರಾಜ್ಯದ ಹಲವೆಡೆ ಭಾರೀ ಮಳೆ..!

ಭಾರತ ಇಟ್ಟಿರುವ ಚಂಡಮಾರುತದ ಹೆಸರುಗಳು ಇಲ್ಲಿವೆ
ಈ ಪಟ್ಟಿಯಲ್ಲಿ ಭಾರತ 'ತೇಜ್', 'ಗತಿ', ಮುರಾಸು (ತಮಿಳುನಾಡಿನ ವಾದ್ಯ ಯಂತ್ರ)', 'ಆಗ್','ನೀರ್', 'ಪ್ರಭಂಜನ್','ಘುರಣಿ', 'ಅಂಬುದ್', 'ಜಲಧಿ', ವೇಗ್' ಹೆಸರುಗಳನ್ನು ನೊಂದಾಯಿಸಿದೆ. ಇನ್ನೊಂದೆಡೆ ಬಾಂಗ್ಲಾದೇಶ 'ಅರ್ನಬ್', ಪಾಕಿಸ್ತಾನ 'ಲುಲು', ಕತಾರ್ 'ಶಾಹಿನ್' ಹಾಗೂ 'ಬಹಾರ್' ಹೆಸರುಗಳ ನೋಂದಣಿ ಮಾಡಿವೆ.

ಇದನ್ನೂ ಓದಿ-ಮೊದಲನೇ ಕೊರೊನಾ ಅಲೆಯ ನಂತರ ಜನ, ಮತ್ತು ಸರ್ಕಾರ ನಿರ್ಲಕ್ಷ್ಯ ತೋರಿತು- ಮೋಹನ್ ಭಾಗವತ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News