Facebook ನಿಂದ ಉಚಿತ Internet, ಬರಲಿದೆ ಹೊಸ ಆ್ಯಪ್, ಹೇಗೆ ಕಾರ್ಯನಿರ್ವಹಿಸಲಿದೆ?

ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಸಂಬಂಧಿಸಿದ ಫೇಸ್‌ಬುಕ್  ಹೊಸ ಆ್ಯಪ್ ಅನ್ನು ಪರೀಕ್ಷಿಸುತ್ತಿದೆ. 'ಡಿಸ್ಕವರ್' ಹೆಸರಿನ ಈ ಅಪ್ಲಿಕೇಶನ್‌ ಮೂಲಕ ಕಂಪನಿಯು ಉಚಿತ ಬ್ರೌಸಿಂಗ್ ಡೇಟಾ ನೀಡಲಿದೆ. 

Last Updated : May 7, 2020, 07:24 PM IST
Facebook ನಿಂದ ಉಚಿತ Internet, ಬರಲಿದೆ ಹೊಸ ಆ್ಯಪ್, ಹೇಗೆ ಕಾರ್ಯನಿರ್ವಹಿಸಲಿದೆ? title=

ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಸಂಬಂಧಿಸಿದ ಫೇಸ್‌ಬುಕ್  ಹೊಸ ಆ್ಯಪ್ ಅನ್ನು ಪರೀಕ್ಷಿಸುತ್ತಿದೆ. 'ಡಿಸ್ಕವರ್' ಹೆಸರಿನ ಈ ಅಪ್ಲಿಕೇಶನ್‌ ಮೂಲಕ ಕಂಪನಿಯು ಉಚಿತ ಬ್ರೌಸಿಂಗ್ ಡೇಟಾ ನೀಡಲಿದೆ. ಇದಕ್ಕಾಗಿ ಫೇಸ್‌ಬುಕ್ ಸ್ಥಳೀಯ ಟೆಲಿಕಾಂ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಿದೆ.

ಫೇಸ್‌ಬುಕ್ ಸದ್ಯ ಪೆರುವಿನಲ್ಲಿ ಡಿಸ್ಕವರ್ ಅಪ್ಲಿಕೇಶನ್‌ನ ಮೊದಲ ಪ್ರಯೋಗಆರಂಭಿಸಿದ್ದು, ಮುಂಬರುವ ದಿನಗಳಲ್ಲಿ  ಕಂಪನಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಲಿದೆ ಮತ್ತು ಭವಿಷ್ಯದಲ್ಲಿ ಥೈಲ್ಯಾಂಡ್, ಇರಾಕ್ ಮತ್ತು ಫಿಲಿಪೈನ್ಸ್‌ನಂತಹ ದೇಶಗಳಲ್ಲಿ ಇದನ್ನು ಆರಂಭಿಸಲಿದೆ.

ಈ ಅಪ್ಲಿಕೇಶನ್ ಅಡಿಯಲ್ಲಿ, ಬಳಕೆದಾರರು ಮೊಬೈಲ್ ಕಂಪನಿ ವತಿಯಿಂದ  ಪ್ರತಿದಿನ ಉಚಿತ ಡೇಟಾ ಸಿಗಲಿದ್ದು, ಈ ಕುರಿತಾದ ಮಾಹಿತಿಯನ್ನು ನೋಟಿಫಿಕೇಶನ್ ಮೂಲಕ ನೀಡಲಾಗುವುದು. ಭಾರತದಲ್ಲಿ ನಿಷೇಧಿಸಲ್ಪಟ್ಟ ಫ್ರೀ ಬೇಸಿಕ್ಸ್ ನಂತೆ ಡಿಸ್ಕವರ್ ಆಪ್ ವೆಬ್‌ಸೈಟ್‌ಗಳಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡುವುದಿಲ್ಲ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಫೇಸ್‌ಬುಕ್‌ನ ಉಚಿತ ಡೇಟಾ ಸ್ಪೀಡಿ ಕಡಿಮೆಯಾಗಿರಲಿದ್ದು, ಬಳಕೆದಾರರು ಯಾವುದೇ ವೆಬ್‌ಸೈಟ್‌ನ ಪಠ್ಯವನ್ನು ಮಾತ್ರ ಲೋಡ್ ಮಾಡಬಹುದು, ಇದರಲ್ಲಿ ವೀಡಿಯೊಗಳು ಪ್ಲೇ ಆಗುವುದಿಲ್ಲ.

