ವಾಟ್ಸ್ ಆ್ಯಪ್‌ ನ ಈ ಹೊಸ ವೈಶಿಷ್ಟ್ಯಗಳು ನಿಮಗೂ ತಿಳಿದಿರಲಿ

ವಾಟ್ಸ್ ಆ್ಯಪ್‌ ಡಾರ್ಕ್ ಥೀಮ್ ಬೂದು ಬಣ್ಣದ ಪರದೆ ಹೊಂದಿದ್ದು, ಬಿಳಿ ಬಣ್ಣದ ಅಕ್ಷರಗಳನ್ನು ಹೊಂದಿದೆ. ಲೈಟ್ ಥೀಮ್ ಮೂಲಭೂತವಾಗಿ ಡಾರ್ಕ್ ಥೀಮನ್ ಹಗುರ ಆವೃತ್ತಿಯಾಗಿದೆ. ಬಳಕೆದಾರರು ತಮ್ಮ ಆದ್ಯತೆಗಳಿಗೆ ಅನುಗುಣವಾಗಿ ಈ ಎರಡೂ ಥೀಮ್ ಗಳನ್ನು ಬಳಸಬಹುದಾಗಿದೆ.

Last Updated : Dec 6, 2019, 11:25 AM IST
ವಾಟ್ಸ್ ಆ್ಯಪ್‌ ನ ಈ ಹೊಸ ವೈಶಿಷ್ಟ್ಯಗಳು ನಿಮಗೂ ತಿಳಿದಿರಲಿ title=

ಸ್ಯಾನ್ ಫ್ರಾನ್ಸಿಸ್ಕೊ:ಪ್ರಪಂಚದ ಖ್ಯಾತ ಮೆಸ್ಸೆಂಜರ್ ಆ್ಯಪ್‌ ವಾಟ್ಸ್ ಆ್ಯಪ್‌ ದೀರ್ಘಕಾಲದಿಂದ ತನ್ನ ಡಾರ್ಕ್ ಮೋಡ್ ಗಾಗಿ ಸುದ್ದಿಯಲ್ಲಿದ್ದು, ಇತ್ತೀಚೆಗಷ್ಟೇ ಸಂಸ್ಥೆ ಬಿಡುಗಡೆಗೊಳಿಸಿರುವ 2.19.353 ಬೀಟಾ ಆವೃತ್ತಿ ಕೆಲ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಈ ಹೊಸ ವೈಶಿಷ್ಟ್ಯದ ಪ್ರಕಾರ ಡಾರ್ಕ್ ಮೋಡ್ ಅನ್ನು ಸಕ್ರೀಯಗೊಳಿಸಲು ಮೂರು ಒಪ್ಶನ್ ಗಳನ್ನು ಒದಗಿಸಲಾಗಿದೆ. ಲೈಟ್ ಥೀಮ್ ಹೆಸರಿನ ಮೊದಲ ಆಯ್ಕೆ ಶ್ವೇತ ಬಣ್ಣದ ಪರದೆ ಹೊಂದಿದೆ. ಹೆಸರೇ ಸೂಚಿಸುವಂತೆ ಡಾರ್ಕ್ ಥೀಮ್ ಕಪ್ಪು ಬಣ್ಣದ ಪರದೆ ಹೊಂದಿದೆ. ಈ ಕುರಿತು ವಾಟ್ಸ್ ಆಪ್ ನವೀಕರಣಗಳನ್ನು ಟ್ರ್ಯಾಕ್ ಮಾಡುವ ವೆಬ್ ಸೈಟ್ WABetaInfo ವರದಿ ಪ್ರಕಟಿಸಿದೆ.

