ಸತ್ತ ಮಹಿಳೆಯ ಶವ ತಿಂದುಹಾಕಿದ 20 ಬೆಕ್ಕುಗಳು, ಪೊಲೀಸರಿಗೆ ಕಾದಿತ್ತು ಶಾಕ್‌!

ಮಹಿಳೆಯೊಬ್ಬಳು ತನ್ನ ಮನೆಯಲ್ಲಿ ಸಾವನ್ನಪ್ಪಿದ ನಂತರ ಆಕೆ ಸಾಕಿದ್ದ 20 ಬೆಕ್ಕುಗಳು ಶವವನ್ನು ತಿಂದು ಹಾಕಿದ ಘಟನೆಯೊಂದು ರಷ್ಯಾದಲ್ಲಿ ನಡೆದಿದೆ. 

Written by - Chetana Devarmani | Last Updated : Jun 21, 2022, 10:32 AM IST
  • ಸತ್ತ ಮಹಿಳೆಯ ಶವ ತಿಂದುಹಾಕಿದ 20 ಬೆಕ್ಕುಗಳು
  • ಆಕೆ ಕುಸಿದು ಬಿದ್ದು ಸಾವನ್ನಪ್ಪಿ, ಎರಡು ವಾರಗಳು ಕಳೆದಿವೆ
  • ಆಕೆ ತನ್ನದೇ ಆದ 20 ಬೆಕ್ಕುಗಳನ್ನು ಹೊಂದಿದ್ದಳು
ಸತ್ತ ಮಹಿಳೆಯ ಶವ ತಿಂದುಹಾಕಿದ 20 ಬೆಕ್ಕುಗಳು, ಪೊಲೀಸರಿಗೆ ಕಾದಿತ್ತು ಶಾಕ್‌!  title=
ಬೆಕ್ಕು

ಮಹಿಳೆಯೊಬ್ಬಳು ತನ್ನ ಮನೆಯಲ್ಲಿ ಸಾವನ್ನಪ್ಪಿದ ನಂತರ ಆಕೆ ಸಾಕಿದ್ದ 20 ಬೆಕ್ಕುಗಳು ಶವವನ್ನು ತಿಂದು ಹಾಕಿದ ಘಟನೆಯೊಂದು ರಷ್ಯಾದಲ್ಲಿ ನಡೆದಿದೆ. ಹಲವು ದಿನಗಳಿಂದ ನಾಪತ್ತೆಯಾಗಿದ್ದ ತನ್ನ ಸಹೋದ್ಯೋಗಿ ನಾಪತ್ತೆಯಾದ ಬಗ್ಗೆ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರವಾಣಿಯ ಮೂಲಕ ತಿಳಿಸಿದ್ದಾರೆ. ಆ ಬಳಿಕ ತನಿಖೆ ನಡೆಸಿದ ಪೊಲೀಸರು,ಮಹಿಳೆಯ ಶವವನ್ನು ರಷ್ಯಾದ ನಗರವಾದ ಬಟಾಯ್ಸ್ಕ್‌ನಲ್ಲಿ ಕಂಡುಕೊಂಡಿದ್ದಾರೆ ಎಂದು ಸನ್ ವರದಿ ಮಾಡಿದೆ.

ಇದನ್ನೂ ಓದಿ: Shocking News: ಒಂದೇ ಕುಟುಂಬದ 9 ಜನರು ಶವವಾಗಿ ಪತ್ತೆ..!