ಕೆಲವು ವರ್ಷಗಳ ಹಿಂದೆ ಫೇಸ್‌ಬುಕ್ ಉಚಿತ ಫ್ರೀ ಬೇಸಿಕ್ಸ್ ಘೋಷಿಸಿತ್ತು ಎಂಬುದು ಇಲ್ಲಿ ಗಮನಾರ್ಹ. ಇದರ ಅಡಿಯಲ್ಲಿ, ಯಾವುದೇ ಹಣವನ್ನು ಪಾವತಿಸದೆ ಕೆಲವು ವೆಬ್‌ಸೈಟ್‌ಗಳನ್ನು ತೆರೆಯಲು ಇಂಟರ್ನೆಟ್ ನೀಡುವುದಾಗಿ ಫೇಸ್‌ಬುಕ್ ಹೇಳಿತ್ತು. ಅಂದರೆ, ಕೆಲವು ಆಯ್ದ ಸುದ್ದಿಗಳು, ಫೇಸ್‌ಬುಕ್ ಹಾಗೂ ಮೆಸೆಂಜರ್ ಸೇರಿದಂತೆ ಇತರೆ ಕಂಟೆಂಟ್ ಅನ್ನು ಫ್ರೀ ಬೇಸಿಕ್ಸ್ ಅಡಿಯಲ್ಲಿ ನೀವು ಎಕ್ಸಸ್ ಮಾಡಬಹುದಾಗಿತ್ತು.

ಹಲವು ದೇಶಗಳಲ್ಲಿ ಇದು ನೆಟ್ ನ್ಯೂಟ್ರಾಲಿಟಿಗೆ ವಿರುದ್ಧವಾಗಿದೆ ಎಂದು ಹೇಳಿ ನಿಷೇಧಿಸಲ್ಪಟ್ಟಿತು. 2016ರಲ್ಲಿ ಭಾರತದಲ್ಲಿಯೂ ಕೂಡ ಇದಕ್ಕೆ ವಿರೋಧ ಸಾಕಷ್ಟು ವಿರೋಧ ವ್ಯಕ್ತವಾಗಿ ನಿಷೇಧಕ್ಕೆ ಒಳಗಾಗಿತ್ತು. ಆದರೆ, Discover ವಿಷಯದಲ್ಲಿ ಹಾಗಿಲ್ಲ.  ಈ ಆಪ್ ಯಾವುದೇ ವೆಬ್ಸೈಟ್ ನಲ್ಲಿ ತಾರತಮ್ಯ ಎಸಗುವುದಿಲ್ಲ ಎನ್ನಲಾಗಿದೆ.

ಡಿಸ್ಕವರ್ ಅಪ್ಲಿಕೇಶನ್ ಬಳಸಲು ನಿಮಗೆ ಫೇಸ್‌ಬುಕ್ ಖಾತೆಯ ಅಗತ್ಯವಿಲ್ಲ ಎಂದು ಸಂಸ್ಥೆ ಹೇಳಿಕೊಂಡಿದೆ. ಗೌಪ್ಯತೆಗೆ ಸಂಬಂಧಿಸಿದಂತೆ, ಕಂಪನಿಯು ಬಳಕೆದಾರರ ಯಾವುದೇ ರೀತಿಯ ಬ್ರೌಸಿಂಗ್ ಇತಿಹಾಸವನ್ನು ಸಂಗ್ರಹಿಸುವುದಿಲ್ಲ ಎಂದು ಕಂಪನಿ ಹೇಳಿದೆ.

ಫೇಸ್‌ಬುಕ್ ಪ್ರಕಾರ, ಫೇಸ್‌ಬುಕ್ ಜಾಹೀರಾತುಗಳಿಗಾಗಿ  ಡಿಸ್ಕವರ್ ಬಳಕೆದಾರರ ಚಟುವಟಿಕೆಯನ್ನು ಸಹ ಸಂಗ್ರಹಿಸುವುದಿಲ್ಲ ಎಂದಿದೆ. ಭಾರತದಲ್ಲಿ  ಡಿಸ್ಕವರ್ ಆಪ್ ಗಾಗಿ ಕಂಪನಿಯ ಯೋಜನೆ ಏನು? ಎಂಬುದರ ಕುರಿತು ಇನ್ನೂ ಸ್ಪಷ್ಟವಾಗಿಲ್ಲ.

Trending News