ಈ ಎರಡೂ ಆಯ್ಕೆಗಳ ಜೊತೆಗೆ ಮೇಲೆ ಸೂಚಿಸಿರುವ ಬೀಟಾ ಆವೃತ್ತಿಯಲ್ಲಿ ' ಬ್ಯಾಟರಿ ಸೇವರ್' ಆಯ್ಕೆಯನ್ನೂ ಸಹ ಸೇರಿಸಲಾಗಿದೆ. ಇದು ನಿಮ್ಮ ಸ್ಮಾರ್ಟ್ ಫೋನ್ ಬ್ಯಾಟರಿ ಚಾರ್ಜಿಂಗ್ ನಿಗದಿತ ಮಟ್ಟಕ್ಕಿಂತ ಕೆಳಗೆ ಜಾರಿದರೆ ಸ್ವಯಂ ಸಕ್ರೀಯಗೊಳ್ಳುತ್ತದೆ ಎನ್ನಲಾಗಿದೆ. ಆದರೆ, ಇದಕ್ಕಾಗಿ ನಿಮ್ಮ ಬಳಿ Android 9.0 ಅಥವಾ ಅದಕ್ಕಿಂತ ಹಳೆ ಆವೃತ್ತಿಯ ಸ್ಮಾರ್ಟ್ ಫೋನ್ ಹೊಂದಿರಬೇಕು.

ವಾಟ್ಸ್ ಆ್ಯಪ್‌ ಡಾರ್ಕ್ ಥೀಮ್ ಬೂದು ಬಣ್ಣದ ಪರದೆ ಹೊಂದಿದ್ದು, ಬಿಳಿ ಬಣ್ಣದ ಅಕ್ಷರಗಳನ್ನು ಹೊಂದಿದೆ. ಲೈಟ್ ಥೀಮ್ ಮೂಲಭೂತವಾಗಿ ಡಾರ್ಕ್ ಥೀಮನ್ ಹಗುರ ಆವೃತ್ತಿಯಾಗಿದೆ. ಬಳಕೆದಾರರು ತಮ್ಮ ಆದ್ಯತೆಗಳಿಗೆ ಅನುಗುಣವಾಗಿ ಈ ಎರಡೂ ಥೀಮ್ ಗಳನ್ನು ಬಳಸಬಹುದಾಗಿದೆ.

ಇತ್ತೀಚೆಗಷ್ಟೇ ವಾಟ್ಸ್ ಆಪ್ ಅಂಡ್ರಾಯಿಡ್ ಡಿವೈಸ್ ಗಳಿಗಾಗಿ ವಾಟ್ಸ್ ಆ್ಯಪ್‌ 2.19.348 ಆವೃತ್ತಿಯನ್ನು ಬಿಡುಗಡೆಗೊಳಿಸಿದ್ದು, ಈ ಆವೃತ್ತಿಯಲ್ಲಿ ನೀವು ಸ್ವಯಂ ವಿನಾಶಕಾರಿ 'ಸಂದೇಶ ಅಳಿಸು' (Delete Message) ವೈಶಿಷ್ಟ್ಯವನ್ನು ಕಾಣಬಹುದಾಗಿದೆ. ಇದು ಒಂದು ವೇಳೆ ಜಾರಿಗೆ ಬಂದರೆ ವಾಟ್ಸ್ ಆ್ಯಪ್‌ ನಲ್ಲಿ ನೀವು 'toggle on/of' ಬಟನ್ ಮೂಲಕ ಇದನ್ನು ಬಳಸಬಹುದು. ಅಷ್ಟೇ ಅಲ್ಲ ಎಷ್ಟು ಸಮಯದ ಬಳಿಕ ನಿಮ್ಮ ಸಂದೇಶ 'ಸೆಲ್ಫ್ ಡಿಲೀಟ್' ಆಗಬೇಕು ಎಂಬುದನ್ನು ಸಹ ನೀವು ಆಯ್ಕೆಮಾಡಿಕೊಳ್ಳಬಹುದು.

WABetaInfo ನಲ್ಲಿ ಪ್ರಕಟಗೊಂಡ ಮಾಹಿತಿ ಪ್ರಕಾರ, ಮೊದಲ ಹಂತದಲ್ಲಿ ಈ ವೈಶಿಷ್ಟ್ಯಗಳು ಕೇವಲ ಗ್ರೂಪ್ ಚಾಟ್ ಗಾಗಿ ಮಾತ್ರ ಸೀಮಿತವಾಗಿದ್ದು, ಗ್ರೂಪ್ ಅಡ್ಮಿನ್ ಗಳು ಮಾತ್ರ ನಿರ್ವಹಿಸಬಹುದಾಗಿದೆ.

Trending News