ಆಕೆ ಕುಸಿದು ಬಿದ್ದು ಸಾವನ್ನಪ್ಪಿ, ಎರಡು ವಾರಗಳು ಕಳೆದಿವೆ ಎಂದು ನಂಬಲಾಗಿದೆ. ಮಹಿಳೆ ಬೆಕ್ಕನ್ನು ಮಾರಾಟ ಮಾಡುತ್ತಿದ್ದಳು. ಆಕೆ ತನ್ನದೇ ಆದ 20 ಬೆಕ್ಕುಗಳನ್ನು ಹೊಂದಿದ್ದಳು. ಆಕೆಯ ಸಾವಿನ ನಂತರ ಮಹಿಳೆಯ ಬೆಕ್ಕುಗಳನ್ನು ಆರೈಕೆ ಮಾಡಿದ ಪ್ರಾಣಿ ರಕ್ಷಣಾ ತಜ್ಞರು ಹೇಳಿದ ಪ್ರಕಾರ, ಬೆಕ್ಕುಗಳು ಎರಡು ವಾರಗಳ ಕಾಲ ಒಂಟಿಯಾಗಿದ್ದವು. ತಿನ್ನಲು ಏನೂ ಆಹಾರವಿಲ್ಲ. ಈ ವೇಳೆ ಹಸಿವು ತಡೆಯದೇ ಇನ್ನೇನು ತಿನ್ನಬೇಕು? ಅದಕ್ಕಾಗಿ ಅವು ಈ ರೀತಿಯ ಕೆಲ ಮಾಡಿವೆ.

ಕೆಲವು ಆರೋಗ್ಯಕರ ಬೆಕ್ಕುಗಳನ್ನು ಈಗ ಬೇರೆ ಅವರಿಗೆ ದತ್ತು ನೀಡಲಾಗಿದೆ. ಮೈನೆ ಕೂನ್ ತಳಿಯ ಬೆಕ್ಕುಗಳು ಅಮೆರಿಕದ ಮೈನೆ ರಾಜ್ಯದಲ್ಲಿ ಹುಟ್ಟಿಕೊಂಡ ದೊಡ್ಡ ದೇಶೀಯ ತಳಿಯಾಗಿದೆ. ಅವುಗಳು ತಮ್ಮ ಸ್ನಾಯುವಿನ ರಚನೆ ಮತ್ತು ಸಾಮಾಜಿಕ ವ್ಯಕ್ತಿತ್ವಕ್ಕೆ ಹೆಸರುವಾಸಿಯಾಗಿವೆ.

ಬೆಕ್ಕಿನ ಮಾಲೀಕರು ಇಂತಹ ಭಯಾನಕ ರೀತಿಯಲ್ಲಿ ಸಾವನ್ನಪ್ಪಿರುವುದು ಇದೇ ಮೊದಲಲ್ಲ. ಈ ಹಿಂದೆ ಹ್ಯಾಂಪ್‌ಶೈರ್ ಮಹಿಳೆಯೊಬ್ಬಳು ಎರಡು ತಿಂಗಳ ಕಾಲ ಆಕೆಯ ಮೃತ ದೇಹವು ಪತ್ತೆಯಾಗದ ನಂತರ ಅವಳ ಸ್ವಂತ ಬೆಕ್ಕುಗಳಿಂದ ಅರ್ಧದಷ್ಟು ತಿನ್ನಲ್ಪಟ್ಟಿರುವುದು ಕಂಡುಬಂದಿತ್ತು.

ಇದನ್ನೂ ಓದಿ: ಮತ್ತೆ ದುಬಾರಿಯಾದ ಚಿನ್ನ, ಬೆಳ್ಳಿ - ಖರೀದಿಗೂ ಮುನ್ನ ತಿಳಿದುಕೊಳ್ಳಿ ಇಂದಿನ ಬೆಲೆ

ಜಾನೆಟ್ ವೀಲ್ ಅವರ ಶವವು ಆಕೆಯ ಮನೆಯ ಅಡುಗೆಮನೆಯಲ್ಲಿ, ಅವಳು ಸತ್ತ ಎರಡು ತಿಂಗಳ ನಂತರ, ಸತ್ತ ಮತ್ತು ಜೀವಂತವಾಗಿರುವ ಬೆಕ್ಕುಗಳು ಮತ್ತು ನಾಯಿಗಳೊಂದಿಗೆ ಪತ್ತೆಯಾಗಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News